Saturday, 31 October 2015

ಪರವಶನಾದೆ

ಪ್ರತಿಕ್ಷಣವೂ ಹೊಸತರಂತೆ
ಚಿಗುರುತಿರುವ ಹಸಿರಿನಂತೆ
ಮಾಯೆಯ ನಂಬೋದು ಹೇಗೆ?
ಮನದ ಮಾತನು ಹೇಳೋದು ಹೇಗೆ?

ಪದಗಳೇ ಸಿಗದಂತಾಗಿದೆ
ನನ್ನ ಸಂಭ್ರಮವ ವರ್ಣಿಸಲು
ನಿನ್ನ ಪ್ರೀತಿಗೆ ನಾ ಪರವಶನಾದೆ
ನನ್ನೆಲ್ಲಾ ನಾಳೆಯೂ ನಿನಗೆ ಮೀಸಲು

ನಿನ್ನ ನೋವಿಗೆ ನಾ ಜೊತೆಯಾಗುವೆ
ನೀ ನಗುತ್ತಿದ್ದರೆ ನಾ ಜಗವಾಳುವೆ
ನೀ ನೆನೆದರೆ ಎದುರು ಹಾಜರಾಗುವೆ
ನಿನ್ನ ಮಡಿಲಲ್ಲಿ ಮಗುವಾಗುವೆ

ನನ್ನ ಜೀವನಿನ್ನ ಜೀವ
ಸೇರಿದರೆ ಅದೇ ತಾನೆ ಪ್ರೇಮ
ಒಂದೇ ನೋಟಒಂದೇ ಭಾವ
ಹೀಗೆ ಒಟ್ಟಾಗಿರೋಣ ಪ್ರತಿ ಜನ್ಮ

Sunday, 11 October 2015

ಗೊಂಬೆ

ಸೀರೆಯುಟ್ಟ ಸಕ್ರೆ ಗೊಂಬೆಯಂತೆ ನೀನು
ಇರುವೆಯಂತೆ ನಾ ಬಳಿ ಬಂದ್ರೆ ತಪ್ಪೇನು
ತೇಲುವ ಮೋಡದಂತೆ ಚಲಿಸುವಾಗ ನೀನು
ಗಾಳಿಯಂತೆ ನಾ ಬಂದು ಹೊತ್ತೊಯ್ಯುವೆನು

ಏನೋ…? ಇದು ಏನು ರೋಗವೋ…?
ಏನೋ…? ಅದು ಏನು ಮಾಯವೋ…?
ಓರೆ ನೋಟದಲ್ಲಿ ಕದ್ದು ಕದ್ದು ನನ್ನ ನೋಡಿ ಕೊಲ್ಲುತಿರುವೆ
ಮಿಂಚಿನ ಹೊಳಪನು ಪುಟ್ಟ ಕಣ್ಗಳಲಿ ಹೇಗೆ ಹಿಡಿದಿಟ್ಟಿರುವೆ

ನನ್ನೆದೆಯ ಮೇಲೆ ನಿಂತು ನಾಟ್ಯವಾಡಿ
ಹಣೆ ಮೇಲೊಂದು ಸಿಹಿಮುತ್ತನು ನೀಡಿ
ನಿನ್ನ ತೋಳ್ಗಳಲ್ಲಿ ನನ್ನ ಬಿಗಿದಪ್ಪಿ ಹಿಡಿದು
ಕರೆದೊಯ್ದೆ ಪ್ರೀತಿಯ ಲೋಕಕೆ ನನ್ನ ಇಂದು

ನಿನ್ನ ಭೇಟಿಮಾಡುವ ಕ್ಷಣವ ನೆನೆದು ನೆನೆದು
ಆಯಾಸ ಎನ್ನುವ ಪದವೆ ಹೋಗಿದೆ ಮರೆತು
ನದಿಯಂತೆ ಓಡಿ ನಿನ್ನ ಸೇರುವಾಸೆ ಎಲ್ಲೂ ನಿಲ್ಲದೆ
ನನ್ನ ಪ್ರತಿ ಕಣಕಣವೂ ನಿನ್ನ ಸೇರಲು ಹೆಜ್ಜೆ ಹಾಕಿದೆ

Saturday, 10 October 2015

ನಾಜೂಕು ನಾರಿ

ಬಳೆಗಳ ಸದ್ದಲಿ ಹೃದಯವ ಬಂಧಿಸಿ
ಕಾಲ್ಗೆಜ್ಜೆ ನಾದದಿ ಮನವ ತೇಲಿಸಿ
ಬೆಳದಿಂಗಳ ನಗುವ ಸೂಸಿ ಜಗವ ಮರೆಸಿದೆ
ನಾಜೂಕಾದ ನಡುವಲ್ಲಿ ನನ್ನನ್ನೇ ಸೆರೆ ಮಾಡಿದೆ

ಕೆಂಪು ಗುಲಾಬಿಯಿಂದ ಬಣ್ಣವ ತಂದು
ಹಾಲ್ಗೆನ್ನೆಗೆ ತಿದ್ದಿ ತೀಡಿದಂತೆ ಇಂದು
ಮುದ್ದು ತರಿಸುತ್ತಿದೆ ನಿನ್ನ ಅಂದ
ಬ್ರಹ್ಮ ಒಮ್ಮೆ ಕಚ್ಚಿ ರುಚಿ ನೋಡು ಎಂದ

ನನ್ನ ಕನಸಿನ ಅಂದದ ರಾಜಕುಮಾರಿ
ಬಳ್ಳಿಯಂತೆ ಬಳುಕುವ ನಾಜೂಕು ನಾರಿ
ನನ್ನಾಸೆಗಳಿಗೆ ರೆಕ್ಕೆ ತರಿಸಿದ ಪೋರಿ
ನಿನ್ನ ಕಣ್ಣ ಕೊಳದಲಿ ಬಿದ್ದೆ ನಾ ಜಾರಿ

ಸೀರೆ ಸೆರಗನ್ನೆ ಸೂತ್ರವ ಮಾಡಿಬಿಟ್ಟು
ಗಾಳಿಪಟದಂತೆ ನನ್ನ ಹಾರಿಸಿದೆ
ನೆರಿಗೆಯಂಚಲ್ಲಿ ಸೆರೆಯಾಳಾಗಿ ಇಟ್ಟು
ನಿನ್ನ ಮುದ್ದಾಡುವ ಶಿಕ್ಷೆ ವಿಧಿಸಿದೆ

Friday, 9 October 2015

ಎಕ್ಸಾಮ್

ಎಕ್ಸಾಮ್ ಅನ್ನೋ ಭಯ ಕಾಡ್ತಾ ಇದೆಯಲ್ಲ
ಟೆನ್ಶನ್ ಅಲ್ಲಿ ಏನೂ ಓದೋಕ್ ಆಗ್ತಿಲ್ಲ
ಹುಚ್ಚು ಮನಸು ಮಾತೇ ಕೇಳ್ತಾ ಇಲ್ಲ
ಭಯದಲ್ಲಿ ನಡುಗ್ತಾ ಇದೆ ಮೈಯೆಲ್ಲ

ಬರೀ 10th ಅಲ್ಲ, ಇದು ನಿನ್ನ ಫ್ಯೂಚರ್ ಲೈಫು
ಪಿಯುಸಿ ಅಲ್ಲ, ಅದು ಲೈಫ್ಗೇ ಟರ್ನಿಂಗ್ ಪಾಯಿಂಟು
ಅಂತ ಎಲ್ಲಾ ದೊಡ್ಡೋರು ಹೇಳ್ತಾರಲ್ಲ
ಡೈಲಿ ರಿಪೀಟ್ ಮಾಡಿ ತಲೆ ತಿಂತಾರಲ್ಲ

ಅವರು ಹೇಳೋ ಮಾತಿನಲ್ಲೂ ಸತ್ಯ ಇದೆ
ಕೊನೆತನಕ ಇರೋದು ಅಂದು ಕಲಿತದ್ದೆ
ಎಲ್ಲೆ ಹೋದ್ರು ವಿದ್ಯೆಗೆ ಹೆಚ್ಚು ಮರ್ಯಾದೆ
ದುಡ್ಡೇ ದೊಡ್ಡಪ್ಪ ಆದ್ರೆ ಅದರಪ್ಪ ವಿದ್ಯೆ

ಕಾಲೇಜ್ ಲೈಫ್ ಅಂದ್ರೆ ಎಲ್ರುಗೂ ಇಷ್ಟ
ಎಕ್ಸಾಮ್ಸ್ ಬಂದ್ರೆ ಮಾತ್ರ ಬಲು ಕಷ್ಟ
ಟೀಚರ್ಸ್ ಎಲ್ಲ ಆಗ ಫ್ಲೈ ಫ್ಲೈ ಫ್ಲೈ
ಸ್ಟೂಡೆಂಟ್ಸ್ ಮಾತ್ರ ಕ್ರೈ ಅಂಡ್ ಫ್ರೈ

ರಿಸಲ್ಟ್ಸ್ ಅಂದ್ರೆ ಭಯ ಆಗತ್ತಲ್ಲ
ಟೆನ್ಶನ್ನ ತಡ್ಕೊಳೋಕ್ ಆಗಲ್ಲ
ರಿಲೇಟಿವ್ಸ್ ಜೊತೆಗೆ ಪ್ರಾಣ ತಿಂತಾರಲ್ಲ
ಅಕ್ಪಕ್ಕದ್ ಮನೆಯವರ್ ಬಾಯಿಗೆ ಬೀಗ ಇಲ್ಲ

ರಿಸಲ್ಟ್ಸ್ ಅನ್ನೋ ಹೆಸರಲ್ಲಿ ಪ್ರಾಣ ಹಿಂಡ್ತಾರಲ್ಲ
ಟೆನ್ಶನ್ ಭಯದಲ್ಲೂ ಒಂಥರಾ ಕಿಕ್ಕು ಐತಲ್ಲ

Thursday, 8 October 2015

ಓದಿನಲ್ಲಿ ಏನಿದೆ

ಎಲ್ಲವನ್ನು ಓದುವಾಸೆ ಆದರೆ
ತಲೆಯಲ್ಲಿ ಸಾವಿರಾರು ಯೋಚನೆ
ಟಾಪರ್ ಆಗೋಣ ಅಂದುಕೊಂಡರೆ
ಓದೋಕೆ ಒಂದಿಲ್ಲೊಂದು ಅಡಚಣೆ

ಸಬ್ಜೆಕ್ಟ್ಸ್ಗಳು ಅದ್ಯಾಕೆ ಹೀಗೆ
ಇವುಗಳನ್ನ ಓದಿ ಪಾಸ್ ಆಗೋದಾದ್ರು ಹ್ಯಾಗೆ
ಎಷ್ಟೇ ಕಷ್ಟಪಟ್ಟು ಓದಿದ್ರೂ ಲಕ್ಕು ಇರಬೇಕಪ್ಪ
ಗುರಿಯ ತಲುಪಲು ಒಳ್ಳೆ ಗುರುವು ಬೇಕಪ್ಪ

ಪ್ರತಿದಿನ ರಾತ್ರಿ-ಹಗಲು ಕಷ್ಟಪಟ್ಟು ಓದಿದೆ
ಎಲ್ಲ ಮುಗಿದಮೇಲೆ ಅನಿಸಿತು ಓದಿನಲ್ಲಿ ಏನಿದೆ
ಬ್ರೈನ್ ಎಂಬ ಗ್ರೌಂಡಿನಲ್ಲಿ ಪಿಚ್ ಹಾಳು ಮಾಡುವಂತೆ
ಸಬ್ಜೆಕ್ಟ್ಸ್ಗಳು ಕಾಡ್ತಿವೆ ಸ್ಕೆಚ್ ಹಾಕದೆ ಸಾಯಿಸ್ತಿವೆ

ಹೆಲೋ ಟೀಚರ್ಸ್ ಯಾಕೆ ಹೀಗೆ ಮಾಡ್ತೀರ
ಸಾಯೋ ಥರಾ ಯಾಕೆ ಟಾರ್ಚರ್ ಕೊಡ್ತೀರ
ಫೈಲ್ ಆದ ಸ್ಟೂಡೆಂಟ್ಗಳಿಗು ಲೈಫು ಐತ್ರಪ್ಪ
ಬರೀ ಓದಿ ಮಾರ್ಕ್ಸ್ ತೆಗೆಯೋದೆ ಸಾಧನೆ ಅಲ್ರಪ್ಪ

ಸ್ಟೂಡೆಂಟ್ಸ್ - ಟೀಚರ್ಸ್

ಬುಕ್ಕು ಪೆನ್ನು ಸ್ಟೂಡೆಂಟ್ಸ್ ಕೈಯಲ್ಲಿ
ಜೇಡಿ ಮಣ್ಣು ಟೀಚರ್ಸ್ ತಲೆಯಲ್ಲಿ
ಪಾಠ ಮಾಡಬೇಡಿ ಸ್ವಲ್ಪ ತಡೀರಿ
ಕ್ಲಾಸ್ ರೂಮಿಂದ ಹೊರಗೆ ನಡೀರಿ

ಒಳ್ಳೆ ಟೀಚರ್ ಬಂದ್ರು ಅಂದ್ರೆ
ಕತ್ತೆ ಕೂಡ ಪಾಸಾಗುವುದು
ಸತ್ತರೂನು ಬರೋದಿಲ್ಲ ಅಂತ ಟೀಚರು
ನಾವೇ ಓದ್ಕೊಬೇಕು ತಟ್ಕೊಂಡು ಇವರ ಟಾರ್ಚರು

ಒಳ್ಳೆ ಟೀಚರ್ ಬರ್ತಾರೆ ಅನ್ನೋ ನಂಬಿಕೆ ಇಟ್ಕೊಂಡು
ಹೋಗಿ ಸೇರಬೇಕು ಕ್ಲಾಸ್ರೂಂ ಎಂಬ ಸುಡುಗಾಡು
ಒಳಗ್ಹೋಗಬೇಡಿ ಅಷ್ಟುಬೇಗ ಸ್ವಲ್ಪ ತಡೀರಿ
ಫ್ರೆಂಡ್ಸ್ಗೆ ಹೇಳಿ ಪ್ರಾಕ್ಸಿ ಹೋಡೀರಿ

ಯಾವ ಟಾಪಿಕ್ ಅರ್ಥ ಆಯ್ತು
ಯಾವ್ದು ಅರ್ಥ ಆಗ್ದೆ ಹೋಯ್ತು
ಹೇಳುವುದು ಹೇಗೆ ಜ್ಞಾಪಕ ಮಾಡಿಕೊಂಡು
ಸುಮ್ನೆ ಓದಬೇಕು ಎಲ್ಲವನ್ನು ಮುಚ್ಕೊಂಡು

ಎಕ್ಸಾಮ್ಗೆ ಮಾತ್ರ ಓದೋದು ನಾವು
ಹೆದ್ರೋದಿಲ್ಲ ಹತ್ತಿಪ್ಪತ್ತು ಮಾರ್ಕ್ಸ್ ಕಳ್ಕೊಂಡ್ರು
ಫೇಲು ಬ್ಯಾಕು ಆದ್ರೆ ಆಗ್ಲಿ ಬಿಡಿ
ದೇವ್ರಿದಾನೆ ಸಪ್ಲಿಮೆಂಟ್ರಿ ಕಟ್ಟಿಬಿಡಿ