ನನ್ನ ಪ್ರತಿ ನಗುವಲು
ನಿನ್ನ ಬಿಂಬವೆ ತುಂಬಿದೆ
ಹೃದಯದ ಬಡಿತವೂ ನಿನ್ನ
ಹೆಸರನೇ ಪ್ರತಿಧ್ವನಿಸುತಿದೆ
ನವಿಲು ನಾಟ್ಯವ ಮರೆಯಬಹುದು
ಕೋಗಿಲೆ ಗಾನವ ನಿಲ್ಲಿಸಬಹುದು
ಮನವನು ಪೂರ್ಣವಾಗಿ ಆವರಿಸಿರುವ
ನಿನ್ನ ನೆನಪನು ಎಂದಿಗೂ
ಅಳಿಸಲಾಗದು
ನಮ್ಮಿಬ್ಬರ ನಡುವಿನ ಅಂತರ ಹೆಚ್ಚಿದಷ್ಟೂ
ನಿನ್ನ ಮೇಲೆ ಪ್ರೀತಿ
ಬೆಳೆಯುತಿದೆ ಬೆಟ್ಟದಷ್ಟು
ನೀ ಜೊತೆಗಿದ್ದರೆ ಸ್ವರ್ಗವೇ
ಧರೆಗಿಳಿದಂತೆ
ಮರೆತು ಬಿಡುವೆ ನಾ
ಈ ಜಗದ ಚಿಂತೆ
ನನ್ನ ಪ್ರತಿ ನಗುವಲು
ನಿನ್ನ ಬಿಂಬವೆ ತುಂಬಿದೆ
ಹೃದಯದ ಬಡಿತವೂ ನಿನ್ನ
ಹೆಸರನೇ ಪ್ರತಿಧ್ವನಿಸುತಿದೆ
ಮನಸು ಬಾಡಿದ ಹೂವಂತೆ
ಮುದುಡಿ
ನಿನ್ನ ವಶವಾಗಿದೆ ನನ್ನೆಲ್ಲಾ
ನರ-ನಾಡಿ
ಕಣ್ಣೀರು ಕರಗಿ ನದಿಯಂತೆ
ಹರಿಯುತಿದೆ
ಇದು ನಾನೇನ? ಎಂಬ
ಅನುಮಾನ ಬರುತಿದೆ
ನನ್ನ ಬದುಕಿಗೆ ನೀನೊಬ್ಬಳೆ
ಒಡನಾಡಿ
ನೀನಿಲ್ಲದ ನಾನು ಚೂರಾದ ಕನ್ನಡಿ
ಈ ಅಗಲಿಕೆಯ ನೋವನು
ನಾ ತಾಳಲಾರೆ
ಜೀವ ಹೋಗುವ ಮುನ್ನ
ಒಮ್ಮೆ ಬಳಿ ಬಾರೆ
ನನ್ನ ಪ್ರತಿ ನಗುವಲು
ನಿನ್ನ ಬಿಂಬವೆ ತುಂಬಿದೆ
ಹೃದಯದ ಬಡಿತವೂ ನಿನ್ನ
ಹೆಸರನೇ ಪ್ರತಿಧ್ವನಿಸುತಿದೆ