Tuesday, 29 September 2015

ಒಂಥರದ ಆಸೆ

ಅದೇನೋ ಒಂಥರದ ಆಸೆ
ಬದಲಾಗುತಿದೆ ನನ್ನ ವರಸೆ
ಹೇಳಲು ಒದ್ದಾಡುತಿದೆ ಮನಸು
ಹಗಲಲ್ಲೂ ಬೀಳುತಿದೆ ಕನಸು

ಹಗಲೆಲ್ಲ ಇರುಳಂತಾಗಿ
ತಣ್ಣನೆ ಗಾಳಿಗೆ ತಲೆದೂಗಿ
ಮನಸು ನಿನ್ನನೇ ಕೂಗಿ
ಹಾಡಿದೆ ಕೋಗಿಲೆಯಾಗಿ

ಈ ಪ್ರೀತಿಯ ಹಾಡನು ಕೇಳಿ
ಆ ಚಂದಿರ ಬಂದು ನನ್ನ ಬಳಿ
ಕೇಳಿದ… ಯಾರು ಆ ಬೆಡಗಿ?
ತೋರಲು ನಿನ್ನ… ನೋಡುತ ನಿಂತ ಬೆರಗಾಗಿ

ಕಣ್ಣೆರೆಡು ಸಾಲದು ನಿನ್ನಂದ ನೋಡಲು
ನಾನಾಗಬಾರದಿತ್ತೆ ನೂರು ಕಣ್ಣ ನವಿಲು
ನಿನ್ನ ಸೊಬಗ ಕಂಡು ನಾಚಿದೆ ಕಾಮನಬಿಲ್ಲು
ಇನ್ನೆಷ್ಟು ವರ್ಣಿಸಲಿ ಮುಗಿದಿವೆ ಪದಗಳು

No comments:

Post a Comment