Friday, 1 January 2016

Happy New Year

ರಾತ್ರಿಯೆಲ್ಲಾ ಕಂಠಪೂರ್ತಿ ಕುಡಿದು
ಸಿಕ್ಕಲ್ಲೆಲ್ಲಾ ಹಚ್ಚಿಸಿ ಪಟಾಕಿ ಸಿಡಿಮದ್ದು
ಬೈಕ್ ಹತ್ತಿ ಊರೆಲ್ಲಾ ರೌಂಡು ಹೊಡೆದು
ಬೆಳಗ್ಗೆ ಹತ್ತಕ್ಕೆ ಹ್ಯಾಂಗೋವರ್ ಅಲ್ಲಿ ಎದ್ದು
Oh Wait… Let’s Say Altogether
A Very Happy New Year…
ಸಿಡಿವ ತಲೆಗೆ ಸುಡುವ ನೀರು ಹಾಕಿ
ಸೊಂಪು ಕೂದಲಿಗೆ ಶ್ಯಾಂಪೂ ಹಚ್ಚಿ ತಿಕ್ಕಿ
ಮನೇಲಿ ಬೈತಾರಂತ ಶಾಸ್ತ್ರಕ್ಕೆ ಸ್ನಾನ ಮಾಡಿ
ಕೈಮುಕ್ಕೊಂಡು ದೇವ್ರಿಗೊಂದು ಸ್ತೋತ್ರ ಹಾಡಿ
Oh Wait… Let’s Say Altogether
A Very Happy New Year…
ಫೋಟೋಗೊಂದು ಪೋಸ್ ಮೇಕಪ್ ಮಾಡ್ಕೊಂಡು
ಕಟ್’ಮಾಡಿದ್ ಕೇಕ್’ನ ಮುಖಕ್ಕೆಲ್ಲಾ ಮೆತ್ಕೊಂಡು
ಫೇಸ್’ಬುಕ್ಕಲ್ಲಿ ಪಿಕ್ಚರ್ಸನೆಲ್ಲಾ ಮಾಡಿ ಉಪ್’ಲೋಡು
ವಾಟ್ಸ್ಯಾಪ್ಪಲ್ಲಿ ಎಲ್ರಿಗೂ ಅದನ್ ಮಾಡಾಯ್ತು ಫಾರ್ವಾಡು
Oh Wait… Let’s Say Altogether
A Very Happy New Year…
ಊರ್’ತುಂಬಾ ಸಂಭ್ರಮದ ಆಚರಣೆಯ ಸದ್ದೆ
ರಾತ್ರಿ ಎಷ್ಟೋತ್ತಾದ್ರು ಆ ಗಲಾಟೆಗೆ ಬರ್ಲಿಲ್ಲ ನಿದ್ದೆ
ಕೆಲ್ಸಕ್ ಹೋಗ್ಬೇಕಲ ಅಂತ ಬೆಳಗ್ಗೆ ಬೇಗ ಎದ್ದೆ
ಎಂದಿನಂತೆ ತಿನ್ನೋಕೆ ರೆಡಿ ಇತ್ತು ಬಸ್ಸಾರು ಮುದ್ದೆ
Oh Wait… Let’s Say Altogether
A Very Happy New Year…
ಒಂದಿಷ್ಟು ಮಂದಿದು ಅದೇನೋ ಪ್ಲಾನು
ಕೆಲವೊಬ್ರುದು ಕುಂತಲ್ಲೆ ಸೆಲೆಬ್ರೇಷನ್ನು
ಒಂದು ವಾರದಿಂದ ಮುಗಿಯದ ಪ್ರಿಪರೇಷನ್ನು
ಷೋ ಆಫ್’ಗೊಂದು ರೆಡಿಮಾಡಿ ರೆಸಲ್ಯೂಷನ್ನು
Oh Wait… Let’s Say Altogether
A Very Happy New Year…
ಮೊಬೈಲ್’ಲಿ ಇದ್ದಿದ್ ನಂಬರ್ಗೆಲ್ಲ ಮಾಡಿ ಮೆಸೇಜು ಕಾಲು
ತಿಳಿಸಿ ಆಯ್ತು ಅವ್ರಿಗೆಲ್ಲಾ ಹೊಸ ವರ್ಷದ ಶುಭಾಷಯಗಳು
ಇದೆಲ್ಲಾ ಜಾಲಿ ಇವತ್ತಿಗಷ್ಟೆ ನೀವ್ ಏನೇ ಹೇಳಿ
ನಾಳೆಯಿಂದ ಮತ್ತದೇ ಖಾಲಿ ಜೀವ್ನ ಮಾಮೂಲಿ
Oh Wait… Let’s Say Altogether
A Very Happy New Year…

Wednesday, 9 December 2015

ಆಲಿಂಗನ

ಪ್ರಥಮ ಪ್ರೇಮದ ಮೊದಲ ಚುಂಬನ
ಮೈಯಲ್ಲಿ ಏನೋ ‌‍ರೋಮಾಂಚನ
ನಿನ್ನ ಪ್ರೀತಿಯ ತೋಳ್ಗಳ ಆಲಿಂಗನ
ಮರೆಯುವಂತೆ ಮಾಡಿದೆ ನನ್ನೇ ನಾ

ಜೋರಾಗಿದೆ ಎದೆಯ ಸದ್ದು
ಬಿಸಿಲಲಿ ಕೂಡ ನಡುಕ ಮೈಯಲಿ
ಭೂಮಿ ಮೇಲೆ ಇದ್ದಂತೆ ಇದ್ದು
ಆಕಾಶದಲಿ ತೇಲುತಿರುವೆ ಮತ್ತಲಿ

ನನಸಾದಂತೆ ನನ್ನ ಕನಸೆಲ್ಲ
ನಾನೀಗ ನಾನಾಗಿ ಉಳಿದಿಲ್ಲ
ಹೊಸತಾಗಿ ಕಾಣುತಿದೆ ನನಗೆಲ್ಲಾ
ನೀನೆ ಆವರಿಸಿರುವೆ ನನ್ನ ಒಳಗೆಲ್ಲಾ

ಸೀರೆ ಉಟ್ಟ ತಾರೆಯೊಂದು ನನಗಾಗಿ ಧರೆಗೆ ಬಂದು
ಜೇನ ಸಿಹಿಯ ತುಟಿಯಲಿ ಕೊಟ್ಟಳು ಮುತ್ತೊಂದು
ನಾ ಕೇಳಲು, ಯಾರೇ ನೀನು ಚೆಲುವೆ…? ಎಂದು
ಅಂದಳು ನಾ ನಿನ್ನ ಅರ್ಧಾಂಗಿ, ಇಂದು ಎಂದೆಂದೂ

Sunday, 29 November 2015

ಪುಟ್ಟ ಕಣ್ಣ ಸನ್ನೆ

ನಿನ್ನ ಜೊತೆ ಶುರುವಾಗಿದೆ ಪ್ರೀತಿಯ ಸಂಬಂಧ
ಎಷ್ಟೇ ಜನ್ಮ ಕಳೆದರೂ ಅಳಿಸಲಾಗದು ಈ ಬಂಧ
ಹೇಳ ತೀರಲಾಗದು ನನಗಾಗುತಿರುವ ಆನಂದ
ಕೊನೆಯವರೆಗೂ ಸಾಗುತಿರಲಿ ನಲ್ಮೆಯ ಅನುಬಂಧ

ನೆನ್ನೆವರೆಗೂ ಒಂಟಿಯಾಗಿ ಇದ್ದೆ ನಾ
ನಿನ್ನ ಸನಿಹದೀ ಪುಳಕಗೊಂಡಿದೆ ಮನ
ಆ ಪುಟ್ಟ ಕಣ್ಣ ಸನ್ನೆಯಲೇ ಕೊಡು ಪ್ರೀತಿಯ ಆಹ್ವಾನ
ನಿನ್ನ ಜೊತೆಯೇ ಕಳೆಯುವೆ ಎಲ್ಲಾ ನಾಳೆಯ ಜೀವನ

ಹೊಸ ಆಸೆ ಚಿಗುರೊಡೆದಿದೆ ನನ್ನ ಮನದಲಿ
ಮಗುವಾಗಿ ಮಲಗುವಾಸೆ ನಿನ್ನ ಮಡಿಲಲಿ
ಬೇರೆಲ್ಲ ಶೂನ್ಯ ನೀನಿರುವಾಗ ಜೊತೆಯಲಿ
ಹಾರೋಣ ಬಾ ಹಕ್ಕಿಗಳಾಗಿ ನೀಲಿ ಬಾನಲಿ

ನನ್ನ ಖುಷಿಯನು ನಿನಗಂಚುವೆ
ನಿನ್ನ ನೋವನು ನಾ ಭರಿಸುವೆ
ನಿನ್ನ ಹೊರತು ಬೇರೇನೂ ಈಗ ನಾ ಕಾಣೆ
ನನ್ನೆಲ್ಲಾ ಜನ್ಮಕು ಇನ್ನು ಸಂಗಾತಿ ನೀನೆ