Sunday, 29 June 2014

ಮನಸೋತೆನಲ್ಲ


ಮಳೆ ಹನಿಗಳು ಭೂಮಿಯ ಚುಂಬಿಸುವ ವೇಳೆ
ಮಿಂಚಿನ ಹೊಳಪಂತೆ ಎದುರು ಬಂದಳಾಕೆ
ನೀಗಿಸುವಂತೆ ಭುವಿಯ ಬಾಯಾರಿಕೆ
ಹರಿಸಿದಳು ಮನದಲ್ಲಿ ಪ್ರೀತಿಯ ಹೊಳೆ

ಮೊಗದಲ್ಲಿ ಸೂರ್ಯನಂತೆ ಹೊಳೆಯುತಿತ್ತು ಬಿಂದಿಗೆ
ಮತ್ತೆ ಮತ್ತೆ ನೋಡುವಂತೆ ಸೆಳೆಯುತ್ತಿತ್ತು ಕಣ್ ಕಾಡಿಗೆ
ಆ ಚೆಂದದ ನಗುವಿಗೆ ಮರುಳಾಗದವರಿಲ್ಲ
ಅವಳ ಸೌಂದರ್ಯಕೆ ನಾ ಮನಸೋತೆನಲ್ಲ

ಹೆಣ್ಣೇ ನೀ ಈ ಭುವಿಯಷ್ಟೆ ಸುಂದರ
ನಿನ್ನೆದುರು ಏನಿಲ್ಲ ಆ ಬಾನ ಚಂದಿರ
ಕೋಗಿಲೆಯ ಸ್ವರದಂತೆ ನಿನ್ನ ಮಾತುಗಳು
ನಿನ್ನ ನಡಿಗೆಯ ಕಂಡು ನಾಚುತ್ತಿವೆ ನವಿಲುಗಳು

ಮುಂಗುರುಳು ಮುಸುಕಾಗುವಂತೆ ಮಾಡಿದೆ ಮುಗಿಲ ಬಿಲ್ಲನ್ನು
ನಿನ್ನ ಸೌಂದರ್ಯದ ಸೆರೆಮನೆಯಲ್ಲಿ ಬಂಧಿಯಾಗಿಸಿದೆ ನನ್ನನ್ನು
ಹರ್ಷ...