ಇದು ರಣರಂಗ
ರಣರಾವಣರ ಚದುರಂಗ
ಇದು ರಕ್ತಕದನ
ಮಾನವೀಯತೆಯ ದಹನ
ಧನಕಾಗಿ ಕಾದಾಡುವ ಮಾನವ
ಸ್ನೇಹಪ್ರೀತಿಯ ಮರೆತ ದಾನವ
ದ್ವೇಷ ಅಸೂಯೆಯೆ ತುಂಬಿರುವ
ಜಗ
ಎಲ್ಲೆಡೆ ಗುನುಗುತಿದೆ ಮತಾಂಧತೆಯ
ರಾಗ
ಶಾಂತಿಗಾಗಿ ಪ್ರಾಣ ತೆಗೆವ ಇವರೆಂಥಾ
ಇನರು
ಕರುಣೆ ಇಲ್ಲದೆ ರಕ್ತವ
ಸುರಿಸುವ ರಕ್ಕಸರು
ಇತಿಹಾಸದ ನಿಜವ ತಿಳಿಯದೆ
ಸಾಗುತಿರುವ ಅಂಧರು
ಎಲ್ಲಾ ಧರ್ಮದ ಸಾರವು
ಒಂದೇ ಪ್ರೀತೆಯೇ ದೇವರು
ಆ ದೇವರಿಗೂ ಅನಿಸುವುದಿಲ್ಲ
ಅಯ್ಯೋ ಪಾಪ
ನೋಡುತ್ತಿದ್ದರೆ ನೀವು ಮಾಡುತಿರುವ ಪಾಪ
ಕಣ್ಣು ತೆರೆದು ನೋಡಿ
ಇರುವುದು ಒಂದೇ ಧರ್ಮ ಮನುಕುಲ
ಇಲ್ಲಿ ಇರುವಷ್ಟು ದಿನ
ಹಂಚಿಕೊಂಡು ಬಾಳೋಣ ನೆಲ-ಜಲ
No comments:
Post a Comment