Wednesday, 4 March 2015

ಪ್ರಾಬ್ಲಮ್

ಪ್ರಾ...ಬ್ಲ...ಮ್... ಟಫೆಸ್ಟ್ ಪ್ರಾಬ್ಲಮ್...
ನಾನು ಏನ್ ಹೇಳಿದ್ರು ಇವರಿಗೆ ಅದು ಪ್ರಾಬ್ಲಮ್...
ನಾನು ಮಾತಾಡೊದೆ ಒಂದು ದೊಡ್ಡ ಪ್ರಾಬ್ಲಮ್...
ನನ್ನ ಮೌನ ಮತ್ತೊಂದು ಗ್ರೇಟೆಸ್ಟ್ ಪ್ರಾಬ್ಲಮ್...


ನಾನ್ ಯೆಸ್ ಅಂದ್ರು ಪ್ರಾಬ್ಲಮ್
ನಾನ್ ನೋ ಅಂದ್ರು ಪ್ರಾಬ್ಲಮ್
ನಾನ್ ಸ್ಟಾರ್ಟ್ ಅಂದ್ರು ಪ್ರಾಬ್ಲಮ್
ಸ್ಟಾಪ್ ಸ್ಟಾಪ್ ಅಂದ್ರು ಪ್ರಾಬ್ಲಮ್
ಐ ವಿಲ್ ಕೇರ್ ಅಂದ್ರು ಪ್ರಾಬ್ಲಮ್
ಐ ಡೊಂಟ್ ಕೇರ್ ಅಂದ್ರು ಪ್ರಾಬ್ಲಮ್


ಗೋಳು ಹೇಳಿಕೊಂಡರೆ ಓಳು ಓಳು ಅಂತಾರೆ
ಇವರ ಗೋಳ ಪರಿಹಾರಕೆ ನನ್ನತ್ರಾನೆ ಬರ್ತಾರೆ
ಸತ್ಯ ಸುಲಿದಿಟ್ಟರೆ ಹುಚ್ಚ ಲುಚ್ಚ ಅಂತಾರೆ
ನಂದೆ ಸ್ಕೂಲು ಸ್ಕೇಲಲ್ಲಿ ನಂಗೆ ಟ್ಯೂಷನ್ ಮಾಡ್ತಾರೆ
ಸ್ವಾರ್ಥವೆ ಲವ್ ಅಂದ್ರೆ ಲಬ್ಬೊ ಲಬ್ಬೊ ಅಂತಾರೆ
ಕಾಮದ ಮುಖವಾಡ ಪ್ರೇಮ ಅಂದ್ರೆ ಬೈತಾರೆ


ನಾನ್ ನಾನು ಅಂದ್ರು ಪ್ರಾಬ್ಲಮ್
ನೀನ್ ನೀನು ಅಂದ್ರು ಪ್ರಾಬ್ಲಮ್
ನಾನ್ ಸತ್ಯ ಹೇಳಿದ್ರು ಪ್ರಾಬ್ಲಮ್
ಸುಳ್ಳು ಹೇಳೋಕೆ ಬರ್ದಿರೋದೆ ಪ್ರಾಬ್ಲಮ್
ನಾನ್ ಫ್ರೆಂಡ್ ಅಂದ್ರು ಪ್ರಾಬ್ಲಮ್
ಗರ್ಲ್'ಫ್ರೆಂಡ್ ಅಂದ್ರು ಪ್ರಾಬ್ಲಮ್


ಬುದ್ಧಿ ಮಾತು ಹೇಳಿದರೆ ವೇದಾಂತಿ ಅಂತ ಕರಿತಾರೆ
ಪೋಲಿ ಮಾತು ಆಡಿದರೆ ಕೊಳಕು ವ್ಯಕ್ತಿ ಅಂತಾರೆ
ಜಾಲಿ ಮಾಡೋಣ ಅಂದರೆ ಜವಬ್ದಾರಿ ಇಲ್ಲ ಅಂತಾರೆ
ಸುಮ್ಮನೆ ಮಲಗಿದ್ದರೆ ಸೋಮಾರಿ ಅಂತ ಉಗಿತಾರೆ
ನನ್ನ ಪಾಡಿಗೆ ನಾನಿದ್ರೆ ಧಿಮಾಕು ಅಂತ ಕರಿತಾರೆ
ನೇರವಾಗಿ ಮಾತನಾಡಿದರೆ ಅಂಹಕಾರ ಮೂತಿ ಮುರಿತಾರೆ


ನಾನ್ ನಗ್ತಾ ಇದ್ರು ಪ್ರಾಬ್ಲಮ್
ನಾನ್ ಅಳ್ತಾ ಇದ್ರು ಪ್ರಾಬ್ಲಮ್
ನಾನ್ ಬರ್ತೀನಿ ಅಂದ್ರು ಪ್ರಾಬ್ಲಮ್
ನಾನ್ ಹೋಗ್ತೀನಿ ಅಂದ್ರು ಪ್ರಾಬ್ಲಮ್
ನಾನ್ ಏನ್ ಮಾಡಿದ್ರು ಪ್ರಾಬ್ಲಮ್
ಏನೂ ಮಾಡದೇ ಇದ್ರು ಪ್ರಾಬ್ಲಮ್
ಪ್ರಾ...ಬ್ಲ...ಮ್... ಟಫೆಸ್ಟ್ ಪ್ರಾಬ್ಲಮ್...

No comments:

Post a Comment