Tuesday, 29 September 2015

ಒಂಥರದ ಆಸೆ

ಅದೇನೋ ಒಂಥರದ ಆಸೆ
ಬದಲಾಗುತಿದೆ ನನ್ನ ವರಸೆ
ಹೇಳಲು ಒದ್ದಾಡುತಿದೆ ಮನಸು
ಹಗಲಲ್ಲೂ ಬೀಳುತಿದೆ ಕನಸು

ಹಗಲೆಲ್ಲ ಇರುಳಂತಾಗಿ
ತಣ್ಣನೆ ಗಾಳಿಗೆ ತಲೆದೂಗಿ
ಮನಸು ನಿನ್ನನೇ ಕೂಗಿ
ಹಾಡಿದೆ ಕೋಗಿಲೆಯಾಗಿ

ಪ್ರೀತಿಯ ಹಾಡನು ಕೇಳಿ
ಚಂದಿರ ಬಂದು ನನ್ನ ಬಳಿ
ಕೇಳಿದಯಾರು ಬೆಡಗಿ?
ತೋರಲು ನಿನ್ನನೋಡುತ ನಿಂತ ಬೆರಗಾಗಿ

ಕಣ್ಣೆರೆಡು ಸಾಲದು ನಿನ್ನಂದ ನೋಡಲು
ನಾನಾಗಬಾರದಿತ್ತೆ ನೂರು ಕಣ್ಣ ನವಿಲು
ನಿನ್ನ ಸೊಬಗ ಕಂಡು ನಾಚಿದೆ ಕಾಮನಬಿಲ್ಲು
ಇನ್ನೆಷ್ಟು ವರ್ಣಿಸಲಿ ಮುಗಿದಿವೆ ಪದಗಳು

Tuesday, 15 September 2015

ಇವರು ನಮ್ಮ ದೇಶದ ಹೆಣ್ಮಕ್ಳೇನಾ?

ಚೂರೂ ಇಲ್ಲ ನಾಚಿಕೆ ಮಾನ
ಇವರು ಬಿಟ್ಟಿದ್ದಾರೆ ಎಲ್ಲವನ್ನ
ಕೇಳೋದೇ ಇಲ್ಲ ಒಳ್ಳೆಯದನ್ನ
ಮಾಡೋದು ಬರೀ ಅನಾಚಾರವನ್ನ

ಆಡೋದಿಲ್ಲ ಒಂದೂ ಒಳ್ಳೇ ಮಾತನ್ನ
ಸ್ವಲ್ಪವೂ ಇಲ್ಲ ತಾಳ್ಮೆ ಸಮಾಧಾನ
ಇವರು ಕಲಿಯೋಲ್ಲ ಬದುಕೊದನ್ನ
ಬದಲಾಯಿಸಲು ಆಗಲ್ಲ ಇವರನ್ನ

ಮೂಗ್ಮೇಲೇ ಹಿಡ್ಕೋಂಡಿರ್ತಾರೆ ಕೋಪಾನಾ
ತುಂಬಾ ಚೆನ್ನಾಗಿ ಮಾಡ್ತಾರೆ ನಾಟಕಾನಾ
ಮುಖದ ತುಂಬಾ ಚ್ಕೋತಾರೆ ಬಣ್ಣಾನ
ಮಾತಲ್ಲೇ ಮಾಡ್ತಾರೆ ಎಲ್ರಿಗು ಮೋಡಿನಾ

ಇವರಿಂದ ಕಲಿಬೇಕು ಹೇಳೋದು ಸುಳ್ಳನ್ನ
ನಂಬಿಂದ್ರೆ ಅಲ್ಲಿಗೆ ಮುಗಿಯಿತು ನಮ್ ಜೀವ್ನ
ಬಂಡೆಗೆ ಹೋಗಿ ಚಚ್ಕೋಬೇಕು ತಲೆಯನ್ನ
ಬಿಟ್ರೆ ತಕ್ಕೋತಾರೆ ಹೆಣದ ಮುಂದೆ Selfie

ಮಾಡೋದು ಬರೀ ಬಿಟ್ಟಿ ಶೋಕೀನ
ದುಡ್ಡು ಅಂದ್ರೆ ಬಿಡ್ತಾರೆ ದೊಡ್ಡದಾಗಿ ಬಾಯನ್ನ
ಇವರದು ಒಂದು ಜೀವನಾನ?
ದೇವ್ರೇ ಹೇಳ್ಬೇಕು ಈ ಪ್ರಶ್ನೆಗೆ ಉತ್ತರಾನ

ರೂಢಿಸಿಕೊಂಡಿದ್ದಾರೆ ಕೆಟ್ಟ Nature
ಮರೆತು ಬಿಟ್ಟಿದ್ದಾರೆ ನಮ್ಮ Culture
ಇವರು ನಮ್ಮ ದೇಶದ ಹೆಣ್ಮಕ್ಳೇನಾ?
ಹೇಗೆ ಕೊಡೋದು ಇವರಿಗೆ Respect’?

Wednesday, 2 September 2015

ಸ್ವಲ್ಪ ಲೂಸು

ನನಗಿಷ್ಟ ಬಂದಂತೆ ಹಾಡುವೆನು 
ನನಗನಿಸಿದ್ದು ನಾ ಮಾಡುವೆನು 
ನನಗೆ ನಾನೇ ಮಹಾರಾಜನು 
ಸ್ವಲ್ಪ ಲೂಸು ಸ್ವಲ್ಪ ಟೈಟು ನಾನು 

ನನ್ನ ಬಾಯಿಗೆ ಯಾವುದೇ ಫಿಲ್ಟರ್ ಇಲ್ಲ 
ಬಣ್ಣದ ಮಾತು ಆಡೋದಿಕ್ಕೆ ಬರೋದಿಲ್ಲ 
ಕೇಳೋದಿಲ್ಲ ನಾನು ಯಾರ ಮಾತನು 
ಹೇಳೋದಿಲ್ಲ ಪ್ರಾಣ ಹೋದರು ಸುಳ್ಳನು 

ನೀರಿಲ್ಲದ ನದಿಯಲಿ ಮೀನು ಹಿಡಿಯುವೆ 
ಮರಳುಗಾಡಲಿ ಹೂವನು ಬೆಳೆಯುವೆ 
ಕೊಡೆಯಿಲ್ಲದೆ ನಡೆಯುವೆ ಮಳೆಯಲಿ 
ಬೇಕಿಲ್ಲ ನನಗ್ಯಾರೂ ಜೊತೆಯಲಿ 

ನನ್ನಂಥವರು ಸಿಗುವುದು ಬಲು ಅಪರೂಪ 
ನನ್ನ ಬಗ್ಗೆ ಮಾಡುವ ಮೊದಲು ಆರೋಪ 
ನಿಮಗೆ ತಿಳಿದಿರಲಿ ನೀವು ಮಾಡಿರುವ ಪಾಪ 
ಈ ಜಗವೇ ಒಂದು ದೊಡ್ಡ ಮೃತ್ಯು ಕೂಪ