ಜೋರಾಗಿ
ಮಳೆ ಬಂದು ನೀರಲ್ಲಿ ಮುಳುಗೋಯ್ತು
ನಮ್ಮ ಊರು
ಸೂರಿಲ್ಲದ
ನಮ್ಮ ನೋವನ್ನು ಕೇಳೋರೆ ಇಲ್ಲ
ಇಲ್ಲಿ ಯಾರು
ಪರಿಹಾರ
ಕಾರ್ಯ ಎಂದು ಹೇಳಿ ಬರುವರು
ನಡುನೀರಲ್ಲಿ
ಕೈ ಬಿಟ್ಟು ಮಾಯವಾಗುವರು
ನೀರಲ್ಲೇ
ಮುಳುಗಿ ಕಾಯುತಿಹೆವು ಭರವಸೆಯ ಬೆಳಕನ್ನು
ದೇವರೇ
ಕೈ ಬಿಟ್ಟಿರುವಾಗ ನಂಬೋದು ಯಾರನ್ನು
ಕನಸಿನಲ್ಲೂ
ನಮಗೀಗ ಆತ್ಮವಿಶ್ವಾಸ ಉಳಿದಿಲ್ಲ
ಸರ್ಕಾರದ ಆಶ್ವಾಸನೆ ನಂಬೋಕೆ ಆಗೋಲ್ಲ
ಎಲ್ಲಾ
ಕೊಚ್ಚಿ ಹೋದ ಮೇಲೆ ಬರುವ
ಜನನಾಯಕರು
ಇವರಿಗೆ
ಮತನೀಡಿ ಗೆಲ್ಲಿಸಿದ ನಾವು ದೊಡ್ಡ ಮೂರ್ಖರು
ರಾತ್ರೀಲಿ
ಮಲಗೋಕೆ ಸಣ್ಣ ಜಾಗವು ನಮಗಿಲ್ಲ
ಹಣವನ್ನು
ನುಂಗುವ ಅವರಿಗೆ ನಮ್ಮ ಕಷ್ಟ
ತಿಳಿಯೊಲ್ಲ
ಮಾಡುವರು
ಇದರಲ್ಲೂ ರಾಜಕೀಯದ ಕಸರತ್ತು
ಮೂರನ್ನು
ಬಿಟ್ಟ ಇವರಿಗೆ ಬರುವುದಿಲ್ಲ ನಿಯತ್ತು
ಅಮಾಯಕರ
ಹೊಟ್ಟೆ ಹೊಡೆದು ಬದುಕುತಿಹರು ಹಾಯಾಗಿ
ಇವರನ್ನು
ನಂಬಿದ ನಮ್ಮ ಬದುಕು ಹೋಗಿದೆ
ಕೊನೆಯಾಗಿ
No comments:
Post a Comment