Friday, 1 January 2016

Happy New Year

ರಾತ್ರಿಯೆಲ್ಲಾ ಕಂಠಪೂರ್ತಿ ಕುಡಿದು
ಸಿಕ್ಕಲ್ಲೆಲ್ಲಾ ಹಚ್ಚಿಸಿ ಪಟಾಕಿ ಸಿಡಿಮದ್ದು
ಬೈಕ್ ಹತ್ತಿ ಊರೆಲ್ಲಾ ರೌಂಡು ಹೊಡೆದು
ಬೆಳಗ್ಗೆ ಹತ್ತಕ್ಕೆ ಹ್ಯಾಂಗೋವರ್ ಅಲ್ಲಿ ಎದ್ದು
Oh Wait… Let’s Say Altogether
A Very Happy New Year…
ಸಿಡಿವ ತಲೆಗೆ ಸುಡುವ ನೀರು ಹಾಕಿ
ಸೊಂಪು ಕೂದಲಿಗೆ ಶ್ಯಾಂಪೂ ಹಚ್ಚಿ ತಿಕ್ಕಿ
ಮನೇಲಿ ಬೈತಾರಂತ ಶಾಸ್ತ್ರಕ್ಕೆ ಸ್ನಾನ ಮಾಡಿ
ಕೈಮುಕ್ಕೊಂಡು ದೇವ್ರಿಗೊಂದು ಸ್ತೋತ್ರ ಹಾಡಿ
Oh Wait… Let’s Say Altogether
A Very Happy New Year…
ಫೋಟೋಗೊಂದು ಪೋಸ್ ಮೇಕಪ್ ಮಾಡ್ಕೊಂಡು
ಕಟ್ಮಾಡಿದ್ ಕೇಕ್ ಮುಖಕ್ಕೆಲ್ಲಾ ಮೆತ್ಕೊಂಡು
ಫೇಸ್ಬುಕ್ಕಲ್ಲಿ ಪಿಕ್ಚರ್ಸನೆಲ್ಲಾ ಮಾಡಿ ಉಪ್ಲೋಡು
ವಾಟ್ಸ್ಯಾಪ್ಪಲ್ಲಿ ಎಲ್ರಿಗೂ ಅದನ್ ಮಾಡಾಯ್ತು ಫಾರ್ವಾಡು
Oh Wait… Let’s Say Altogether
A Very Happy New Year…
ಊರ್ತುಂಬಾ ಸಂಭ್ರಮದ ಆಚರಣೆಯ ಸದ್ದೆ
ರಾತ್ರಿ ಎಷ್ಟೋತ್ತಾದ್ರು ಗಲಾಟೆಗೆ ಬರ್ಲಿಲ್ಲ ನಿದ್ದೆ
ಕೆಲ್ಸಕ್ ಹೋಗ್ಬೇಕಲ ಅಂತ ಬೆಳಗ್ಗೆ ಬೇಗ ಎದ್ದೆ
ಎಂದಿನಂತೆ ತಿನ್ನೋಕೆ ರೆಡಿ ಇತ್ತು ಬಸ್ಸಾರು ಮುದ್ದೆ
Oh Wait… Let’s Say Altogether
A Very Happy New Year…
ಒಂದಿಷ್ಟು ಮಂದಿದು ಅದೇನೋ ಪ್ಲಾನು
ಕೆಲವೊಬ್ರುದು ಕುಂತಲ್ಲೆ ಸೆಲೆಬ್ರೇಷನ್ನು
ಒಂದು ವಾರದಿಂದ ಮುಗಿಯದ ಪ್ರಿಪರೇಷನ್ನು
ಷೋ ಆಫ್’ಗೊಂದು ರೆಡಿಮಾಡಿ ರೆಸಲ್ಯೂಷನ್ನು
Oh Wait… Let’s Say Altogether
A Very Happy New Year…
ಮೊಬೈಲ್ಲಿ ಇದ್ದಿದ್ ನಂಬರ್ಗೆಲ್ಲ ಮಾಡಿ ಮೆಸೇಜು ಕಾಲು
ತಿಳಿಸಿ ಆಯ್ತು ಅವ್ರಿಗೆಲ್ಲಾ ಹೊಸ ವರ್ಷದ ಶುಭಾಷಯಗಳು
ಇದೆಲ್ಲಾ ಜಾಲಿ ಇವತ್ತಿಗಷ್ಟೆ ನೀವ್ ಏನೇ ಹೇಳಿ
ನಾಳೆಯಿಂದ ಮತ್ತದೇ ಖಾಲಿ ಜೀವ್ನ ಮಾಮೂಲಿ
Oh Wait… Let’s Say Altogether
A Very Happy New Year…

1 comment: