Bang Bang ಬೆಂಗಳೂರು
ಕೆಂಪೇಗೌಡ
ಕಟ್ಟಿದ ಬೆಂದಕಾಳೂರು
ಪುಷ್ಪಗಳಿಂದ
ಕಂಗೊಳಿಸುವ ಉದ್ಯಾನ ನಗರಿ
ಊರಿನ
ತುಂಬೆಲ್ಲಾ ಹಸಿರುಸಿರಿನ ಸಿರಿ
ಇದುವೆ
ನಮ್ಮ ನೆಚ್ಚಿನ ಮಹಾನಗರ
ಬನ್ನಿ
ಎಲ್ಲಾ ಹಾಡೋಣ ಪ್ರೀತಿಯ ಸ್ವರ
ಒಂದು
ಊರೆಂದ ಮೇಲೆ ಅಲ್ಲಿ ಸಾವಿರಾರು ತೊಂದರೆ
ಎಲ್ಲಾನು
ಚೆಂದಾನೋ ಅನುಸರಿಸಿಕೊಂಡು ಹೋದರೆ
ಶುಭದಿನವ
ಹೇಳುವ ಬಾನ ನೇಸರ
ದಿನನಿತ್ಯ
ಬರುವುದಿಲ್ಲಿ ಜನಸಾಗರ
ನೂರಾರು
ಆಸೆ ಹೊತ್ತು ಬರುವ ಜನರು
ಕೆಟ್ಟವರ
ಕೈಗೆ ಸಿಕ್ಕಿ ನಲುಗುತಿಹರು
ಈ
ಭೂಮೀಲಿ ಹುಟ್ಟಿದ ಮೇಲೆ ಮುಂದೆ ಸಾಯೋದು ನಿಶ್ಚಿತ
ಕಷ್ಟವನ್ನು
ಧೈರ್ಯವಾಗಿ ಹೆದುರಿಸುವವನೆ ಬದುಕಲು ಯೋಗ್ಯವಂತ
ತಂತ್ರಜ್ಞಾನದಲಿ
ಇವ ಪರಮವೀರ
ಅದಕೆಂದೆ
ಕರೆಯುವರೋ ಸಿಲಿಕಾನ್ ನಗರ
ಇಲ್ಲಿನ
ಜನ - ಜೀವನ ವೈವಿಧ್ಯಮಯ
ಶಾಂತಿ
- ಪ್ರೀತಿ - ಸ್ನೇಹವೇ ನಮ್ಮ ಧ್ಯೇಯ
ಜಾತಿ
- ನೀತಿ - ಭಾಷೆ - ರೀತಿ ಯಾವುದಾದರೇನು
ನಾವೆಲ್ಲಾ
ಇರುವುದು ಭುವನೇಶ್ವರಿಯ ಮಡಿಲಲ್ಲಿಯೇ ಅಲ್ಲವೇನು
ಕನ್ನಡವೇ
ಸತ್ಯ ಕನ್ನಡವೇ ನಿತ್ಯ
ನೆನೆಯುತಿರು
ಇದ ನೀ ಎಲ್ಲಾ ಸಮಯ
ಎಲ್ಲಾದರೂ
ಇರು ನೀ ಎಂತಾದರು ಇರು
ಮರೆಯಬೇಡ
ಎಂದಿಗೂ ಈ ಬೆಂಗಳೂರು
ಜನನಿ
ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ
ತಾಯಿ
- ತಾಯ್ನಾಡನ್ನು ಗೌರವಿಸಿದರೆ ನೀನಾಗುವೆ ಯಶಸ್ವಿ.
No comments:
Post a Comment