ಹೆಂಗಸರು
ತಮ್ಮ ಸಂಬಂಧವನ್ನು ಉಳಿಸಿಕೊಂಡು ಹೋಗುವುದರಲ್ಲಿ ತಾವೇ ಪ್ರಮುಖರು ಎಂಬುದನ್ನು
ಸಾಬೀತು ಪಡಿಸುವುದಕ್ಕೋಸ್ಕರ ಗಂಡಸರ ಮೇಲೆ ಆರೋಪ
ಹೊರಿಸಲು ತುದಿಗಾಲಿನಲ್ಲಿ ನಿಂತಿರುತ್ತಾರೆ ಮತ್ತು ಈ ವಿಷಯವಾಗಿ
ಗಂಡಸರನ್ನು ಯಾವಾವಲೂ ನಿಂದಿಸುತ್ತಾರೆ. ಆದರೆ
ಪ್ರತಿಬಾರಿಯೂ ಗಂಡಸರೇ ನಿಂದನೆಗೆ ಒಳಗಾಗಬೇಕಿಲ್ಲ.
ಗಂಡಸರ ಬಗೆಗಿನ ಕೆಲವು ವಿಷಯಗಳನ್ನು
ಹೆಂಗಸರು ಹೇಗೆ ಮೂದಲಿಸುತ್ತಾರೋ ಹಾಗೆಯೇ
ಗಂಡಸರೂ ಸಹ ಹೆಂಗಸರು ಮಾಡುವ
ಕೆಲವು ವಿಷಯಗಳನ್ನು ಇಷ್ಟಪಡುವುದಿಲ್ಲ ಮತ್ತು ಅವರಿಂದ ಸಾಧ್ಯವಾದಷ್ಟು
ದೂರವಿರಲು ಬಯಸುತ್ತಾರೆ. ಗಂಡಸರು ದೂರವಿರಲು ಬಯಸುವ
ಕೆಲವು ಬಗೆಯ ಹೆಂಗಸರು ಯಾರೆಂದರೆ:
1) ತುಂಬಾ ಹಚ್ಚಿಕೊಂಡಿದ್ದೇನೆ
ಎಂದು ಬಾಯಿಮಾತಿನಲ್ಲಿ ಹೇಳುವವರು.
ಇವರು
ಗಂಡಸರಿಗೆ ತುಂಬಾ ಭಯ ಮತ್ತು
ಅಂಜಿಕೆಯನ್ನು ಉಂಟುಮಾಡುವವರು. ಈ ಗುಂಪಿಗೆ ಸೇರಿದವರು
ಯಾವಾಗಲೂ ಸಹ ತಾವು ಮದುವೆ
ಮಾಡಿಕೊಳ್ಳುವುದರ ಬಗ್ಗೆ ತೀರಾ ಹತಾಶೆಯಿಂದ
ಮಾತನಾಡುತ್ತಿರುತ್ತಾರೆ. ಯಾರನ್ನಾದರು ತುಂಬಾ ಹಚ್ಚಿಕೊಳ್ಳುವುದು ಎಂದರೆ
ಅದು ಅಭದ್ರತೆ, ಅನುಮಾನ, ಸ್ವಾಧೀನತೆ ಮತ್ತು
ಸ್ವಂತ-ಸದಭಿಪ್ರಾಯಗಳ ಮಿಶ್ರಣ. ಈ ರೀತಿಯ
ಹೆಂಗಸರ ಬಗ್ಗೆ ಗಂಡಸರು ಸಂಭಂದದಲ್ಲಿ
ತುಂಬಾ ಆಳವಾಗಿ ಹೋದಾಗ ಗುರುತಿಸುತ್ತಾರೆ.
ಪ್ರಾರಂಭದಲ್ಲಿ ಇವರು ತುಂಬಾ ಸ್ವತಂತ್ರವಾಗಿರುವುದಾಗಿ
ತೋರಲ್ಪಟ್ಟರೂ ಒಮ್ಮೆ ಒಂದು ಸಂಭಂದದಲ್ಲಿ
ಸುರಕ್ಷಿತವಾಗಿದ್ದೇವೆ ಎಂದು ಅನಿಸಿದಾಗ ಅವರ
ನಿಜವಾದ ಅವಶ್ಯಕತೆಗಳು ಸ್ಪಷ್ಟವಾಗಿ ಗೋಚರಿಸಲಾರಂಭಿಸುತ್ತವೆ.
2) ನಾನು, ನನ್ನದು,
ನನಗೆ ಎನ್ನುವವರು.
ಈ
ಗುಂಪಿಗೆ ಸೇರಿದವರು ಒಂದು ಸವಾಲಿದ್ದ ಹಾಗೆ.
ಗಂಡಸರು ಇವರಿಗೆ ಒಂದು ಅವಕಾಶ
ಕೊಟ್ಟು ಇವರ ಮೇಲೆ ಗೆಲ್ಲಲು
ಇಷ್ಟಪಡುತ್ತಾರೆ. ಇವರಿಗಿರುವ ಸ್ವಶಕ್ತಿಯ ಕಾರಣ ಕಮಿಟ್ ಆಗಲು
ಎಂದಿಗೂ ಬಯಸುವುದಿಲ್ಲ ಆದರೆ ಇವರ ಶಕ್ತಿಗೆ
ಮರುಳಾಗಿ ಈ ರೀತಿಯ ಹೆಂಗಸರ
ಮೇಲೆ ಗೆದ್ದು ವಿಜಯಿಯಾಗಲು ಬಯಸುತ್ತಾರೆ.
ಈ ಗುಂಪಿಗೆ ಸೇರಿದವರಿಗೆ
ಗಂಡಸರಿಗಿರುವ ಸ್ಪರ್ಧಾತ್ಮಕತೆ ಮತ್ತು ಹೆಂಗಸರಿಗಿರುವ ಸೂಕ್ಷ್ಮತೆ
ಎರಡೂ ಇರುತ್ತದೆ. ಕೆಲವು ಅವಸರದ ಸಂದರ್ಭದಲ್ಲಿ
ಇವರು ವ್ಯಾಮೋಹಕತೆಯಿಂದ ಭಾವುಕರಾಗಿ ಬದಲಾಗಬಲ್ಲರು. ವಾಸ್ತವವಾಗಿ ಹೇಳಬೇಕೆಂದರೆ ಇವರು ಗಂಡಸರ ಬಗೆಗಿನ
ತಮ್ಮ ದ್ವೇಷವನ್ನು ನೋವನ್ನು ಉಂಟುಮಾಡಿಕೊಳ್ಳುವುದರಿಂದ ದೂರವಿರಿಸಿಕೊಳ್ಳಲು ಒಂದು
ಬಗೆಯ ರಕ್ಷಣಾ ಫಲಕವಾಗಿ ಉಪಯೋಗಿಸಿಕೊಳ್ಳುತ್ತಾರೆ.
3) ನಾನೇ ಪರಮಶ್ರೇಷ್ಠಳು
ಎಂದುಕೊಂಡಿರುವವರು.
ಯಶಸ್ವೀ
ಮಹಿಳೆಯರು ತಮ್ಮನ್ನು ಅಳಿವಿನಂಚಿನಲ್ಲಿರುವವರಂತೆ ಕಾಣುತ್ತಾರೆ ಎಂದು ಕೆಲವು ಗಂಡಸರು
ಅಭಿಪ್ರಾಯ ಪಡುತ್ತಾರೆ. ತುಂಬಾ ಹೆಂಗಸರು ತಾವೇ
ಸಂಪಾದನೆಯನ್ನು ಮಾಡುವುದರಿಂದ, ಸ್ವಂತ ಮನೆಯನ್ನು ಹೊಂದಿರುವುದರಿಂದ
ಮತ್ತು ಒಳ್ಳೆಯ ಸಾಮಾಜಿಕ ಜೀವನವನ್ನು
ನಡೆಸುತ್ತಿರುವುದರಿಂದ ತಮ್ಮನ್ನು ಸಂತೋಷವಾಗಿರಿಸಲು ಯಾವ ಗಂಡಸರ ಸಹಾಯವೂ
ಬೇಡ ಎಂದು ಪದೇಪದೇ ಹೇಳುತ್ತಿರುತ್ತಾರೆ.
ಇವರು ಗಂಡಸರ ಮೇಲೆ ಅವಲಂಭಿತರಾಗಲು
ಬಯಸುವುದಿಲ್ಲ. ಇದೇ ವಿಷಯವೇ ಗಂಡಸರು
ಇವರನ್ನು ದೂರವಿಡಲು ಕಾರಣ. ಕಂಡಿತವಾಗಿಯೂ ಗಂಡಸರೂ
ಸಹ ತಮ್ಮ ಮೇಲೆ ಸಂಪೂರ್ಣವಾಗಿ
ಅವಲಂಭಿತರಾಗುವ ಹೆಂಗಸರನ್ನು ಇಷ್ಟಪಡುವುದಿಲ್ಲ. ಆದರೆ ತಮ್ಮ ಮೇಲೆ
ತಮಗೆ ಸಂಪೂರ್ಣ ವಿಶ್ವಾಸವಿದ್ದರೂ ಸಹ ತಮ್ಮನ್ನು ತಾವು
ಗಂಡಸರ ಮೇಲೆ ಅವಲಂಭಿತರಾಗುವಂತೆ ಮಾಡಿಕೊಳ್ಳುವ
ಹೆಂಗಸರನ್ನು ಗಂಡಸರು ತುಂಬಾ ಪ್ರೀತಿಸುತ್ತಾರೆ
ಮತ್ತು ಶ್ಲಾಘಿಸುತ್ತಾರೆ.
4) ವಟಗುಟ್ಟುವ ಪೆಟ್ಟಿಗೆಯಂತವರು
(ವಾಚಾಳಿಗಳು).
ಗಂಡಸರ
ಪ್ರಕಾರ ಅತಿಯಾಗಿ ಮಾತನಾಡುವ ಹೆಂಗಸರು
ಒಳ್ಳೆಯವರೂ ಅಲ್ಲ ಹಾಗೆಯೇ ಕೆಟ್ಟವರೂ
ಅಲ್ಲ. ತುಂಬಾ ಹೆಂಗಸರು ಅತಿಯಾಗಿ
ಮಾತನಾಡುವ ಆರೋಪವನ್ನು ಎದುರಿಸುತ್ತಾರೆ. ಹೆಂಗಸರ ಪ್ರಪಂಚದಲ್ಲಿ ಎಲ್ಲರೂ
ಒಟ್ಟಿಗೆ ಮಾತನಾಡುತ್ತಾರೆ. ಗಂಡಸರ ಪ್ರಪಂಚದಲ್ಲಿ ಒಬ್ಬರು
ಮಾತನಾಡಿ ಮುಗಿಸುವವರೆಗೂ ಮತ್ತೊಬ್ಬರು ಮಾತನಾಡುವುದಿಲ್ಲ ಮತ್ತು ಮಾತನಾಡಿತ್ತಿರುವವರಿಗೆ ಅಡಚಣೆ
ಉಂಟುಮಾಡುವುದಿಲ್ಲ. ಹಾಗಾಗಿಯೇ ಹೆಂಗಸರು ಕೇಳಿದ ಪ್ರಶ್ನೆಗೆ
ಗಂಡಸರು ಉತ್ತರಿಸುತ್ತಿರುವಾಗ ಆಕೆ ಮಧ್ಯ ಪ್ರವೇಶಿಸಿ
ತನ್ನ ಅಭಿಪ್ರಾಯವನ್ನು ಹೇಳಲು ಪ್ರಾರಂಭಿಸಿದಾಗ ಗಂಡಸರು
ಮಾತನಾಡುವುದನ್ನು ಅಲ್ಲಿಗೇ ನಿಲ್ಲಿಸಿಬಿಡುತ್ತಾರೆ.
5) ನನ್ನ ಮನಸ್ಸನ್ನು
ಓದಿ ಎನ್ನುವವರು.
ಕೆಲವು
ಕಾರಣಕ್ಕಾಗಿ ಹೆಂಗಸರು ತಾವು ಯಾವಾಗಲು
ಏನನ್ನು ಯೋಚಿಸುತ್ತೀದ್ದೇವೆ ಎಂಬುದನ್ನು ಗಂಡಸರು ತಾವಾಗಿಯೇ ತಿಳಿದುಕೊಳ್ಳಲಿ
ಎಂದು ನಿರಿಕ್ಷಿಸುತ್ತಾರೆ. ಇದರ ಪರಿಣಾಮವಾಗಿ ಆಕೆ
ಆತನನ್ನು ನಿರಂತರವಾಗಿ ಪರೀಕ್ಷಿಸುತ್ತಿರುತ್ತಾಳೆ. ಅವನ ಪ್ರತಿಕ್ರಿಯೆಯನ್ನು ಪ್ರೀತಿಯ
ಮಟ್ಟವನ್ನು ಅಳೆಯುವ ಒಂದು ಮಾನದಂಡವಾಗಿ
ಉಪಯೋಗಿಸುತ್ತಾಳೆ. ಈ ರೀತಿಯ ನಡವಳಿಕೆ
ಗಂಡಸರಿಗೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ
ಮತ್ತು ಕೆಲವೇ ಕೆಲವು ಗಂಡಸರು
ಮಾತ್ರ ಈ ಬಗೆಯ ಸತತವಾದ
ಕಿರಿಕಿರಿಯನ್ನು ತಾಳ್ಮೆಯಿಂದ ಸಹಿಸಿಕೊಂಡು ಬದುಕುತ್ತಾರೆ.
No comments:
Post a Comment