ಸೀರೆಯುಟ್ಟ ಸಕ್ರೆ ಗೊಂಬೆಯಂತೆ ನೀನು
ಇರುವೆಯಂತೆ ನಾ ಬಳಿ ಬಂದ್ರೆ
ತಪ್ಪೇನು
ತೇಲುವ ಮೋಡದಂತೆ ಚಲಿಸುವಾಗ
ನೀನು
ಗಾಳಿಯಂತೆ ನಾ ಬಂದು ಹೊತ್ತೊಯ್ಯುವೆನು
ಏನೋ…? ಇದು ಏನು
ರೋಗವೋ…?
ಏನೋ…? ಅದು ಏನು
ಮಾಯವೋ…?
ಓರೆ ನೋಟದಲ್ಲಿ ಕದ್ದು
ಕದ್ದು ನನ್ನ ನೋಡಿ ಕೊಲ್ಲುತಿರುವೆ
ಮಿಂಚಿನ ಹೊಳಪನು ಪುಟ್ಟ
ಕಣ್ಗಳಲಿ ಹೇಗೆ ಹಿಡಿದಿಟ್ಟಿರುವೆ
ನನ್ನೆದೆಯ ಮೇಲೆ ನಿಂತು ನಾಟ್ಯವಾಡಿ
ಹಣೆ ಮೇಲೊಂದು ಸಿಹಿಮುತ್ತನು
ನೀಡಿ
ನಿನ್ನ ತೋಳ್ಗಳಲ್ಲಿ ನನ್ನ
ಬಿಗಿದಪ್ಪಿ ಹಿಡಿದು
ಕರೆದೊಯ್ದೆ ಪ್ರೀತಿಯ ಲೋಕಕೆ ನನ್ನ
ಇಂದು
ನಿನ್ನ ಭೇಟಿಮಾಡುವ ಕ್ಷಣವ
ನೆನೆದು ನೆನೆದು
ಆಯಾಸ ಎನ್ನುವ ಪದವೆ
ಹೋಗಿದೆ ಮರೆತು
ನದಿಯಂತೆ ಓಡಿ ನಿನ್ನ
ಸೇರುವಾಸೆ ಎಲ್ಲೂ ನಿಲ್ಲದೆ
ನನ್ನ ಪ್ರತಿ ಕಣಕಣವೂ
ನಿನ್ನ ಸೇರಲು ಹೆಜ್ಜೆ ಹಾಕಿದೆ
No comments:
Post a Comment