Wednesday 9 December 2015

ಆಲಿಂಗನ

ಪ್ರಥಮ ಪ್ರೇಮದ ಮೊದಲ ಚುಂಬನ
ಮೈಯಲ್ಲಿ ಏನೋ ‌‍ರೋಮಾಂಚನ
ನಿನ್ನ ಪ್ರೀತಿಯ ತೋಳ್ಗಳ ಆಲಿಂಗನ
ಮರೆಯುವಂತೆ ಮಾಡಿದೆ ನನ್ನೇ ನಾ

ಜೋರಾಗಿದೆ ಎದೆಯ ಸದ್ದು
ಬಿಸಿಲಲಿ ಕೂಡ ನಡುಕ ಮೈಯಲಿ
ಭೂಮಿ ಮೇಲೆ ಇದ್ದಂತೆ ಇದ್ದು
ಆಕಾಶದಲಿ ತೇಲುತಿರುವೆ ಮತ್ತಲಿ

ನನಸಾದಂತೆ ನನ್ನ ಕನಸೆಲ್ಲ
ನಾನೀಗ ನಾನಾಗಿ ಉಳಿದಿಲ್ಲ
ಹೊಸತಾಗಿ ಕಾಣುತಿದೆ ನನಗೆಲ್ಲಾ
ನೀನೆ ಆವರಿಸಿರುವೆ ನನ್ನ ಒಳಗೆಲ್ಲಾ

ಸೀರೆ ಉಟ್ಟ ತಾರೆಯೊಂದು ನನಗಾಗಿ ಧರೆಗೆ ಬಂದು
ಜೇನ ಸಿಹಿಯ ತುಟಿಯಲಿ ಕೊಟ್ಟಳು ಮುತ್ತೊಂದು
ನಾ ಕೇಳಲು, ಯಾರೇ ನೀನು ಚೆಲುವೆ…? ಎಂದು
ಅಂದಳು ನಾ ನಿನ್ನ ಅರ್ಧಾಂಗಿ, ಇಂದು ಎಂದೆಂದೂ

Sunday 29 November 2015

ಪುಟ್ಟ ಕಣ್ಣ ಸನ್ನೆ

ನಿನ್ನ ಜೊತೆ ಶುರುವಾಗಿದೆ ಪ್ರೀತಿಯ ಸಂಬಂಧ
ಎಷ್ಟೇ ಜನ್ಮ ಕಳೆದರೂ ಅಳಿಸಲಾಗದು ಬಂಧ
ಹೇಳ ತೀರಲಾಗದು ನನಗಾಗುತಿರುವ ಆನಂದ
ಕೊನೆಯವರೆಗೂ ಸಾಗುತಿರಲಿ ನಲ್ಮೆಯ ಅನುಬಂಧ

ನೆನ್ನೆವರೆಗೂ ಒಂಟಿಯಾಗಿ ಇದ್ದೆ ನಾ
ನಿನ್ನ ಸನಿಹದೀ ಪುಳಕಗೊಂಡಿದೆ ಮನ
ಪುಟ್ಟ ಕಣ್ಣ ಸನ್ನೆಯಲೇ ಕೊಡು ಪ್ರೀತಿಯ ಆಹ್ವಾನ
ನಿನ್ನ ಜೊತೆಯೇ ಕಳೆಯುವೆ ಎಲ್ಲಾ ನಾಳೆಯ ಜೀವನ

ಹೊಸ ಆಸೆ ಚಿಗುರೊಡೆದಿದೆ ನನ್ನ ಮನದಲಿ
ಮಗುವಾಗಿ ಮಲಗುವಾಸೆ ನಿನ್ನ ಮಡಿಲಲಿ
ಬೇರೆಲ್ಲ ಶೂನ್ಯ ನೀನಿರುವಾಗ ಜೊತೆಯಲಿ
ಹಾರೋಣ ಬಾ ಹಕ್ಕಿಗಳಾಗಿ ನೀಲಿ ಬಾನಲಿ

ನನ್ನ ಖುಷಿಯನು ನಿನಗಂಚುವೆ
ನಿನ್ನ ನೋವನು ನಾ ಭರಿಸುವೆ
ನಿನ್ನ ಹೊರತು ಬೇರೇನೂ ಈಗ ನಾ ಕಾಣೆ
ನನ್ನೆಲ್ಲಾ ಜನ್ಮಕು ಇನ್ನು ಸಂಗಾತಿ ನೀನೆ

Thursday 19 November 2015

ರಣರಾವಣ

ಇದು ರಣರಂಗ
ರಣರಾವಣರ ಚದುರಂಗ
ಇದು ರಕ್ತಕದನ
ಮಾನವೀಯತೆಯ ದಹನ

ಧನಕಾಗಿ ಕಾದಾಡುವ ಮಾನವ
ಸ್ನೇಹಪ್ರೀತಿಯ ಮರೆತ ದಾನವ
ದ್ವೇಷ ಅಸೂಯೆಯೆ ತುಂಬಿರುವ ಜಗ
ಎಲ್ಲೆಡೆ ಗುನುಗುತಿದೆ ಮತಾಂಧತೆಯ ರಾಗ

ಶಾಂತಿಗಾಗಿ ಪ್ರಾಣ ತೆಗೆವ ಇವರೆಂಥಾ ಇನರು
ಕರುಣೆ ಇಲ್ಲದೆ ರಕ್ತವ ಸುರಿಸುವ ರಕ್ಕಸರು
ಇತಿಹಾಸದ ನಿಜವ ತಿಳಿಯದೆ ಸಾಗುತಿರುವ ಅಂಧರು
ಎಲ್ಲಾ ಧರ್ಮದ ಸಾರವು ಒಂದೇ ಪ್ರೀತೆಯೇ ದೇವರು

ದೇವರಿಗೂ ಅನಿಸುವುದಿಲ್ಲ ಅಯ್ಯೋ ಪಾಪ
ನೋಡುತ್ತಿದ್ದರೆ ನೀವು ಮಾಡುತಿರುವ ಪಾಪ
ಕಣ್ಣು ತೆರೆದು ನೋಡಿ ಇರುವುದು ಒಂದೇ ಧರ್ಮ ಮನುಕುಲ
ಇಲ್ಲಿ ಇರುವಷ್ಟು ದಿನ ಹಂಚಿಕೊಂಡು ಬಾಳೋಣ ನೆಲ-ಜಲ

Sunday 1 November 2015

ಹೊಸ ಗುರುತಾಗಿ

ಮನಸುಗಳು ಒಂದಾದ ಮೇಲೆ
ಎರಡನೇ ಮಾತೇತಕೆ…
ಉಸಿರುಗಳು ಬೆರೆತಾದ ಮೇಲೆ
ಇನ್ನು ಭಯವೇತಕೆ…

ನೀನು ನಾನಾಗಿ…
ನಾನು ನೀನಾಗಿ…
ಬಾಳೋಣ ಕೂಡಿ ಒಂದಾಗಿ
ನವ ಪ್ರೇಮಿಗಳಿಗೆ ಹೊಸ ಗುರುತಾಗಿ

ಪ್ರೇಮಲೋಕಕೆ ಹೊಸಗೀತೆಯ ಸಾರೋಣ
ಪ್ರೀತಿ ಸ್ನೇಹಕೆ ಹೊಸ ಅರ್ಥವ ನೀಡೋಣ
ಜಾತಿ ಭೇದಬಾವಕೆ ಇಲ್ಲಿ ಇಲ್ಲ ಜಾಗವೂ
ಪ್ರೀತಿ ಮುಂದೆ ಪ್ರೇಮಿಗಳಿಗೆ ಎಲ್ಲ ಶೂನ್ಯವೂ

ಪ್ರೀತಿ ಎಂದರೆ ಕೂಡಿ ಬಾಳುವುದು
ದ್ವೇಷ ಭಾವವ ಮೆಟ್ಟಿ ನಿಲ್ಲುವುದು
ಲೋಕ ನಿಂತಿರುವುದು ಪ್ರೀತಿ ನಂಬಿಕೆ ಮೇಲೇನೆ
ಎಲ್ಲ ಅಳಿದರೂ ಉಳಿಯುವುದು ಪ್ರೀತಿ ಒಂದೇನೆ

Saturday 31 October 2015

ಪರವಶನಾದೆ

ಪ್ರತಿಕ್ಷಣವೂ ಹೊಸತರಂತೆ
ಚಿಗುರುತಿರುವ ಹಸಿರಿನಂತೆ
ಮಾಯೆಯ ನಂಬೋದು ಹೇಗೆ?
ಮನದ ಮಾತನು ಹೇಳೋದು ಹೇಗೆ?

ಪದಗಳೇ ಸಿಗದಂತಾಗಿದೆ
ನನ್ನ ಸಂಭ್ರಮವ ವರ್ಣಿಸಲು
ನಿನ್ನ ಪ್ರೀತಿಗೆ ನಾ ಪರವಶನಾದೆ
ನನ್ನೆಲ್ಲಾ ನಾಳೆಯೂ ನಿನಗೆ ಮೀಸಲು

ನಿನ್ನ ನೋವಿಗೆ ನಾ ಜೊತೆಯಾಗುವೆ
ನೀ ನಗುತ್ತಿದ್ದರೆ ನಾ ಜಗವಾಳುವೆ
ನೀ ನೆನೆದರೆ ಎದುರು ಹಾಜರಾಗುವೆ
ನಿನ್ನ ಮಡಿಲಲ್ಲಿ ಮಗುವಾಗುವೆ

ನನ್ನ ಜೀವನಿನ್ನ ಜೀವ
ಸೇರಿದರೆ ಅದೇ ತಾನೆ ಪ್ರೇಮ
ಒಂದೇ ನೋಟಒಂದೇ ಭಾವ
ಹೀಗೆ ಒಟ್ಟಾಗಿರೋಣ ಪ್ರತಿ ಜನ್ಮ

Sunday 11 October 2015

ಗೊಂಬೆ

ಸೀರೆಯುಟ್ಟ ಸಕ್ರೆ ಗೊಂಬೆಯಂತೆ ನೀನು
ಇರುವೆಯಂತೆ ನಾ ಬಳಿ ಬಂದ್ರೆ ತಪ್ಪೇನು
ತೇಲುವ ಮೋಡದಂತೆ ಚಲಿಸುವಾಗ ನೀನು
ಗಾಳಿಯಂತೆ ನಾ ಬಂದು ಹೊತ್ತೊಯ್ಯುವೆನು

ಏನೋ…? ಇದು ಏನು ರೋಗವೋ…?
ಏನೋ…? ಅದು ಏನು ಮಾಯವೋ…?
ಓರೆ ನೋಟದಲ್ಲಿ ಕದ್ದು ಕದ್ದು ನನ್ನ ನೋಡಿ ಕೊಲ್ಲುತಿರುವೆ
ಮಿಂಚಿನ ಹೊಳಪನು ಪುಟ್ಟ ಕಣ್ಗಳಲಿ ಹೇಗೆ ಹಿಡಿದಿಟ್ಟಿರುವೆ

ನನ್ನೆದೆಯ ಮೇಲೆ ನಿಂತು ನಾಟ್ಯವಾಡಿ
ಹಣೆ ಮೇಲೊಂದು ಸಿಹಿಮುತ್ತನು ನೀಡಿ
ನಿನ್ನ ತೋಳ್ಗಳಲ್ಲಿ ನನ್ನ ಬಿಗಿದಪ್ಪಿ ಹಿಡಿದು
ಕರೆದೊಯ್ದೆ ಪ್ರೀತಿಯ ಲೋಕಕೆ ನನ್ನ ಇಂದು

ನಿನ್ನ ಭೇಟಿಮಾಡುವ ಕ್ಷಣವ ನೆನೆದು ನೆನೆದು
ಆಯಾಸ ಎನ್ನುವ ಪದವೆ ಹೋಗಿದೆ ಮರೆತು
ನದಿಯಂತೆ ಓಡಿ ನಿನ್ನ ಸೇರುವಾಸೆ ಎಲ್ಲೂ ನಿಲ್ಲದೆ
ನನ್ನ ಪ್ರತಿ ಕಣಕಣವೂ ನಿನ್ನ ಸೇರಲು ಹೆಜ್ಜೆ ಹಾಕಿದೆ

Saturday 10 October 2015

ನಾಜೂಕು ನಾರಿ

ಬಳೆಗಳ ಸದ್ದಲಿ ಹೃದಯವ ಬಂಧಿಸಿ
ಕಾಲ್ಗೆಜ್ಜೆ ನಾದದಿ ಮನವ ತೇಲಿಸಿ
ಬೆಳದಿಂಗಳ ನಗುವ ಸೂಸಿ ಜಗವ ಮರೆಸಿದೆ
ನಾಜೂಕಾದ ನಡುವಲ್ಲಿ ನನ್ನನ್ನೇ ಸೆರೆ ಮಾಡಿದೆ

ಕೆಂಪು ಗುಲಾಬಿಯಿಂದ ಬಣ್ಣವ ತಂದು
ಹಾಲ್ಗೆನ್ನೆಗೆ ತಿದ್ದಿ ತೀಡಿದಂತೆ ಇಂದು
ಮುದ್ದು ತರಿಸುತ್ತಿದೆ ನಿನ್ನ ಅಂದ
ಬ್ರಹ್ಮ ಒಮ್ಮೆ ಕಚ್ಚಿ ರುಚಿ ನೋಡು ಎಂದ

ನನ್ನ ಕನಸಿನ ಅಂದದ ರಾಜಕುಮಾರಿ
ಬಳ್ಳಿಯಂತೆ ಬಳುಕುವ ನಾಜೂಕು ನಾರಿ
ನನ್ನಾಸೆಗಳಿಗೆ ರೆಕ್ಕೆ ತರಿಸಿದ ಪೋರಿ
ನಿನ್ನ ಕಣ್ಣ ಕೊಳದಲಿ ಬಿದ್ದೆ ನಾ ಜಾರಿ

ಸೀರೆ ಸೆರಗನ್ನೆ ಸೂತ್ರವ ಮಾಡಿಬಿಟ್ಟು
ಗಾಳಿಪಟದಂತೆ ನನ್ನ ಹಾರಿಸಿದೆ
ನೆರಿಗೆಯಂಚಲ್ಲಿ ಸೆರೆಯಾಳಾಗಿ ಇಟ್ಟು
ನಿನ್ನ ಮುದ್ದಾಡುವ ಶಿಕ್ಷೆ ವಿಧಿಸಿದೆ

Friday 9 October 2015

ಎಕ್ಸಾಮ್

ಎಕ್ಸಾಮ್ ಅನ್ನೋ ಭಯ ಕಾಡ್ತಾ ಇದೆಯಲ್ಲ
ಟೆನ್ಶನ್ ಅಲ್ಲಿ ಏನೂ ಓದೋಕ್ ಆಗ್ತಿಲ್ಲ
ಹುಚ್ಚು ಮನಸು ಮಾತೇ ಕೇಳ್ತಾ ಇಲ್ಲ
ಭಯದಲ್ಲಿ ನಡುಗ್ತಾ ಇದೆ ಮೈಯೆಲ್ಲ

ಬರೀ 10th ಅಲ್ಲ, ಇದು ನಿನ್ನ ಫ್ಯೂಚರ್ ಲೈಫು
ಪಿಯುಸಿ ಅಲ್ಲ, ಅದು ಲೈಫ್ಗೇ ಟರ್ನಿಂಗ್ ಪಾಯಿಂಟು
ಅಂತ ಎಲ್ಲಾ ದೊಡ್ಡೋರು ಹೇಳ್ತಾರಲ್ಲ
ಡೈಲಿ ರಿಪೀಟ್ ಮಾಡಿ ತಲೆ ತಿಂತಾರಲ್ಲ

ಅವರು ಹೇಳೋ ಮಾತಿನಲ್ಲೂ ಸತ್ಯ ಇದೆ
ಕೊನೆತನಕ ಇರೋದು ಅಂದು ಕಲಿತದ್ದೆ
ಎಲ್ಲೆ ಹೋದ್ರು ವಿದ್ಯೆಗೆ ಹೆಚ್ಚು ಮರ್ಯಾದೆ
ದುಡ್ಡೇ ದೊಡ್ಡಪ್ಪ ಆದ್ರೆ ಅದರಪ್ಪ ವಿದ್ಯೆ

ಕಾಲೇಜ್ ಲೈಫ್ ಅಂದ್ರೆ ಎಲ್ರುಗೂ ಇಷ್ಟ
ಎಕ್ಸಾಮ್ಸ್ ಬಂದ್ರೆ ಮಾತ್ರ ಬಲು ಕಷ್ಟ
ಟೀಚರ್ಸ್ ಎಲ್ಲ ಆಗ ಫ್ಲೈ ಫ್ಲೈ ಫ್ಲೈ
ಸ್ಟೂಡೆಂಟ್ಸ್ ಮಾತ್ರ ಕ್ರೈ ಅಂಡ್ ಫ್ರೈ

ರಿಸಲ್ಟ್ಸ್ ಅಂದ್ರೆ ಭಯ ಆಗತ್ತಲ್ಲ
ಟೆನ್ಶನ್ನ ತಡ್ಕೊಳೋಕ್ ಆಗಲ್ಲ
ರಿಲೇಟಿವ್ಸ್ ಜೊತೆಗೆ ಪ್ರಾಣ ತಿಂತಾರಲ್ಲ
ಅಕ್ಪಕ್ಕದ್ ಮನೆಯವರ್ ಬಾಯಿಗೆ ಬೀಗ ಇಲ್ಲ

ರಿಸಲ್ಟ್ಸ್ ಅನ್ನೋ ಹೆಸರಲ್ಲಿ ಪ್ರಾಣ ಹಿಂಡ್ತಾರಲ್ಲ
ಟೆನ್ಶನ್ ಭಯದಲ್ಲೂ ಒಂಥರಾ ಕಿಕ್ಕು ಐತಲ್ಲ

Thursday 8 October 2015

ಓದಿನಲ್ಲಿ ಏನಿದೆ

ಎಲ್ಲವನ್ನು ಓದುವಾಸೆ ಆದರೆ
ತಲೆಯಲ್ಲಿ ಸಾವಿರಾರು ಯೋಚನೆ
ಟಾಪರ್ ಆಗೋಣ ಅಂದುಕೊಂಡರೆ
ಓದೋಕೆ ಒಂದಿಲ್ಲೊಂದು ಅಡಚಣೆ

ಸಬ್ಜೆಕ್ಟ್ಸ್ಗಳು ಅದ್ಯಾಕೆ ಹೀಗೆ
ಇವುಗಳನ್ನ ಓದಿ ಪಾಸ್ ಆಗೋದಾದ್ರು ಹ್ಯಾಗೆ
ಎಷ್ಟೇ ಕಷ್ಟಪಟ್ಟು ಓದಿದ್ರೂ ಲಕ್ಕು ಇರಬೇಕಪ್ಪ
ಗುರಿಯ ತಲುಪಲು ಒಳ್ಳೆ ಗುರುವು ಬೇಕಪ್ಪ

ಪ್ರತಿದಿನ ರಾತ್ರಿ-ಹಗಲು ಕಷ್ಟಪಟ್ಟು ಓದಿದೆ
ಎಲ್ಲ ಮುಗಿದಮೇಲೆ ಅನಿಸಿತು ಓದಿನಲ್ಲಿ ಏನಿದೆ
ಬ್ರೈನ್ ಎಂಬ ಗ್ರೌಂಡಿನಲ್ಲಿ ಪಿಚ್ ಹಾಳು ಮಾಡುವಂತೆ
ಸಬ್ಜೆಕ್ಟ್ಸ್ಗಳು ಕಾಡ್ತಿವೆ ಸ್ಕೆಚ್ ಹಾಕದೆ ಸಾಯಿಸ್ತಿವೆ

ಹೆಲೋ ಟೀಚರ್ಸ್ ಯಾಕೆ ಹೀಗೆ ಮಾಡ್ತೀರ
ಸಾಯೋ ಥರಾ ಯಾಕೆ ಟಾರ್ಚರ್ ಕೊಡ್ತೀರ
ಫೈಲ್ ಆದ ಸ್ಟೂಡೆಂಟ್ಗಳಿಗು ಲೈಫು ಐತ್ರಪ್ಪ
ಬರೀ ಓದಿ ಮಾರ್ಕ್ಸ್ ತೆಗೆಯೋದೆ ಸಾಧನೆ ಅಲ್ರಪ್ಪ

ಸ್ಟೂಡೆಂಟ್ಸ್ - ಟೀಚರ್ಸ್

ಬುಕ್ಕು ಪೆನ್ನು ಸ್ಟೂಡೆಂಟ್ಸ್ ಕೈಯಲ್ಲಿ
ಜೇಡಿ ಮಣ್ಣು ಟೀಚರ್ಸ್ ತಲೆಯಲ್ಲಿ
ಪಾಠ ಮಾಡಬೇಡಿ ಸ್ವಲ್ಪ ತಡೀರಿ
ಕ್ಲಾಸ್ ರೂಮಿಂದ ಹೊರಗೆ ನಡೀರಿ

ಒಳ್ಳೆ ಟೀಚರ್ ಬಂದ್ರು ಅಂದ್ರೆ
ಕತ್ತೆ ಕೂಡ ಪಾಸಾಗುವುದು
ಸತ್ತರೂನು ಬರೋದಿಲ್ಲ ಅಂತ ಟೀಚರು
ನಾವೇ ಓದ್ಕೊಬೇಕು ತಟ್ಕೊಂಡು ಇವರ ಟಾರ್ಚರು

ಒಳ್ಳೆ ಟೀಚರ್ ಬರ್ತಾರೆ ಅನ್ನೋ ನಂಬಿಕೆ ಇಟ್ಕೊಂಡು
ಹೋಗಿ ಸೇರಬೇಕು ಕ್ಲಾಸ್ರೂಂ ಎಂಬ ಸುಡುಗಾಡು
ಒಳಗ್ಹೋಗಬೇಡಿ ಅಷ್ಟುಬೇಗ ಸ್ವಲ್ಪ ತಡೀರಿ
ಫ್ರೆಂಡ್ಸ್ಗೆ ಹೇಳಿ ಪ್ರಾಕ್ಸಿ ಹೋಡೀರಿ

ಯಾವ ಟಾಪಿಕ್ ಅರ್ಥ ಆಯ್ತು
ಯಾವ್ದು ಅರ್ಥ ಆಗ್ದೆ ಹೋಯ್ತು
ಹೇಳುವುದು ಹೇಗೆ ಜ್ಞಾಪಕ ಮಾಡಿಕೊಂಡು
ಸುಮ್ನೆ ಓದಬೇಕು ಎಲ್ಲವನ್ನು ಮುಚ್ಕೊಂಡು

ಎಕ್ಸಾಮ್ಗೆ ಮಾತ್ರ ಓದೋದು ನಾವು
ಹೆದ್ರೋದಿಲ್ಲ ಹತ್ತಿಪ್ಪತ್ತು ಮಾರ್ಕ್ಸ್ ಕಳ್ಕೊಂಡ್ರು
ಫೇಲು ಬ್ಯಾಕು ಆದ್ರೆ ಆಗ್ಲಿ ಬಿಡಿ
ದೇವ್ರಿದಾನೆ ಸಪ್ಲಿಮೆಂಟ್ರಿ ಕಟ್ಟಿಬಿಡಿ

Tuesday 29 September 2015

ಒಂಥರದ ಆಸೆ

ಅದೇನೋ ಒಂಥರದ ಆಸೆ
ಬದಲಾಗುತಿದೆ ನನ್ನ ವರಸೆ
ಹೇಳಲು ಒದ್ದಾಡುತಿದೆ ಮನಸು
ಹಗಲಲ್ಲೂ ಬೀಳುತಿದೆ ಕನಸು

ಹಗಲೆಲ್ಲ ಇರುಳಂತಾಗಿ
ತಣ್ಣನೆ ಗಾಳಿಗೆ ತಲೆದೂಗಿ
ಮನಸು ನಿನ್ನನೇ ಕೂಗಿ
ಹಾಡಿದೆ ಕೋಗಿಲೆಯಾಗಿ

ಪ್ರೀತಿಯ ಹಾಡನು ಕೇಳಿ
ಚಂದಿರ ಬಂದು ನನ್ನ ಬಳಿ
ಕೇಳಿದಯಾರು ಬೆಡಗಿ?
ತೋರಲು ನಿನ್ನನೋಡುತ ನಿಂತ ಬೆರಗಾಗಿ

ಕಣ್ಣೆರೆಡು ಸಾಲದು ನಿನ್ನಂದ ನೋಡಲು
ನಾನಾಗಬಾರದಿತ್ತೆ ನೂರು ಕಣ್ಣ ನವಿಲು
ನಿನ್ನ ಸೊಬಗ ಕಂಡು ನಾಚಿದೆ ಕಾಮನಬಿಲ್ಲು
ಇನ್ನೆಷ್ಟು ವರ್ಣಿಸಲಿ ಮುಗಿದಿವೆ ಪದಗಳು

Tuesday 15 September 2015

ಇವರು ನಮ್ಮ ದೇಶದ ಹೆಣ್ಮಕ್ಳೇನಾ?

ಚೂರೂ ಇಲ್ಲ ನಾಚಿಕೆ ಮಾನ
ಇವರು ಬಿಟ್ಟಿದ್ದಾರೆ ಎಲ್ಲವನ್ನ
ಕೇಳೋದೇ ಇಲ್ಲ ಒಳ್ಳೆಯದನ್ನ
ಮಾಡೋದು ಬರೀ ಅನಾಚಾರವನ್ನ

ಆಡೋದಿಲ್ಲ ಒಂದೂ ಒಳ್ಳೇ ಮಾತನ್ನ
ಸ್ವಲ್ಪವೂ ಇಲ್ಲ ತಾಳ್ಮೆ ಸಮಾಧಾನ
ಇವರು ಕಲಿಯೋಲ್ಲ ಬದುಕೊದನ್ನ
ಬದಲಾಯಿಸಲು ಆಗಲ್ಲ ಇವರನ್ನ

ಮೂಗ್ಮೇಲೇ ಹಿಡ್ಕೋಂಡಿರ್ತಾರೆ ಕೋಪಾನಾ
ತುಂಬಾ ಚೆನ್ನಾಗಿ ಮಾಡ್ತಾರೆ ನಾಟಕಾನಾ
ಮುಖದ ತುಂಬಾ ಚ್ಕೋತಾರೆ ಬಣ್ಣಾನ
ಮಾತಲ್ಲೇ ಮಾಡ್ತಾರೆ ಎಲ್ರಿಗು ಮೋಡಿನಾ

ಇವರಿಂದ ಕಲಿಬೇಕು ಹೇಳೋದು ಸುಳ್ಳನ್ನ
ನಂಬಿಂದ್ರೆ ಅಲ್ಲಿಗೆ ಮುಗಿಯಿತು ನಮ್ ಜೀವ್ನ
ಬಂಡೆಗೆ ಹೋಗಿ ಚಚ್ಕೋಬೇಕು ತಲೆಯನ್ನ
ಬಿಟ್ರೆ ತಕ್ಕೋತಾರೆ ಹೆಣದ ಮುಂದೆ Selfie

ಮಾಡೋದು ಬರೀ ಬಿಟ್ಟಿ ಶೋಕೀನ
ದುಡ್ಡು ಅಂದ್ರೆ ಬಿಡ್ತಾರೆ ದೊಡ್ಡದಾಗಿ ಬಾಯನ್ನ
ಇವರದು ಒಂದು ಜೀವನಾನ?
ದೇವ್ರೇ ಹೇಳ್ಬೇಕು ಈ ಪ್ರಶ್ನೆಗೆ ಉತ್ತರಾನ

ರೂಢಿಸಿಕೊಂಡಿದ್ದಾರೆ ಕೆಟ್ಟ Nature
ಮರೆತು ಬಿಟ್ಟಿದ್ದಾರೆ ನಮ್ಮ Culture
ಇವರು ನಮ್ಮ ದೇಶದ ಹೆಣ್ಮಕ್ಳೇನಾ?
ಹೇಗೆ ಕೊಡೋದು ಇವರಿಗೆ Respect’?