ಎಲ್ಲವನ್ನು ಓದುವಾಸೆ ಆದರೆ
ತಲೆಯಲ್ಲಿ ಸಾವಿರಾರು ಯೋಚನೆ
ಟಾಪರ್ ಆಗೋಣ ಅಂದುಕೊಂಡರೆ
ಓದೋಕೆ ಒಂದಿಲ್ಲೊಂದು ಅಡಚಣೆ
ಈ ಸಬ್ಜೆಕ್ಟ್ಸ್’ಗಳು
ಅದ್ಯಾಕೆ ಹೀಗೆ
ಇವುಗಳನ್ನ ಓದಿ ಪಾಸ್ ಆಗೋದಾದ್ರು
ಹ್ಯಾಗೆ
ಎಷ್ಟೇ ಕಷ್ಟಪಟ್ಟು ಓದಿದ್ರೂ
ಲಕ್ಕು ಇರಬೇಕಪ್ಪ
ಗುರಿಯ ತಲುಪಲು ಒಳ್ಳೆ
ಗುರುವು ಬೇಕಪ್ಪ
ಪ್ರತಿದಿನ ರಾತ್ರಿ-ಹಗಲು ಕಷ್ಟಪಟ್ಟು
ಓದಿದೆ
ಎಲ್ಲ ಮುಗಿದಮೇಲೆ ಅನಿಸಿತು
ಓದಿನಲ್ಲಿ ಏನಿದೆ
ಬ್ರೈನ್ ಎಂಬ ಗ್ರೌಂಡಿನಲ್ಲಿ
ಪಿಚ್ ಹಾಳು ಮಾಡುವಂತೆ
ಸಬ್ಜೆಕ್ಟ್ಸ್’ಗಳು ಕಾಡ್ತಿವೆ ಸ್ಕೆಚ್
ಹಾಕದೆ ಸಾಯಿಸ್ತಿವೆ
ಹೆಲೋ ಟೀಚರ್ಸ್ ಯಾಕೆ
ಹೀಗೆ ಮಾಡ್ತೀರ
ಸಾಯೋ ಥರಾ ಯಾಕೆ
ಟಾರ್ಚರ್ ಕೊಡ್ತೀರ
ಫೈಲ್ ಆದ ಸ್ಟೂಡೆಂಟ್’ಗಳಿಗು ಲೈಫು ಐತ್ರಪ್ಪ
ಬರೀ ಓದಿ ಮಾರ್ಕ್ಸ್
ತೆಗೆಯೋದೆ ಸಾಧನೆ ಅಲ್ರಪ್ಪ
No comments:
Post a Comment