ಭಾರತ ಚಿತ್ರರಂಗ
ಕಂಡ ಅತ್ಯದ್ಭುತ ನಟ ಅಮಿತಾಭ್ ಬಚ್ಚನ್. ಕೇವಲ ನಟನೆಯಿಂದ ಮಾತ್ರವಲ್ಲ ತಮ್ಮ ನಡೆ-ನುಡಿ ಮತ್ತು ಸಾಮಾಜಿಕ
ಕಳಕಳಿಯಿಂದಲೂ ಸಹ ಸಾಕಷ್ಟು ಜನರಿಗೆ ಇಂದಿಗೂ ಸ್ಪೂರ್ತಿಯಾಗಿದ್ದಾರೆ. ಅಮಿತಾಭ್ ಅನ್ನೋ ಹೆಸರು ಕೇಳಿದರೆ
ಏನೋ ಒಂದು ರೀತಿಯ ರೋಮಾಂಚನ ಮತ್ತು ಯಾವುದೋ ಸ್ಪೂರ್ತಿ ನಮ್ಮನ್ನು ಉತ್ಸಾಹಿಗಳನ್ನಾಗಿ ಮಾಡುತ್ತದೆ.
ಇಂಥಾ ಮಹಾನ್ ವ್ಯಕ್ತಿಯ ಬಗ್ಗೆ ಯಾರಿಗೂ ಹೆಚ್ಚು ಹೇಳಬೇಕಿಲ್ಲ. ಭಾರತದ ಚಿತ್ರರಂಗದ ಬಗ್ಗೆ ತಿಳಿದಿರುವ
ಪ್ರತಿಯೊಬ್ಬರಿಗೂ ಅಮಿತಾಭ್ ಚಿರಪರಿಚಿತ. ವಯಸ್ಸಿನ ಬೇಧ-ಭಾವವಿಲ್ಲದೆ ಎಲ್ಲಾ ರೀತಿಯ ಪ್ರೇಕ್ಷಕ ವರ್ಗವನ್ನು
ಹೊಂದಿರುವ ನಟ ಅಮಿತಾಭ್. ವಯಸ್ಸು ದೇಹಕ್ಕೆ ಆಗುವುದೇ ಹೊರತು ಮನಸ್ಸಿಗಲ್ಲ ಎಂಬುದನ್ನು ಇವರನ್ನು ನೋಡೇ
ಹೇಳಿರಬೇಕು. 71 ವಸಂತ ಕಳೆದರೂ ಬತ್ತದ ಉತ್ಸಾಹ, ಮುಖದಲ್ಲಿ ಬಾಡದ ಮಂದಹಾಸ ಮತ್ತು ಕೆಲಸದ ಮೇಲಿನ ಶ್ರದ್ಧೆ-ಆಸಕ್ತಿ
ಎಂತಹವರನ್ನೂ ಸಹ ನಾಚುವಂತೆ ಮಾಡುತ್ತದೆ. ಇಂಥಾ ಅದ್ಭುತ ನಟ ಇಂದು 72ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.
ಅವರು ಹೊಂದಿರುವ ಕೋಟ್ಯಾಂತರ ಅಭಿಮಾನಿಗಳಲ್ಲಿ ನಾನೂ ಕೂಡ ಒಬ್ಬ. ಅವರ ಹುಟ್ಟುಹಬ್ಬ ಅಂದರೆ ಅಭಿಮಾನಿಗಳಾದ
ನಮಗೆ ಒಂದು ರೀತಿಯ ಹಬ್ಬ. ಅವರ ಹುಟ್ಟುಹಬ್ಬವನ್ನು ಒಬ್ಬೊಬ್ಬ ಅಭಿಮಾನಿಯೂ ಒಂದು ರೀತಿ ಆಚರಿಸುತ್ತಾರೆ.
ಅದೇ ರೀತಿ ನಾನೂ ಕೂಡ ಅವರ ಬಗ್ಗೆ ಗೊತ್ತಿಲ್ಲದ ಕೆಲವು ಸಂಗತಿಗಳನ್ನು ಇಲ್ಲಿ ಬರೆದು ಪ್ರಕಟಿಸುವ ಮೂಲಕ
ಈ ವರ್ಷದ ಅವರ ಹುಟ್ಟುಹಬ್ಬವನ್ನು ಆಚರಿಸಲು ಇಚ್ಛಿಸಿದ್ದೇನೆ.
ಅಮಿತಾಭ್'ರ ಜೀವನದ ಅತ್ಯಾಶ್ಚರ್ಯಕರ ಸಂಗತಿಗಳು:
ಅಮಿತಾಭ್'ರ ಜೀವನದ ಅತ್ಯಾಶ್ಚರ್ಯಕರ ಸಂಗತಿಗಳು:
1) ಅಮಿತಾಭ್ ಬಚ್ಚನ್
ತಮ್ಮ ಎರಡೂ ಕೈಗಳಿಂದ ಸರಾಗವಾಗಿ ಬರೆಯಬಲ್ಲರು.
2) ಇವರ ತಂದೆ ಮೊದಲು
ಇವರಿಗೆ "ಇಂಕಿಲಾಬ್"(ಕ್ರಾಂತಿಕಾರಿ) ಎಂಬ ಹೆಸರನ್ನಿಡಲು ಇಚ್ಛಿಸಿದ್ದರು. ಆದರೆ ನಂತರ
"ಅಮಿತಾಭ್"(ಅನಿಯಮಿತ ಕಾಂತಿ) ಎಂದು ನಾಮಕರಣ ಮಾಡಿದರು.
3) ಅಮಿತಾಭ್ ತಾವು
ಇಂಜಿನಿಯರ್ ಆಗಬೇಕೆಂದು ಬಯಸಿದ್ದರು. ಹಾಗೆಯೇ ಭಾರತೀಯ ವಾಯು ಸೇನೆಯನ್ನು ಸೇರಬೇಕೆಂದು ಆಲೋಚಿಸಿದ್ದರು.
4) ತಮ್ಮ ವೃತ್ತಿ
ಜೀವನದ ಹೋರಾಟದ ದಿನಗಳಲ್ಲಿ ಅಮಿತಾಭ್ ಅವರು ಮುಂಬೈನ ಮರೈನ್ ಡ್ರೈವ್'ನ ಬೆಂಚ್'ಗಳ ಮೇಲೆ ಹಲವು ರಾತ್ರಿಗಳನ್ನು
ಕಳೆದಿದ್ದರು.
5) "ಖುದಾ
ಗವಾಹ್" ಚಿತ್ರದ ಚಿತ್ರಿಕರಣಕ್ಕಾಗಿ ಅಫ್ಘಾನಿಸ್ತಾನಕ್ಕೆ ತೆರಳಿದ್ದಾಗ ಅಲ್ಲಿನ ಆಗಿನ ಅಧ್ಯಕ್ಷರು
ತಮ್ಮ ದೇಶದ ಅರ್ಧ ವಾಯುಸೇನೆಯನ್ನು ಅಮಿತಾಭ್ ಅವರ ರಕ್ಷಣೆಗೆ ಕಳುಹಿಸಿಕೊಟ್ಟಿದ್ದರು.
6) "ಖುದಾ
ಗವಾಹ್" ಚಿತ್ರವು ಅಫ್ಘಾನಿಸ್ತಾನದ ಇತಿಹಾಸದಲ್ಲೇ ಅತಿಹೆಚ್ಚು ನೋಡಲ್ಪಟ್ಟ ಭಾರತೀಯ ಚಿತ್ರ.
7) ಅಮಿತಾಭ್ ಅವರ
ನೆನಪಿನ ಶಕ್ತಿ ತುಂಬಾ ಅಗಾಧವಾದದ್ದು. ತಮ್ಮ ಆತ್ಮೀಯರ ಹುಟ್ಟುಹಬ್ಬದಂದು ಅವರು ತಪ್ಪದೇ ಪ್ರತಿವರ್ಷವೂ
ಶುಭಾಷಯಗಳನ್ನು ತಿಳಿಸುತ್ತಾರೆ.
8) ಅಮಿತಾಭ್ ಅವರ
ಪ್ರಕಾರ ಚಿತ್ರರಂಗದಲ್ಲೇ ಅತೀ ಸುಂದರ ನಟಿ ಎಂದರೆ "ವಹೀದಾ ರೆಹಮಾನ್".
9) ಇಡೀ ಏಷಿಯಾದಿಂದ
ಮೇಡಮ್ ಟುಸ್ಸೌಡ್ಸ್'ನಲ್ಲಿ ಮೇಣದ ಪ್ರತಿಮೆಯನ್ನು ಹೊಂದಿದ ಮೊದಲಿಗರು ಅಮಿತಾಭ್.
10) ವಿಶ್ವ ಚಿತ್ರರಂಗದಲ್ಲೇ
ದಂತಕಥೆಗಳಾದ ಚಾರ್ಲೀ ಚಾಪ್ಲಿನ್, ಮರ್ಲೋನ್ ಬ್ರಾಂಡೊ ಮತ್ತು ಲಾರೆನ್ಸ್ ಒಲಿವಿಯರ್ ಅವರ ತೀವ್ರ ಪೈಪೋಟಿಯ
ನಡುವೆಯೂ ಸಹ ಬಿಬಿಸಿಯವರು ನಡೆಸಿದ ಅಂರ್ತಜಾಲ ಸಮೀಕ್ಷೆಯಲ್ಲಿ ಅಮಿತಾಭ್ ಬಚ್ಚನ್ ಅವರು "ಸ್ಟಾರ್
ಆಫ್ ದಿ ಮಿಲೇನಿಯಮ್" ಗೌರವಕ್ಕೆ ಪಾತ್ರರಾಗಿದ್ದಾರೆ.
11) ಕಂಠದಾನ ಕಲಾವಿದರಾಗಿ
ಕೆಲಸ ಮಾಡುತ್ತಿದ್ದಾಗ ಅಮಿತಾಭ್ ಅವರ ಸಂಬಳ ರೂ.500.
12) ಬಿಗ್ ಬಿ ಎಂದು
ಅಮಿತಾಭ್ ಅವರನ್ನು ಕರೆಯಲು ಕಾರಣ ಅವರ ಎತ್ತರ (1.88ಮೀ). "ಮೃತ್ಯದಾತ" ಚಿತ್ರದ ನಂತರ
ಎಲ್ಲರೂ ಅವರನ್ನು ಇದೇ ಹೆಸರಿನಿಂದ ಕರೆಯಲು ಪ್ರಾರಂಭಿಸಿದರು.
13) ನಾಯಕ ನಟನಾಗುವುದಕ್ಕಿಂತಲೂ
ಮೊದಲು ಅಮಿತಾಭ್ ಕಂಠದಾನ ಕಲಾವಿದರಾಗಿದ್ದರು. ಸಾಕಷ್ಟು ಪಾತ್ರಗಳಿಗೆ ಅವರು ಧ್ವನಿ ನೀಡಿದ್ದಾರೆ.
14) ತುಂಬಾ ಅಪೂರ್ವವಾದ
ಧ್ವನಿಯನ್ನು (ಕಂಠ) ಹೊದ್ದಿದ್ದರೂ ಸಹ ಆಲ್ ಇಂಡಿಯಾ ರೇಡಿಯೋ ಮತ್ತು ಏಸ್ ರೇಡಿಯೋ ಅಮಿತಾಭ್ ಅವರನ್ನು
ರೇಡಿಯೋ ನಿರೂಪಕರಾಗಿ ಸೇರಿಸಿಕೊಳ್ಳಲು ನಿರಾಕರಿಸಿದ್ದರು.
15) "ಸಾಥ್
ಹಿಂದೂಸ್ಥಾನಿ" ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.
16) ಅಮಿತಾಭ್ ಅವರು
ತಮ್ಮ ಮೊದಲ ಚಿತ್ರಕ್ಕಾಗಿ ಪಡೆದ ಸಂಭಾವನೆ ರೂ.1000.
17) ಅಮಿತಾಭ್ ಅವರ
ಮೊದಲ ದೊಡ್ಡ ಸೂಪರ್ ಹಿಟ್ ಚಿತ್ರ "ಜಂಜೀರ್". ಇದಕ್ಕೂ ಮೊದಲು 12 ಚಿತ್ರಗಳಲ್ಲಿ ನಾಯಕನಾಗಿ
ಅಭಿನಯಿಸಿದ್ದರು.
18) ಅಮಿತಾಭ್ ಅವರಿಗೆ
ತುಂಬಾ ಇಷ್ಟವಾದ ತೆರೆಯ ಮೇಲಿನ ಪಾತ್ರದ ಹೆಸರು "ವಿಜಯ್". ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ
ಅವರ ಹೆಸರು ಇದೇ ಆಗಿದೆ. ಇವರ ಮತ್ತೊಂದು ಇಷ್ಟದ ಹೆಸರು "ಅಮಿತ್".
19) ತಮ್ಮ ಪತ್ನಿ
ಜಯಾ ಭಾದುರಿ ಅವರನ್ನು ಅಮಿತಾಭ್ ಅವರು ಮೊದಲು ಭೇಟಿಯಾಗಿದ್ದು ಪುಣೆಯ ಫಿಲ್ಮ್ ಅಂಡ್ ಟೆಲೆವಿಷನ್ ಇನ್ಸ್ಟಿಟ್ಯೂಟ್
ಆಫ್ ಇಂಡಿಯಾದಲ್ಲಿ. ನಂತರ "ಗುಡ್ಡಿ" ಚಿತ್ರದ ಸೆಟ್'ನಲ್ಲಿ.
20) 1971ರಿಂದ
(ಆನಂದ್) 1988ರವರೆಗೆ (ಷಹೇನ್ಷಾ) ಪ್ರತಿವರ್ಷವೂ ಸಹ ಥಿಯೇಟರ್'ನಲ್ಲಿ ವರ್ಷಕ್ಕೆ ಕನಿಷ್ಟ ಒಂದರಂತೆ
ಒಂದು ವರ್ಷ ಆಚರಿಸಿಕೊಂಡಂಥ ಸಿನಿಮಾಗಳನ್ನು ನೀಡಿದ ಏಕೈಕ ನಟ ಅಮಿತಾಭ್.
21) ಅತಿ ಹೆಚ್ಚು
ದ್ವಿಪಾತ್ರಗಳಲ್ಲಿ ಅಭಿನಯಿಸಿದ ನಟ ಎಂದರೆ ಅಮಿತಾಭ್. "ಮಹಾನ್" ಚಿತ್ರದಲ್ಲಿ ತ್ರಿಪಾತ್ರದಲ್ಲಿ
ಅಭಿನಯಿಸಿದ್ದಾರೆ.
22) ಅಮಿತಾಭ್ ಅವರನ್ನು
ತಲೆಯಲ್ಲಿ ಇಟ್ಟುಕೊಂಡು "ಮಿ.ಇಂಡಿಯಾ" ಚಿತ್ರದ ಕಥೆಯನ್ನು ಜಾವೇದ್-ಸಲೀಮ್ ಬರೆದಿದ್ದರು.
ಕಾರಣಾಂತರಗಳಿಂದ ಅನಿಲ್ ಕಪೂರ್ ಆ ಪಾತ್ರ ಮಾಡಿದರು.
23) ಅಮಿತಾಭ್ ಬಚ್ಚನ್
ಸಸ್ಯಹಾರಿ.
24) 2001ರಲ್ಲಿ
ಅಮಿತಾಭ್ ಈಜಿಪ್ಟ್'ನಲ್ಲಿ ನಡೆದ ಅಲೆಕ್ಸಾಂಡ್ರಿಯಾ ಫಿಲ್ಂ ಫೆಸ್ಟಿವಲ್'ನಲ್ಲಿ "ಆ್ಯಕ್ಟರ್ ಆಫ್
ದಿ ಸೆಂಚುರಿ" ಎಂಬ ಗೌರವಕ್ಕೆ ಭಾಜನರಾಗಿದ್ದಾರೆ.
25) ಅಕ್ಟೋಬರ್
31, 2006ರಂದು ಕೇವಲ 5 ಗಂಟೆಯಲ್ಲಿ "ಶೂಟೌಟ್ ಅಟ್ ಲೋಖಂದ್ವಾಲ" ಚಿತ್ರದ 23 ಸೀನ್'ಗಳಿಗೆ
ರೆಕಾರ್ಡಿಂಗ್ ಮಾಡುವ ಮೂಲಕ ಅಮಿತಾಭ್ ಅವರು ಇಡೀ ಚಿತ್ರತಂಡವೇ ಬೆರಗಾಗುವಂತೆ ಮಾಡಿದ್ದರು.
26) ಅಮಿತಾಭ್ ಮಗಳು
ಶ್ವೇತಾಳ ಪತಿ ನಿಖಿಲ್ ನಂದಾ ಅವರ ತಾಯಿ ಹಿಂದಿ ಚಿತ್ರರಂಗದ ಮೇರು ನಟ ರಾಜ್ ಕಪೂರ್'ರ ಪುತ್ರಿ.
27) ಅಮಿತಾಭ್ ಅವರಿಗೆ
ಸೂಟ್'ಗಳೆಂದರೆ ಬಹಳಾ ವ್ಯಾಮೋಹ. ಅವರ ನೆಚ್ಚಿನ ಬ್ರ್ಯಾಂಡ್ "ಗಬ್ಬಾನ". ಕಳೆದ ಮೂವತ್ತು
ವರ್ಷಗಳಿಂದ ಅಮಿತಾಭ್'ರ ಸೂಟ್'ಗಳನ್ನು ವಿನ್ಯಾಸ ಮಾಡಿ ತಯಾರಿಸಿ ಕೊಡುತ್ತಿರುವವರು ಇದೇ ಕಂಪನಿಯವರು.
28) ಅಮಿತಾಭ್'ರ
ಸೂಟ್ ತಯಾರಿಕೆಗೆ ಬಳಸುವ ಬಟ್ಟೆಯನ್ನು ಇಟಲಿಯಿಂದ, ದಾರವನ್ನು ಫ್ರಾನ್ಸ್'ನಿಂದ ಮತ್ತು ಗುಂಡಿಗಳನ್ನು
ಇಂಗ್ಲೆಂಡ್'ನಿಂದ ತರಿಸಿಕೊಳ್ಳಲಾಗುತ್ತದೆ.
29) ಅಮಿತಾಭ್'ರ
ಮತ್ತೊಂದು ನೆಚ್ಚಿನ ಸೂಟ್ ಬ್ರ್ಯಾಂಡ್ ಫ್ರಾಟೆಲ್ಲಿ ರೊಸ್ಸೆಟ್ಟಿ.
30) ಅಮಿತಾಭ್'ರ
ಅಚ್ಚುಮೆಚ್ಚಿನ ಕಾರು "ಲೆಕ್ಸಸ್". ಇದು ಬುಲೆಟ್ ಪ್ರೂಫ್'ನಿಂದ ಕೂಡಿದೆ.
31) ಅಮಿತಾಭ್'ರಿಗೆ
ವಾಚ್'ಗಳನ್ನು ಸಂಗ್ರಹಿಸುವ ಹವ್ಯಾಸವಿದ್ದು ಅವರು ಒಮ್ಮೆ ಧರಿಸಿದ ವಾಚನ್ನು ಮತ್ತೆ ಧರಿಸುವುದಿಲ್ಲ.
ಅವರ ಇಷ್ಟದ ವಾಚ್ ಬ್ರ್ಯಾಂಡ್ "ಲಾಂಜಿನ್ಸ್".
32) ಅಮಿತಾಭ್'ರ
ಮತ್ತೊಂದು ಹವ್ಯಾಸ ಎಂದರೆ ಪೆನ್'ಗಳನ್ನು ಸಂಗ್ರಹಿಸುವುದು. ಇದುವರೆಗೂ ಅವರು ಸಾವಿರಾರು ಪೆನ್'ಗಳನ್ನು
ಸಂಗ್ರಹಿಸಿಟ್ಟಿದ್ದಾರೆ. "ಮೊಂಟ್ ಬ್ಲಾಂಕ್" ಕಂಪನಿಯವರು ಪ್ರತಿ ವರ್ಷ ಅಮಿತಾಭ್'ರ ಹುಟ್ಟುಹಬ್ಬದಂದು
ಹೊಸ ಮಾದರಿಯ ಪೆನ್ನನ್ನು ಉಡುಗೊರೆಯಾಗಿ ನೀಡುತ್ತಾರೆ.
33) ಅಮಿತಾಭ್'ರ
ಇಷ್ಟದ ಪ್ರವಾಸಿ ತಾಣಗಳೆಂದರೆ ಲಂಡನ್ ಮತ್ತು ಸ್ವಿಜರ್ಲ್ಯಾಂಡ್.
34) ಅಮಿತಾಭ್'ರಿಗೆ
ಹಿಂದಿ ಚಿತ್ರರಂಗವನ್ನು ಬಾಲಿವುಡ್ ಎಂದು ಕರೆಯುವುದು ಸ್ವಲ್ಪವೂ ಇಷ್ಟವಾಗುವುದಿಲ್ಲ.
35) "ಸಾಥ್
ಹಿಂದುಸ್ಥಾನಿ" ಅಮಿತಾಭ್ ಅಭಿನಯದ ಏಕೈಕ ಬ್ಲ್ಯಾಕ್ ಅಂಡ್ ವೈಟ್ ಸಿನೆಮಾ.
36) 1995ರಲ್ಲಿ
ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯ ತೀರ್ಪುಗಾರರಲ್ಲಿ ಅಮಿತಾಭ್ ಕೂಡ ಒಬ್ಬರು.
37) ಅಮಿತಾಭ್ ಹೊಂದಿರುವ
ಎರಡು ಬಂಗ್ಲೆಗಳ ಹೆಸರು "ಪ್ರತೀಕ್ಷ" ಮತ್ತು "ಜಲ್ಸಾ".
38) ಜಯಾ ಅವರು ಹೆಳುವ
ಪ್ರಕಾರ "ಅಮಿತಾಭ್ ಒಂದು ರೀತಿ ಒಂಟಿಜೀವಿ"
39) ಅಮಿತಾಭ್ ಅವರು
ಮಧ್ಯಪಾನ ವಿರೋಧಿ.
40) ತಾನು ನಾಯಕನಾಗಿ
ಅಭಿನಯಿಸಿದ ಚಿತ್ರದ ರೀಮೇಕ್'ನಲ್ಲಿ ಖಳನಾಯಕನಾಗಿ ಅಭಿನಯಿಸಿದ ಏಕೈಕ ನಟ ಅಮಿತಾಭ್.
41) ಅತ್ಯುತ್ತಮ
ನಾಯಕನಟ ಪ್ರಶಸ್ತಿಗಾಗಿ ಅತಿ ಹೆಚ್ಚುಬಾರಿ ನಾಮನಿರ್ದೇಶನಗೊಂಡ ನಟ ಅಮಿತಾಭ್.
42) ಅಮಿತಾಭ್ ಎಂ.ಎ.ನಲ್ಲಿ
ಡಬಲ್ ಡಿಗ್ರಿ ಮಾಡಿದ್ದಾರೆ.
43) "ದೀವಾರ್"
ಮತ್ತು "ಜಂಜೀರ್" ಚಿತ್ರದಲ್ಲಿನ ತಮ್ಮ ಅಭಿನಯದಿಂದಾಗಿ ಅಮಿತಾಭ್ "ಆ್ಯಂಗ್ರಿ ಯಂಗ್
ಮ್ಯಾನ್" ಎಂಬ ಹೆಸರು ಪಡೆದರು.
44) ಅತಿಹೆಚ್ಚು
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಅತ್ಯುತ್ತಮ ನಾಯಕನಟ) ಪಡೆದ ಮೂವರು ನಟರಲ್ಲಿ ಅಮಿತಾಭ್ ಕೂಡ ಒಬ್ಬರು.(
ಉಳಿದಿಬ್ಬರು ಕಮಲ್ ಹಾಸನ್ ಮತ್ತು ಮುಮ್ಮಟ್ಟಿ).
45) ಆನಂದ್ ಚಿತ್ರ
ಬಿಡುಗಡೆಯಾದಾಗ ಅಮಿತಾಭ್ ಒಂದು ಪೆಟ್ರೋಲ್ ಬಂಕ್'ನಲ್ಲಿ ಕೆಲಸ ಮಾಡುತ್ತಿದ್ದರು.
46) ಅಮಿತಾಭ್ ಅಭಿನಯದ
"ಶೋಲೆ" ಚಿತ್ರ ಆಗಿನ ಕಾಲಕ್ಕೆ ಭಾರತೀಯ ಚಿತ್ರರಂಗದಲ್ಲೇ ಅತಿಹೆಚ್ಚು ಹಣಗಳಿಸಿದ ಚಿತ್ರ.
(US$ 60 ಮಿಲಿಯನ್). ಬಿಬಿಸಿಯು ಈ ಚಿತ್ರವನ್ನು "ಫಿಲ್ಂ ಆಫ್ ದಿ ಮಿಲೇನಿಯಮ್" ಎಂದು
ಘೋಷಿಸಿದೆ.
47) ಅಮಿತಾಭ್'ರ
"ದೀವಾರ್" ಚಿತ್ರಕ್ಕೆ "ಫಿಲ್ಂಫೇರ್ ಬೆಸ್ಟ್ ಫಿಲ್ಂ ಆಫ್ 50 ಈಯರ್ಸ್" ಪ್ರಶಸ್ತಿಯನ್ನು
ನೀಡಲಾಗಿದೆ.
48) 8ನೇ ಲೋಕಸಭಾ
ಚುನಾವಣೆಯಲ್ಲಿ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಹೆಚ್.ಎನ್.ಬಹುಗುಣ ಅವರ ವಿರುದ್ಧ ಅಲಹಾಬಾದ್'ನಲ್ಲಿ
ಸ್ಪರ್ಧಿಸಿ ಶೇ.68.2ರಷ್ಟು ಅಧಿಕ ಬಹುಮತಗಳಿಸುವುದರ ಮೂಲಕ ವಿಜಯಿಯಾಗಿದ್ದರು.
49) ಅಮಿತಾಭ್ ಬಚ್ಚನ್
ಅವರು ಕಾಫಿ ಮತ್ತು ಟೀ ಕುಡಿಯುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ಧೂಮಪಾನದಿಂದ ದೂರವಿರಲು ಬಯಸುತ್ತಾರೆ.
ಸಿಹಿ ಪದಾರ್ಥಗಳನ್ನು ಇಷ್ಟಪಡುವುದಿಲ್ಲ.
50) ಅಮಿತಾಭ್ ಅವರು
ತಮ್ಮ ಮೊಬೈಲ್ ಮತ್ತು ಲ್ಯಾಪ್'ಟಾಪ್ ಅನ್ನು ಬಿಟ್ಟಿರುವುದಿಲ್ಲ.
51) ಅಮಿತಾಭ್ ಅವರು
ಬ್ಲಾಗಿಂಗ್'ನಲ್ಲಿ ತುಂಬಾ ಆಸಕ್ತಿ ಹೊಂದಿದ್ದು. ತಮ್ಮ ಬ್ಲಾಗ್ ಮತ್ತು ಟ್ವಿಟ್ಟರ್ ಮೂಲಕ ತಮ್ಮ ಅಭಿಮಾನಿಗಳ
ಜೊತೆ ಬೆರೆಯಲು ಇಷ್ಟಪಡುತ್ತಾರೆ.
52) ಅಮಿತಾಭ್ ಅವರು
ಮೊದಲು ಖರೀದಿಸಿದ ಕಾರು ಸೆಕೆಂಡ್ ಹ್ಯಾಂಡ್ ಫಿಯೆಟ್.
53) ಭಾರತದ ಹಾಸ್ಯ
ಪುಸ್ತಕ "ಸುಪ್ರೀಮೊ" ಅಮಿತಾಭ್ ಅವರನ್ನು ಆಧರಿಸಿ ಬರೆದದ್ದಾಗಿದೆ.
54) ದೇವರು (ಗಾಡ್
ತುಸ್ಸೀ ಗ್ರೇಟ್ ಹೋ), ಭೂತ (ಭೂತನಾಥ್, ಡೆಲ್ಲಿ-6) ಮತ್ತು ಜೆನೀ (ಅಲಾದ್ದೀನ್) ಈ ಮೂರೂ ಪಾತ್ರಗಳಲ್ಲಿ
ಅಭಿನಯಿಸಿದ ಏಕೈಕ ನಟ ಅಮಿತಾಭ್.
55) ಅಮಿತಾಭ್ ಅವರು
ನಾಯಕನಟನಾಗಲು ಪ್ರೇರಣೆಯಾಗಿದ್ದು ಅವರ ತಾಯಿ ತೇಜಿ ಬಚ್ಚನ್.
56) ಅಮಿತಾಭ್'ರಿಗೆ
ಇಷ್ಟವಾದ ಕೋಟ್, " ಪ್ರತಿಯೊಬ್ಬರೂ ಸಿನೆಮಾ ನೋಡುತ್ತಾರೆ ಆದರೆ ಪ್ರತಿಯೊಬ್ಬರೂ ಪುಸ್ತಕ ಓದಲು
ಸಾಧ್ಯವಿಲ್ಲ".