Wednesday, 9 December 2015

ಆಲಿಂಗನ

ಪ್ರಥಮ ಪ್ರೇಮದ ಮೊದಲ ಚುಂಬನ
ಮೈಯಲ್ಲಿ ಏನೋ ‌‍ರೋಮಾಂಚನ
ನಿನ್ನ ಪ್ರೀತಿಯ ತೋಳ್ಗಳ ಆಲಿಂಗನ
ಮರೆಯುವಂತೆ ಮಾಡಿದೆ ನನ್ನೇ ನಾ

ಜೋರಾಗಿದೆ ಎದೆಯ ಸದ್ದು
ಬಿಸಿಲಲಿ ಕೂಡ ನಡುಕ ಮೈಯಲಿ
ಭೂಮಿ ಮೇಲೆ ಇದ್ದಂತೆ ಇದ್ದು
ಆಕಾಶದಲಿ ತೇಲುತಿರುವೆ ಮತ್ತಲಿ

ನನಸಾದಂತೆ ನನ್ನ ಕನಸೆಲ್ಲ
ನಾನೀಗ ನಾನಾಗಿ ಉಳಿದಿಲ್ಲ
ಹೊಸತಾಗಿ ಕಾಣುತಿದೆ ನನಗೆಲ್ಲಾ
ನೀನೆ ಆವರಿಸಿರುವೆ ನನ್ನ ಒಳಗೆಲ್ಲಾ

ಸೀರೆ ಉಟ್ಟ ತಾರೆಯೊಂದು ನನಗಾಗಿ ಧರೆಗೆ ಬಂದು
ಜೇನ ಸಿಹಿಯ ತುಟಿಯಲಿ ಕೊಟ್ಟಳು ಮುತ್ತೊಂದು
ನಾ ಕೇಳಲು, ಯಾರೇ ನೀನು ಚೆಲುವೆ…? ಎಂದು
ಅಂದಳು ನಾ ನಿನ್ನ ಅರ್ಧಾಂಗಿ, ಇಂದು ಎಂದೆಂದೂ