Sunday, 29 November 2015

ಪುಟ್ಟ ಕಣ್ಣ ಸನ್ನೆ

ನಿನ್ನ ಜೊತೆ ಶುರುವಾಗಿದೆ ಪ್ರೀತಿಯ ಸಂಬಂಧ
ಎಷ್ಟೇ ಜನ್ಮ ಕಳೆದರೂ ಅಳಿಸಲಾಗದು ಬಂಧ
ಹೇಳ ತೀರಲಾಗದು ನನಗಾಗುತಿರುವ ಆನಂದ
ಕೊನೆಯವರೆಗೂ ಸಾಗುತಿರಲಿ ನಲ್ಮೆಯ ಅನುಬಂಧ

ನೆನ್ನೆವರೆಗೂ ಒಂಟಿಯಾಗಿ ಇದ್ದೆ ನಾ
ನಿನ್ನ ಸನಿಹದೀ ಪುಳಕಗೊಂಡಿದೆ ಮನ
ಪುಟ್ಟ ಕಣ್ಣ ಸನ್ನೆಯಲೇ ಕೊಡು ಪ್ರೀತಿಯ ಆಹ್ವಾನ
ನಿನ್ನ ಜೊತೆಯೇ ಕಳೆಯುವೆ ಎಲ್ಲಾ ನಾಳೆಯ ಜೀವನ

ಹೊಸ ಆಸೆ ಚಿಗುರೊಡೆದಿದೆ ನನ್ನ ಮನದಲಿ
ಮಗುವಾಗಿ ಮಲಗುವಾಸೆ ನಿನ್ನ ಮಡಿಲಲಿ
ಬೇರೆಲ್ಲ ಶೂನ್ಯ ನೀನಿರುವಾಗ ಜೊತೆಯಲಿ
ಹಾರೋಣ ಬಾ ಹಕ್ಕಿಗಳಾಗಿ ನೀಲಿ ಬಾನಲಿ

ನನ್ನ ಖುಷಿಯನು ನಿನಗಂಚುವೆ
ನಿನ್ನ ನೋವನು ನಾ ಭರಿಸುವೆ
ನಿನ್ನ ಹೊರತು ಬೇರೇನೂ ಈಗ ನಾ ಕಾಣೆ
ನನ್ನೆಲ್ಲಾ ಜನ್ಮಕು ಇನ್ನು ಸಂಗಾತಿ ನೀನೆ

Thursday, 19 November 2015

ರಣರಾವಣ

ಇದು ರಣರಂಗ
ರಣರಾವಣರ ಚದುರಂಗ
ಇದು ರಕ್ತಕದನ
ಮಾನವೀಯತೆಯ ದಹನ

ಧನಕಾಗಿ ಕಾದಾಡುವ ಮಾನವ
ಸ್ನೇಹಪ್ರೀತಿಯ ಮರೆತ ದಾನವ
ದ್ವೇಷ ಅಸೂಯೆಯೆ ತುಂಬಿರುವ ಜಗ
ಎಲ್ಲೆಡೆ ಗುನುಗುತಿದೆ ಮತಾಂಧತೆಯ ರಾಗ

ಶಾಂತಿಗಾಗಿ ಪ್ರಾಣ ತೆಗೆವ ಇವರೆಂಥಾ ಇನರು
ಕರುಣೆ ಇಲ್ಲದೆ ರಕ್ತವ ಸುರಿಸುವ ರಕ್ಕಸರು
ಇತಿಹಾಸದ ನಿಜವ ತಿಳಿಯದೆ ಸಾಗುತಿರುವ ಅಂಧರು
ಎಲ್ಲಾ ಧರ್ಮದ ಸಾರವು ಒಂದೇ ಪ್ರೀತೆಯೇ ದೇವರು

ದೇವರಿಗೂ ಅನಿಸುವುದಿಲ್ಲ ಅಯ್ಯೋ ಪಾಪ
ನೋಡುತ್ತಿದ್ದರೆ ನೀವು ಮಾಡುತಿರುವ ಪಾಪ
ಕಣ್ಣು ತೆರೆದು ನೋಡಿ ಇರುವುದು ಒಂದೇ ಧರ್ಮ ಮನುಕುಲ
ಇಲ್ಲಿ ಇರುವಷ್ಟು ದಿನ ಹಂಚಿಕೊಂಡು ಬಾಳೋಣ ನೆಲ-ಜಲ

Sunday, 1 November 2015

ಹೊಸ ಗುರುತಾಗಿ

ಮನಸುಗಳು ಒಂದಾದ ಮೇಲೆ
ಎರಡನೇ ಮಾತೇತಕೆ…
ಉಸಿರುಗಳು ಬೆರೆತಾದ ಮೇಲೆ
ಇನ್ನು ಭಯವೇತಕೆ…

ನೀನು ನಾನಾಗಿ…
ನಾನು ನೀನಾಗಿ…
ಬಾಳೋಣ ಕೂಡಿ ಒಂದಾಗಿ
ನವ ಪ್ರೇಮಿಗಳಿಗೆ ಹೊಸ ಗುರುತಾಗಿ

ಪ್ರೇಮಲೋಕಕೆ ಹೊಸಗೀತೆಯ ಸಾರೋಣ
ಪ್ರೀತಿ ಸ್ನೇಹಕೆ ಹೊಸ ಅರ್ಥವ ನೀಡೋಣ
ಜಾತಿ ಭೇದಬಾವಕೆ ಇಲ್ಲಿ ಇಲ್ಲ ಜಾಗವೂ
ಪ್ರೀತಿ ಮುಂದೆ ಪ್ರೇಮಿಗಳಿಗೆ ಎಲ್ಲ ಶೂನ್ಯವೂ

ಪ್ರೀತಿ ಎಂದರೆ ಕೂಡಿ ಬಾಳುವುದು
ದ್ವೇಷ ಭಾವವ ಮೆಟ್ಟಿ ನಿಲ್ಲುವುದು
ಲೋಕ ನಿಂತಿರುವುದು ಪ್ರೀತಿ ನಂಬಿಕೆ ಮೇಲೇನೆ
ಎಲ್ಲ ಅಳಿದರೂ ಉಳಿಯುವುದು ಪ್ರೀತಿ ಒಂದೇನೆ