Wednesday 29 July 2015

ಮಾತು ಮರೆತ ಮೌನಿ ನಾನು

ನಿನ್ನ ಉಸಿರಲಿ ನಾ ಜೀವಿಸುವೆ
ನಿನ್ನ ನಗುವಲಿ ಉಸಿರಾಡುವೆ
ಪ್ರತಿ ಬಾರಿ ನಿನ್ನ ಕಂಡಾಗ
ಮೂಡುವುದು ಹೊಸರಾಗ

ಮೌನ ಮಾತಾಗಿ, ಮಾತು ಹಾಡಾಗಿ
ಹಾಡಿಗೆ ರಾಗ ಬೆರೆತು ಪ್ರೇಮ ಗೀತೆಯಾಗಿ
ಪ್ರತಿ ಪದದಲ್ಲೂ ನಿನ್ನ ನೆನಪೇ ತುಂಬಿರಲು
ಕಾತರದಿಂದ ಕಾಯುತಿವೆ ಕಣ್ಗಳು ನಿನ್ನ ಕಾಣಲು

ಕವಿತೆಯೊಳಗಡಗಿ ಕುಳಿತಿರುವೆ ನೀನು
ಬಿಡಿಸ ಹೋಗಿ ಅಲ್ಲೇ ಸೆರೆಯಾಗಿರುವೆ ನಾನು
ನಿನ್ನೆದುರು ಮಾತು ಮರೆತ ಮೌನಿ ನಾನು
ಹೇಳಲಿ ಹೇಗೆ ತಿಳಿಯದಾಗಿದೆ ಪ್ರೀತಿಯನು

ಕೇಳದಯೆ ಹೋದೆ ನೀನು ಹೇಳುವ ಮುನ್ನ
ನನ್ನ ಮೌನದೊಳಗಿನ ಪ್ರೀತಿಯ ಮಾತುನು
ಮನ ಕೂಗಿ ಜೋರಾಗಿ ಕರೆಯುತಿರಲು ನಿನ್ನ
ಹಿಂತಿರುಗಿ ಬಾರದೆ ಎಲ್ಲಿ ಮರೆಯಾದೆ ನೀನು

Sunday 26 July 2015

ಯೋಧ

ಗುಂಡಿಗೆಯಲ್ಲಿ ದೇಶವ ಬಿಗಿದಿಟ್ಟಿರುವ ತರುಣ 
ಕಣ್ಣರೆಪ್ಪೆಯ ಕದಲಿಸದೆ ಮಾಡುತಿರುವನು ಕದನ 
ಪ್ರತಿಕ್ಷಣವೂ ಎದುರು ಬಂದು ನಿಂತರು ಮರಣ 
ಭರತ ಮಾತೆಯ ಕಾಯುತಿರುವ ಒತ್ತೆಯಿಟ್ಟು ಪ್ರಾಣ 

ಭಯವೇ ಉಸಿರಾದಗ ಧೈರ್ಯದ ವಾಯುವಾಗಿ 
ತ್ಯಾಗದ ಗುರುತು ಹೊತ್ತ ಶಾಂತಿಯ ಬಾವುಟವಾಗಿ 
ಜಾತಿ - ಧರ್ಮ - ಮತವ ಮೆಟ್ಟಿ ಮೀರಿ 
ಕ್ರೌರ್ಯವಿಲ್ಲದೆ ಯುದ್ಧವ ಗೆದ್ದ ಶೂರಿ 

ಭರತ ದೇಶವೇ ತುಂಬಿ ತುಳುಕುತಿರುವ ರಕ್ತ 
ದೇಶ ಸೇವೆಯೇ ಈಶ ಸೇವೆಯೆನ್ನುವ ಭಕ್ತ 
ಭೂಮಿ ಆಕಾಶ ನೀರು ಮೂರು ದಿಕ್ಕುಗಳಲ್ಲು 
ಭಯ ಹುಟ್ಟಿಸಿರುವೆ ಶತ್ರುಗಳಿಗೆ ಕಣಕಣದಲ್ಲೂ 

ಜನರ ಶಾಂತಿಯ ಕಾಯುತಿರುವೆ 
ನಿನ್ನ ಕರುಳ ತಂತಿಯ ಮೀಟಿ 
ನಿನ್ನ ನಿಸ್ವಾರ್ಥ ತ್ಯಾಗ ಬಲಿದಾನಗಳಿಗೆ 
ಇಲ್ಲಿ ಯಾವುದೂ ಇಲ್ಲ ಸರಿಸಾಟಿ 

ಉಗ್ರರಿಗೆ ಯಮಧೂತ ನಮ್ಮ ಯೋಧ 
ಯುದ್ಧದಲ್ಲಿ ಇವನದು ಮಿಂಚಿನ ವೇಗ 
ರೋಷ-ದ್ವೇಷದಲಿ ದೇಶವೇ ಒಡೆದು ಇಬ್ಭಾಗವಾಗುತಿರುವಾಗ
ರಕ್ಷಣೆಗೆ ನುಗ್ಗಿ ಸಾಗುತಿರುವ ಧಳಪತಿ ನಿನ್ನ ಕಣಕಣವೂ ಖಡ್ಗ