BBMP Electionಗಳು
ಬೊಂಬಡ ಹೊಡ್ಕೊಳೋ Campaign'uಗಳು
ಐದೋ ಆರೋ ಪಕ್ಷಗಳು
ಲೆಕ್ಕ ಸಿಗದಷ್ಟು ಪಕ್ಷೇತರ Candidate'uಗಳು
ರಸ್ತೆಬದಿ ತುಂಬಾ Banner'uಗಳು
ಸೀರೇ ಚಡ್ಡಿ ಸರಾಯಿಗಳು
ಅಪ್ಪ ಅಮ್ಮ ಮಕ್ಳುಗಳೇ ವಿರೋಧಿಗಳು
ಇವರಿಗೆ Vote ಹಾಕೋ ನಾವು ಲೂಸುಗಳು
BBMP Electionಗಳು
ಒಂಚೂರು ಸಾವು ನೋವುಗಳು
ಕಳ್ಳ Relationಗಳು
ಒಳಗೊಳಗೆ Connectionಗಳು
ಎಲ್ಲಾ ಬರೀ ಓಳು ನಾಟ್ಕಗಳು
ಎಲ್ಲರೂ ಒಳ್ಳೆ Gentle Candidate'uಗಳು
Vote ಮಾಡೋರೆ Mental Case'uಗಳು
ಮುದ್ದೆ ತಿಂದು ನಿದ್ದೆ ಮಾಡೋ ಸತ್ ಪ್ರಜೆಗಳು
ಕಾಲ್ನಡಿಗೆಗಳು mike-set'uಗಳು ಪಾಂಪ್ಲೆಟ್ಟುಗಳು
ಮನೆಮನೆಗೆ ಹೋಗಿ ಮಾಡುವ Canvass'uಗಳು
ಹೂವು ಹಣ್ಣು ಕಾಯಿ ಕೈ ತೆನೆ ಆನೆ ಪೊರಕೆ ಪಕ್ಷಗಳು
ಪರಭಾಷೆಗಳಲ್ಲಿ ರೈಲು ಬಿಡುವ ಪ್ರಣಾಳಿಕೆಗಳು
Vote'u ಮಾಡಲು ಮನಸೇ ಬಾರದ ಅಭ್ಯರ್ಥಿಗಳು
ಪರಿಚಯವಿರದ ಮುಖಗಳು ಪರಕೀಯ ಛಾಯೆಗಳು
ಸತ್ತರೂ ಪ್ರಜೆಗಳು ಗೆದ್ದ ಮೇಲೆ ಸಿಗದ ಕತ್ತೆಕುದುರೆಗಳು
ಕಿಲಿಕಿಲಿ ಕಿಲಿ ನಗುವ Cut-out'uಗಳು
ಗಲ್ಲಿ ಗಲ್ಲಿಯಲಿ ಕೂಗುವ Loudspeaker'uಗಳು
ಗೋಡೆ ಗೇಟು ಕಾಂಪೌಡುಗಳ ಮೇಲೆ
ನಮಗೆ ಮತನೀಡಿ ಎಂಬ ಬರಹಗಳು
ಗೆದ್ದು ಗದ್ದಿಗೆ ಏರಿ ಕುಳಿತ ಮೇಲೆ
ಸಿಗುವುದಿಲ್ಲ ಇವರ ಕುರುಹುಗಳು
ಹೊಸ ಅಭ್ಯರ್ಥಿಗಳ Josh'ಗಳು
ಹಳೇ ಅಭ್ಯರ್ಥಿಗಳ Cashಗಳು
ಸ್ನೇಹಿತರೇ ಇವತ್ತಿಗಿಷ್ಟು ಸಾಕು ನಾನು ತಿರುಗಿ ನಾಳೆ ಮಾತನಾಡಲೇ
ಸಮಾವೇಶಗಳು ಸಂಭಾವನೆಗಳು ಉದ್ದೂದ್ದ ಭಾಷಣಗಳು
ಭರವಸೆಗಳು ಆಶ್ವಾಸನೆಗಳು ಆರೋಪ ಪ್ರತ್ಯಾರೋಪಗಳು
Plan'e ಇಲ್ಲದ Partyಗಳು Damage ಆದ Leaderಗಳು
Garbage ತುಂಬಿದ Ward'uಗಳು ಗಬ್ಬು ನಾಥಗಳು
BBMP Electionಗಳು
ಕಡಿಮೆ ಕೆಟ್ಟವರ Selectionಗಳು ಗಳು ಗಳು ಗಳು
ಗೂಂಡಾಗಳೇ ತುಂಬಿರುವ ಪಕ್ಷಗಳು
ಹಳೇ ಮುಖ ಹೊಸ ಬಣ್ಣ ಬಟ್ಟೆಗಳು
ತಮಿಳು ತೆಲುಗು ಹಿಂದಿ ಮಲೆಯಾಳಿ ಇಂಗ್ಲೀಷುಗಳು
ರಾಜಧಾನಿಯಲ್ಲೇ ಕನ್ನಡ ಕನ್ನಡಿಗರ ಮುಳುಗಡೆಗಳು
Manifestoಗಳು Hero Heroinಗಳ Glamour'uಗಳು
ಇವರ ಎಡವಟ್ಟುಗಳು Signal ಅಲ್ಲಿ Red Light'uಗಳು
Election Startingಗಳು Votingಗಳು Endingಗಳು
ಗೆದ್ದ ಮೇಲೆ ಹೊಡಿಯೋ ಪಟಾಕಿ ಹೊಗೆಗಳು
ರಸ್ತೆಯಲ್ಲಿ ಎಬ್ಬಿಸೋ ಗಲಭೆಗಳು
ಬೀದಿಬದಿಯಲ್ಲೇ ಉಳಿಯುವ ಕಸಗಳು
ಇಂಥಾ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ
ಅವರು ನಮ್ಮಿಂದ ಎಲ್ಲವನ್ನೂ ದೋಚುತ್ತಿದ್ದಾರೆ
ಸತ್ಪ್ರಜೆಗಳೇ ನೀವು ನಿಜವಾಗಿಯೂ ಸತ್-ಪ್ರಜೆಗಳೇ ನಾನಿನ್ನೂ ಹೋಗಿಬರಲೇ
Traffic'uಗಳು Signal'uಗಳು ಮೂರು ದೀಪಗಳು
Horn'ನ್ನುಗಳು Siren'ನ್ನುಗಳು silencer'ರುಗಳು ಕಪ್ಪು ಹೊಗೆಗಳು
ಗುಂಡಿ ತುಂಬಿದ Road'uಗಳು ಹುಂಡಿ ತುಂಬಿಸೋ God'uಗಳು
ಕಳ್ಳ-ಸುಳ್ಳ ಮಳ್ಳ-ಮಳ್ಳಿಯರ ಮಾರಾ-ಮಾರಿಗಳು
ಎಲ್ಲಾ ದೊಡ್ಡ ಕದೀಮರುಗಳು
ನೀಚ ನಿಕೃಷ್ಟ ಖಾವಿ ಖಾದಿಗಳು
ಹೊಸ ಹೊಟ್ಟೆಹುರಿಗಳು
ಹೇಳು ತಪ್ಪುಸರಿಗಳು
ಪ್ರಗತಿಯ ಮರೆತಿವೇ ಪಕ್ಷಗಳು
ಕೆಲಸಕೊಟ್ಟು ನಿಮ್ಮ ಯುಕ್ತಿಗೆ
ಒಬ್ಬ ಒಳ್ಳೆ ವ್ಯಕ್ತಿಗೆ
ಹಾಕ್ರಪ್ಪ ನಿಮ್ಮ Vote'uಗಳು
BBMP Electionಗಳು