ನನ್ನ ಪ್ರತಿ ಯೋಚನೆ, ಆಲೋಚನೆಯಲು ನೀನೆ
ನಮ್ಮ ಈ ಸ್ನೇಹವಾ... ನಾ ಎಂದೂ ಬಿಡೆನೆ ||
ಮರೆತುಬಿಟ್ಟೆ ನನ್ನನ್ನೆ ನಾ
ಅಳಿಸಲಾಗದ ನೆನೆಪೆ ನೀನಾ
ಬೇರ್ಪಡಿಸಲಾಗದ ಸ್ನೇಹ ಇದು
ನನಗೆ ನೀ ಏಳೇಳು ಜನ್ಮದ ಬಂಧು
ನನ್ನೊಳಗೆಲ್ಲಾ ನಿನ್ನ ಆಲೋಚನೆಯೆ ತುಂಬಿದೆ
ಇದು ನಾನೇನಾ ಎಂಬ ಅನುಮಾನ ಬಂದಿದೆ
ನನ್ನ ಲೋಕ ಕಿರಿದಾಗಿದೆ, ನನ್ನ ವೈಖರಿ ಬದಲಾಗಿದೆ
ನಿನ್ನ ತುಂಟತನಕೆ ನಗುತ ತಾಳ ಹಾಕಿದೆ
ನನ್ನ ದಾರಿ ತಪ್ಪಿದೆ ನಿನ್ನ ಹಿಂದಿಂದೆ ನಡೆದಿದೆ
ಓ ಗೆಳತಿ, ನಿನ್ನ ಹೆಜ್ಜೆಯನ್ನೇ ಹಿಂಬಾಲಿಸಿದೆ
ನೂರು ವರುಷ ನಿನ್ನ ಹೀಗೆ ನೋಡೋ ಆಸೆ ಸಾಲದೆ
ಹೇಗೆ ಮುಂದೆ ಮಿಡಿಯಲಿಯೆಂದು ನನ್ನ ಹೃದಯ ಕೇಳಿದೆ
ನನ್ನ ಕನಸಿನಿಂದ ನೀ ದೂರ ಹೋಗಲು ಬಿಡದೆ
ನಿದಿರೆಯಲ್ಲೇ ಕಟ್ಟಿ ಹಾಕುವೆ ರೆಪ್ಪೆ ತೆರೆಯದೆ
ಮತ್ತೆ ಯಾರಿಗೂ ನಿನ್ನ ತೋರಿಸದೆ ನನ್ನೊಳಗೆ ಬಚ್ಚಿಡುವೆ
ನನ್ನ ಉಸಿರನೇ ಉಯ್ಯಾಲೆ ಮಾಡಿ ನಿನ್ನ ತೂಗುವೆ
ನನ್ನ ಪ್ರತಿ ಯೋಚನೆ, ಆಲೋಚನೆಯಲು ನೀನೆ
ನಮ್ಮ ಈ ಸ್ನೇಹವಾ... ನಾ ಎಂದೂ ಬಿಡೆನೆ ||
No comments:
Post a Comment