ಬಳೆಗಳ ಸದ್ದಲಿ ಹೃದಯವ
ಬಂಧಿಸಿ
ಕಾಲ್ಗೆಜ್ಜೆ ನಾದದಿ ಮನವ ತೇಲಿಸಿ
ಬೆಳದಿಂಗಳ ನಗುವ ಸೂಸಿ ಜಗವ
ಮರೆಸಿದೆ
ನಾಜೂಕಾದ ನಡುವಲ್ಲಿ ನನ್ನನ್ನೇ
ಸೆರೆ ಮಾಡಿದೆ
ಕೆಂಪು ಗುಲಾಬಿಯಿಂದ ಬಣ್ಣವ
ತಂದು
ಹಾಲ್ಗೆನ್ನೆಗೆ ತಿದ್ದಿ ತೀಡಿದಂತೆ ಇಂದು
ಮುದ್ದು ತರಿಸುತ್ತಿದೆ ಈ
ನಿನ್ನ ಅಂದ
ಬ್ರಹ್ಮ ಒಮ್ಮೆ ಕಚ್ಚಿ
ರುಚಿ ನೋಡು ಎಂದ
ನನ್ನ ಕನಸಿನ ಅಂದದ
ರಾಜಕುಮಾರಿ
ಬಳ್ಳಿಯಂತೆ ಬಳುಕುವ ನಾಜೂಕು ನಾರಿ
ನನ್ನಾಸೆಗಳಿಗೆ ರೆಕ್ಕೆ ತರಿಸಿದ ಪೋರಿ
ನಿನ್ನ ಕಣ್ಣ ಕೊಳದಲಿ
ಬಿದ್ದೆ ನಾ ಜಾರಿ
ಸೀರೆ ಸೆರಗನ್ನೆ ಸೂತ್ರವ
ಮಾಡಿಬಿಟ್ಟು
ಗಾಳಿಪಟದಂತೆ ನನ್ನ ಹಾರಿಸಿದೆ
ನೆರಿಗೆಯಂಚಲ್ಲಿ ಸೆರೆಯಾಳಾಗಿ ಇಟ್ಟು
ನಿನ್ನ ಮುದ್ದಾಡುವ ಶಿಕ್ಷೆ
ವಿಧಿಸಿದೆ
No comments:
Post a Comment