ಮನಸುಗಳು ಒಂದಾದ ಮೇಲೆ
ಎರಡನೇ ಮಾತೇತಕೆ…
ಉಸಿರುಗಳು ಬೆರೆತಾದ ಮೇಲೆ
ಇನ್ನು ಭಯವೇತಕೆ…
ನೀನು ನಾನಾಗಿ…
ನಾನು ನೀನಾಗಿ…
ಬಾಳೋಣ ಕೂಡಿ ಒಂದಾಗಿ
ನವ ಪ್ರೇಮಿಗಳಿಗೆ ಹೊಸ
ಗುರುತಾಗಿ
ಪ್ರೇಮಲೋಕಕೆ ಹೊಸಗೀತೆಯ ಸಾರೋಣ
ಪ್ರೀತಿ ಸ್ನೇಹಕೆ ಹೊಸ
ಅರ್ಥವ ನೀಡೋಣ
ಜಾತಿ ಭೇದಬಾವಕೆ ಇಲ್ಲಿ
ಇಲ್ಲ ಜಾಗವೂ
ಪ್ರೀತಿ ಮುಂದೆ ಪ್ರೇಮಿಗಳಿಗೆ
ಎಲ್ಲ ಶೂನ್ಯವೂ
ಪ್ರೀತಿ ಎಂದರೆ ಕೂಡಿ
ಬಾಳುವುದು
ದ್ವೇಷ ಭಾವವ ಮೆಟ್ಟಿ
ನಿಲ್ಲುವುದು
ಲೋಕ ನಿಂತಿರುವುದು ಪ್ರೀತಿ
ನಂಬಿಕೆ ಮೇಲೇನೆ
ಎಲ್ಲ ಅಳಿದರೂ ಉಳಿಯುವುದು
ಪ್ರೀತಿ ಒಂದೇನೆ
No comments:
Post a Comment