Thursday, 8 October 2015

ಸ್ಟೂಡೆಂಟ್ಸ್ - ಟೀಚರ್ಸ್

ಬುಕ್ಕು ಪೆನ್ನು ಸ್ಟೂಡೆಂಟ್ಸ್ ಕೈಯಲ್ಲಿ
ಜೇಡಿ ಮಣ್ಣು ಟೀಚರ್ಸ್ ತಲೆಯಲ್ಲಿ
ಪಾಠ ಮಾಡಬೇಡಿ ಸ್ವಲ್ಪ ತಡೀರಿ
ಕ್ಲಾಸ್ ರೂಮಿಂದ ಹೊರಗೆ ನಡೀರಿ

ಒಳ್ಳೆ ಟೀಚರ್ ಬಂದ್ರು ಅಂದ್ರೆ
ಕತ್ತೆ ಕೂಡ ಪಾಸಾಗುವುದು
ಸತ್ತರೂನು ಬರೋದಿಲ್ಲ ಅಂತ ಟೀಚರು
ನಾವೇ ಓದ್ಕೊಬೇಕು ತಟ್ಕೊಂಡು ಇವರ ಟಾರ್ಚರು

ಒಳ್ಳೆ ಟೀಚರ್ ಬರ್ತಾರೆ ಅನ್ನೋ ನಂಬಿಕೆ ಇಟ್ಕೊಂಡು
ಹೋಗಿ ಸೇರಬೇಕು ಕ್ಲಾಸ್’ರೂಂ ಎಂಬ ಸುಡುಗಾಡು
ಒಳಗ್ಹೋಗಬೇಡಿ ಅಷ್ಟುಬೇಗ ಸ್ವಲ್ಪ ತಡೀರಿ
ಫ್ರೆಂಡ್ಸ್’ಗೆ ಹೇಳಿ ಪ್ರಾಕ್ಸಿ ಹೋಡೀರಿ

ಯಾವ ಟಾಪಿಕ್ ಅರ್ಥ ಆಯ್ತು
ಯಾವ್ದು ಅರ್ಥ ಆಗ್ದೆ ಹೋಯ್ತು
ಹೇಳುವುದು ಹೇಗೆ ಜ್ಞಾಪಕ ಮಾಡಿಕೊಂಡು
ಸುಮ್ನೆ ಓದಬೇಕು ಎಲ್ಲವನ್ನು ಮುಚ್ಕೊಂಡು

ಎಕ್ಸಾಮ್ಗೆ ಮಾತ್ರ ಓದೋದು ನಾವು
ಹೆದ್ರೋದಿಲ್ಲ ಹತ್ತಿಪ್ಪತ್ತು ಮಾರ್ಕ್ಸ್ ಕಳ್ಕೊಂಡ್ರು
ಫೇಲು ಬ್ಯಾಕು ಆದ್ರೆ ಆಗ್ಲಿ ಬಿಡಿ
ದೇವ್ರಿದಾನೆ ಸಪ್ಲಿಮೆಂಟ್ರಿ ಕಟ್ಟಿಬಿಡಿ

Tuesday, 29 September 2015

ಒಂಥರದ ಆಸೆ

ಅದೇನೋ ಒಂಥರದ ಆಸೆ
ಬದಲಾಗುತಿದೆ ನನ್ನ ವರಸೆ
ಹೇಳಲು ಒದ್ದಾಡುತಿದೆ ಮನಸು
ಹಗಲಲ್ಲೂ ಬೀಳುತಿದೆ ಕನಸು

ಹಗಲೆಲ್ಲ ಇರುಳಂತಾಗಿ
ತಣ್ಣನೆ ಗಾಳಿಗೆ ತಲೆದೂಗಿ
ಮನಸು ನಿನ್ನನೇ ಕೂಗಿ
ಹಾಡಿದೆ ಕೋಗಿಲೆಯಾಗಿ

ಈ ಪ್ರೀತಿಯ ಹಾಡನು ಕೇಳಿ
ಆ ಚಂದಿರ ಬಂದು ನನ್ನ ಬಳಿ
ಕೇಳಿದ… ಯಾರು ಆ ಬೆಡಗಿ?
ತೋರಲು ನಿನ್ನ… ನೋಡುತ ನಿಂತ ಬೆರಗಾಗಿ

ಕಣ್ಣೆರೆಡು ಸಾಲದು ನಿನ್ನಂದ ನೋಡಲು
ನಾನಾಗಬಾರದಿತ್ತೆ ನೂರು ಕಣ್ಣ ನವಿಲು
ನಿನ್ನ ಸೊಬಗ ಕಂಡು ನಾಚಿದೆ ಕಾಮನಬಿಲ್ಲು
ಇನ್ನೆಷ್ಟು ವರ್ಣಿಸಲಿ ಮುಗಿದಿವೆ ಪದಗಳು

Tuesday, 15 September 2015

ಇವರು ನಮ್ಮ ದೇಶದ ಹೆಣ್ಮಕ್ಳೇನಾ?

ಚೂರೂ ಇಲ್ಲ ನಾಚಿಕೆ ಮಾನ
ಇವರು ಬಿಟ್ಟಿದ್ದಾರೆ ಎಲ್ಲವನ್ನ
ಕೇಳೋದೇ ಇಲ್ಲ ಒಳ್ಳೆಯದನ್ನ
ಮಾಡೋದು ಬರೀ ಅನಾಚಾರವನ್ನ

ಆಡೋದಿಲ್ಲ ಒಂದೂ ಒಳ್ಳೇ ಮಾತನ್ನ
ಸ್ವಲ್ಪವೂ ಇಲ್ಲ ತಾಳ್ಮೆ ಸಮಾಧಾನ
ಇವರು ಕಲಿಯೋಲ್ಲ ಬದುಕೊದನ್ನ
ಬದಲಾಯಿಸಲು ಆಗಲ್ಲ ಇವರನ್ನ

ಮೂಗ್ಮೇಲೇ ಹಿಡ್ಕೋಂಡಿರ್ತಾರೆ ಕೋಪಾನಾ
ತುಂಬಾ ಚೆನ್ನಾಗಿ ಮಾಡ್ತಾರೆ ನಾಟಕಾನಾ
ಮುಖದ ತುಂಬಾ ಹಚ್ಕೋತಾರೆ ಬಣ್ಣಾನ
ಮಾತಲ್ಲೇ ಮಾಡ್ತಾರೆ ಎಲ್ರಿಗು ಮೋಡಿನಾ

ಇವರಿಂದ ಕಲಿಬೇಕು ಹೇಳೋದು ಸುಳ್ಳನ್ನ
ನಂಬಿಂದ್ರೆ ಅಲ್ಲಿಗೆ ಮುಗಿಯಿತು ನಮ್ ಜೀವ್ನ
ಬಂಡೆಗೆ ಹೋಗಿ ಚಚ್ಕೋಬೇಕು ತಲೆಯನ್ನ
ಬಿಟ್ರೆ ತಕ್ಕೋತಾರೆ ಹೆಣದ ಮುಂದೆ Selfieನ

ಮಾಡೋದು ಬರೀ ಬಿಟ್ಟಿ ಶೋಕೀನ
ದುಡ್ಡು ಅಂದ್ರೆ ಬಿಡ್ತಾರೆ ದೊಡ್ಡದಾಗಿ ಬಾಯನ್ನ
ಇವರದು ಒಂದು ಜೀವನಾನ?
ದೇವ್ರೇ ಹೇಳ್ಬೇಕು ಈ ಪ್ರಶ್ನೆಗೆ ಉತ್ತರಾನ

ರೂಢಿಸಿಕೊಂಡಿದ್ದಾರೆ ಕೆಟ್ಟ Natureನ
ಮರೆತು ಬಿಟ್ಟಿದ್ದಾರೆ ನಮ್ಮ Cultureನ
ಇವರು ನಮ್ಮ ದೇಶದ ಹೆಣ್ಮಕ್ಳೇನಾ?
ಹೇಗೆ ಕೊಡೋದು ಇವರಿಗೆ Respect’ನ?