ಕೊಚ್ಚಿ ಹೋಗುತಿರುವೆ ಭಾವ ತೀವ್ರತೆಯ ಪ್ರವಾಹದಲಿ
ನಿನಗಾಗಿ ಕಾಯುವೆ ಜೀವ ಕುಳಿತರು ಮರಣ ಶಯ್ಯೆಯಲಿ
ನೀನೊಂದು ಮರುಭೂಮಿಯ ಮರೀಚಿಕೆಯೆಂದು ತಿಳಿದರೂ
ಮನಸು ಕೇಳುತಿದೆ ನೀನೇ ಬೇಕೆಂದು ಎಷ್ಟು ತಿಳಿ ಹೇಳಿದರೂ
ಬಿಳಿ ಹಾಳೆಯಂತಿರುವ ನನ್ನ ಮನದಲಿ
ಬಣ್ಣದ ಚಿತ್ರ ಬರೆದಿರುವೆ ನಿನ್ನ ನಗುವಲಿ
ಕಾಲ್ಗೆಜ್ಜೆ ಸದ್ದಿಗೆ ನನ್ನ ಹೃದಯ ಹೆಜ್ಜೆ ಹಾಕಿದೆ
ಕೈ ಬಳೆಯ ನಾದಕೆ ಮನಸು ಮಿಡಿಯುತಿದೆ
ನನ್ನ ಗಮನವ ನಿನ್ನಲ್ಲೇ ಕೇಂದ್ರೀಕರಿಸಿ
ಓಡುತಿರುವ ಕಾಲವನು ನಿಲ್ಲಿಸಿ
ಕಾದಿರುವೆ ನಿನ್ನ ಆಗಮನವ ಬಯಸಿ
ನೀ ಬರುವ ದಾರಿಯಲಿ ಹೂವ ಹಾಸಿ
ಕೈಗೆಟುಕದ ಆ ಚಂದ್ರ ತಾರೆಯರು ಬೇಡ ನನಗೆ
ನಿನ್ನ ಪ್ರೇಮದ ಸಿಹಿ ಆಲಿಂಗನವೊಂದೆ ಸಾಕೆನಗೆ
ನಿನ್ನ ಸುಮಧುರ ಪ್ರೀತಿಯೊಂದಿದ್ದರೆ ನನ್ನ ಜೊತೆಗೆ
ಜಗದ ಐಶ್ವರ್ಯವನೆಲ್ಲ ತಂದಿಡುವೆ ನಿನ್ನ ಕಾಲ ಬಳಿಗೆ
No comments:
Post a Comment