Tuesday 24 March 2015

ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು

ಲಂಗ ದಾವಣಿ ಬಿಟ್ಟು
ತುಂಡು ಜೀನ್ಸು ತೊಟ್ಟು
ಮೇಲೆ ಕುದುರೆ ಜುಟ್ಟು
ಹಣೇಲಿ ಸ್ಟಿಕ್ಕರ್ ಬೊಟ್ಟು
ಟೈಟು ಫಿಟ್ಟು ಡ್ರೆಸ್ಸು ತೊಟ್ಟು
ಹಿಡ್ಕೊಂಡು ಬಿಟ್ಟು ಕೈಲಿ ಸಿಗರೇಟು
ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು
ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು

ಡ್ರೆಸ್ಸು ಡ್ರೆಸ್ಸು ಛೇಂಜ್ ಮಾಡ್ದಂಗೆ
ಬಾಯ್'ಫ್ರೆಂಡ್'ನು ಛೇಂಜ್ ಮಾಡ್ತಾರೋ
ಎಸ್ಸೆಮ್ಮೆಸ್ಸು ಫೇಸ್'ಬುಕ್ ಒಳಗೆ
ದಿನವೆಲ್ಲಾ ಮುಳುಗಿರ್ತಾರೋ
ಬರಿ ಕಾಲವನು ಬಂದ್ರೆ ಸಿಗೋ ಬೈಕಲಿ ಓಟ
ಹೊಸ ಕಾರವನು ಬಂದ್ರೆ ತಗೋ ಬೈಕಿಗು ಟಾಟ
ಸಿಕ್ರೆ ಮಿಕಾ ಕುಯ್ದಾಗ್ತಾರೆ ಯಗ್ಗಾ ಮುಗ್ಗಾ
ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು
ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು

ಸ್ಟ್ರೈಟು ಕೂದ್ಲು ಇದ್ರೆ ಕರ್ಲು
ಕರ್ಲಿದ್ರೆ ಸ್ಟ್ರೈಟ್ ಮಾಡ್ತಾರೋ
ಇವ್ರ ಪಾರ್ಲರ್ ಬಿಲ್ಲು ಎತ್ತೋ ದಿಲ್ಲು
ಶ್ರೀರಾಮಂಗು ಇಲ್ಲ ಕಣ್ರೋ
ಬೆನ್ನ ಮೇಲೆ ಟ್ಯಾಟು ಕೆನ್ನೆ ಮೇಲೆ ಪೈಂಟು
ಮೂಗಿನ ಮೇಲೆ ಸಿಟ್ಟು ಮೈಯ ತುಂಬಾ ಸೆಂಟು
ಹಠ ಹಠ ಸಿಕ್ಕಾಪಟ್ಟೆ ಹಠ ಹಠ
ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು
ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು

ಕಿವಿಯ ಓಲೆ ಜಾರಿ ಅಲ್ಲೆ
ನಿಂತೈತೆ ಒಕ್ಕಳ ಮ್ಯಾಲೆ
ಮಲ್ಲಿಗೆ ಮಾಲೆ ಮ್ಯೂಸಿಯಂನಲ್ಲೆ
ನೋಡ್ಬೇಕು ನಾವು ಇನ್ಮೇಲೆ
ಇವ್ರು ನಾಲ್ಕೆ ಅಡಿ ಸ್ಲಿಪ್ಪರ್ ಇನ್ನೊಂದು ಅಡಿ
ಡಯೆಟ್ ಮಾಡಿ ಮಾಡಿ ಹೊಡಿ ಪೊರಕೆ ಕಡ್ಡಿ
ಲಕಲಕ ನೋಡೊಕ್ ಮಾತ್ರ ಲಕಲಕ
ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು
ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು

Wednesday 4 March 2015

ಪ್ರಾಬ್ಲಮ್

ಪ್ರಾ...ಬ್ಲ...ಮ್... ಟಫೆಸ್ಟ್ ಪ್ರಾಬ್ಲಮ್...
ನಾನು ಏನ್ ಹೇಳಿದ್ರು ಇವರಿಗೆ ಅದು ಪ್ರಾಬ್ಲಮ್...
ನಾನು ಮಾತಾಡೊದೆ ಒಂದು ದೊಡ್ಡ ಪ್ರಾಬ್ಲಮ್...
ನನ್ನ ಮೌನ ಮತ್ತೊಂದು ಗ್ರೇಟೆಸ್ಟ್ ಪ್ರಾಬ್ಲಮ್...


ನಾನ್ ಯೆಸ್ ಅಂದ್ರು ಪ್ರಾಬ್ಲಮ್
ನಾನ್ ನೋ ಅಂದ್ರು ಪ್ರಾಬ್ಲಮ್
ನಾನ್ ಸ್ಟಾರ್ಟ್ ಅಂದ್ರು ಪ್ರಾಬ್ಲಮ್
ಸ್ಟಾಪ್ ಸ್ಟಾಪ್ ಅಂದ್ರು ಪ್ರಾಬ್ಲಮ್
ಐ ವಿಲ್ ಕೇರ್ ಅಂದ್ರು ಪ್ರಾಬ್ಲಮ್
ಐ ಡೊಂಟ್ ಕೇರ್ ಅಂದ್ರು ಪ್ರಾಬ್ಲಮ್


ಗೋಳು ಹೇಳಿಕೊಂಡರೆ ಓಳು ಓಳು ಅಂತಾರೆ
ಇವರ ಗೋಳ ಪರಿಹಾರಕೆ ನನ್ನತ್ರಾನೆ ಬರ್ತಾರೆ
ಸತ್ಯ ಸುಲಿದಿಟ್ಟರೆ ಹುಚ್ಚ ಲುಚ್ಚ ಅಂತಾರೆ
ನಂದೆ ಸ್ಕೂಲು ಸ್ಕೇಲಲ್ಲಿ ನಂಗೆ ಟ್ಯೂಷನ್ ಮಾಡ್ತಾರೆ
ಸ್ವಾರ್ಥವೆ ಲವ್ ಅಂದ್ರೆ ಲಬ್ಬೊ ಲಬ್ಬೊ ಅಂತಾರೆ
ಕಾಮದ ಮುಖವಾಡ ಪ್ರೇಮ ಅಂದ್ರೆ ಬೈತಾರೆ


ನಾನ್ ನಾನು ಅಂದ್ರು ಪ್ರಾಬ್ಲಮ್
ನೀನ್ ನೀನು ಅಂದ್ರು ಪ್ರಾಬ್ಲಮ್
ನಾನ್ ಸತ್ಯ ಹೇಳಿದ್ರು ಪ್ರಾಬ್ಲಮ್
ಸುಳ್ಳು ಹೇಳೋಕೆ ಬರ್ದಿರೋದೆ ಪ್ರಾಬ್ಲಮ್
ನಾನ್ ಫ್ರೆಂಡ್ ಅಂದ್ರು ಪ್ರಾಬ್ಲಮ್
ಗರ್ಲ್'ಫ್ರೆಂಡ್ ಅಂದ್ರು ಪ್ರಾಬ್ಲಮ್


ಬುದ್ಧಿ ಮಾತು ಹೇಳಿದರೆ ವೇದಾಂತಿ ಅಂತ ಕರಿತಾರೆ
ಪೋಲಿ ಮಾತು ಆಡಿದರೆ ಕೊಳಕು ವ್ಯಕ್ತಿ ಅಂತಾರೆ
ಜಾಲಿ ಮಾಡೋಣ ಅಂದರೆ ಜವಬ್ದಾರಿ ಇಲ್ಲ ಅಂತಾರೆ
ಸುಮ್ಮನೆ ಮಲಗಿದ್ದರೆ ಸೋಮಾರಿ ಅಂತ ಉಗಿತಾರೆ
ನನ್ನ ಪಾಡಿಗೆ ನಾನಿದ್ರೆ ಧಿಮಾಕು ಅಂತ ಕರಿತಾರೆ
ನೇರವಾಗಿ ಮಾತನಾಡಿದರೆ ಅಂಹಕಾರ ಮೂತಿ ಮುರಿತಾರೆ


ನಾನ್ ನಗ್ತಾ ಇದ್ರು ಪ್ರಾಬ್ಲಮ್
ನಾನ್ ಅಳ್ತಾ ಇದ್ರು ಪ್ರಾಬ್ಲಮ್
ನಾನ್ ಬರ್ತೀನಿ ಅಂದ್ರು ಪ್ರಾಬ್ಲಮ್
ನಾನ್ ಹೋಗ್ತೀನಿ ಅಂದ್ರು ಪ್ರಾಬ್ಲಮ್
ನಾನ್ ಏನ್ ಮಾಡಿದ್ರು ಪ್ರಾಬ್ಲಮ್
ಏನೂ ಮಾಡದೇ ಇದ್ರು ಪ್ರಾಬ್ಲಮ್
ಪ್ರಾ...ಬ್ಲ...ಮ್... ಟಫೆಸ್ಟ್ ಪ್ರಾಬ್ಲಮ್...

Monday 2 March 2015

ಈ ಹುಡ್ಗೀರೆಲ್ಲ ಹಿಂಗೇ...

ಸೂಟು ಬೂಟು ಕಾರಿದ್ರೆ
ಹಾಯ್ ಹಾಯ್ ಅಂತಾರೆ
ಡೇಟು - ಪಬ್ಬು ಅಂತಂದ್ರೆ
ಎಂಜಾಯ್ ಮಾಡ್ತಾರೆ
ಒಂದು ವೇಳೆ ಜೇಬು ಖಾಲಿ ಆದ್ರೆ
ಗುಡ್ ಬೈ ಅಂತಾರೆ

ಹುಡ್ಗೀರೆಲ್ಲ ಹಿಂಗೇ... ಹುಡ್ಗೀರೆಲ್ಲ ಹಿಂಗೇ...
ಹುಡ್ಗೀರೆಲ್ಲ ಹಿಂಗೇ... ಹುಡ್ಗೀರೆಲ್ಲ ಹಿಂಗೇ...

ಮಳ್ಳಿ-ಮಳ್ಳಿ ಮೈ ಹೂವ ಬಳ್ಳಿ
ಅಲ್ಲಲ್ಲಿ ಅಂಕು - ಡೊಂಕು
ಒಂದು ಕ್ಯಾಟು ವಾಕು
ಒಂದು ಕೆಟ್ಟ ಲುಕ್ಕು
ಕೊಟ್ಟು ಹಿಡಿಸುತಾಳೆ ಮಂಕು

ಕೆಂಪು ಕೆನ್ನೆ ಕಣ್ಣ ಸನ್ನೆಗೆ ಬಿದ್ರೆ ಗಾಡು ಕೇಸು
ಒಂದಿಷ್ಟು ದಾಡಿ ಮುಖದಲ್ಲಿ ಮೂಡಿ ಆಗ್ತಾರೆ ದೇವದಾಸು
ಇವ್ರು ಇಂಪ್ರೂವ್ ಆಗಲ್ಲ ನಾವ್ ಕಾದ್ರೂ ಲೈಫೆಲ್ಲಾ
ಗೊತ್ತಿದ್ರೂ ನಮಗೆಲ್ಲ ನಾವ್ ಬುದ್ಧಿ ಕಲಿಯಲ್ಲ

ಹುಡ್ಗೀರೆಲ್ಲ ಹಿಂಗೇ... ಹುಡ್ಗೀರೆಲ್ಲ ಹಿಂಗೇ...
ಹುಡ್ಗೀರೆಲ್ಲ ಹಿಂಗೇ... ಹುಡ್ಗೀರೆಲ್ಲ ಹಿಂಗೇ...

ಬಳುಕುತ್ತ ಬಂದ್ರೆ ಲವ್ ಯೂ ಅಂದ್ರೆ
ನಮ್ಗೆ ಸ್ವರ್ಗ ಮೂರೆ ಗೇಣು
ಮಾತಲ್ಲಿ ಮುತ್ತು ನಂಬಿದರೆ ಕುತ್ತು
ನಾವ್ ಹಾಕ್ಕೊಬೇಕು ನೇಣು

ಪಾರ್ಟಿಂದ ಪಾರ್ಟಿಗೆ ಹಾರೋ ಆಟಕೆ ಫೇಮಸ್ಸು ಪುಡಾರಿ
ಹಾರ್ಟಿಂದ ಹಾರ್ಟಿಗೆ ದೊಂಬರಾಟವ ಆಡ್ತಾಳೆ ಟಪೋರಿ
ಇವ್ಳು ನೋ ಅಂದ್ರೆ ಯೆಸ್ಸು ಪ್ಲಸ್ ಅಂದ್ರೆ ಮೈನಸ್ಸು
ಇವ್ಳಾದ್ರೆ ಮಿಸ್ಸಸ್ಸು ಲೈಫೆಲ್ಲಾ ಸರ್ಕಸ್ಸು

ಹುಡ್ಗೀರೆಲ್ಲ ಹಿಂಗೇ... ಹುಡ್ಗೀರೆಲ್ಲ ಹಿಂಗೇ...
ಹುಡ್ಗೀರೆಲ್ಲ ಹಿಂಗೇ... ಹುಡ್ಗೀರೆಲ್ಲ ಹಿಂಗೇ...