ಕಾಗೆಯೊಂದು ದಿನಪೂರ್ತಿ
ಯಾವುದೇ ಕೆಲಸ ಮಾಡದೆ ಒಂದು ಮರದ ರೆಂಬೆಯ ಮೇಲೆ ಕುಳಿತಿತ್ತು. ಇದನ್ನು ಗಮನಿಸಿದ ಒಂದು ಮೊಲ ಆ ಕಾಗೆಯ
ಬಳಿ ಬಂದು, "ನಾನು ಸಹ ನಿನ್ನ ಹಾಗೆಯೇ ದಿನಪೂರ್ತಿ ಯಾವುದೇ ಕೆಲಸ ಮಾಡದೆ ಸುಮ್ಮನೆ
ಕುಳಿತುಕೊಳ್ಳಬಹುದೇ?" ಎಂದು ಕೇಳಿತು. ಅದಕ್ಕೆ ಕಾಗೆಯು, "ಖಂಡಿತವಾಗಿಯೂ ಕುಳಿತುಕೊಳ್ಳಬಹುದು"
ಎಂದು ಉತ್ತರಿಸಿತು. ಇದರಿಂದ ಖುಷಿಯಾದ ಮೊಲವು ಕಾಗೆ ಕುಳಿತಿದ್ದ ರೆಂಬೆಯ ಕೆಳಗಡೆಯೇ ನೆಲದಲ್ಲಿ ಕುಳಿತು
ವಿಶ್ರಮಿಸಲಾರಂಭಿಸಿತು.
ತಕ್ಷಣವೇ ಒಂದು ನರಿಯು
ಆ ಮೊಲದ ಮೇಲೆ ಎಗರಿ ಅದನ್ನು ಕೊಂದು ತಿಂದು ಹಾಕಿತು.
ಕಥೆಯ ನೀತಿ:- "ಏನೂ
ಮಾಡದೆ ಸುಮ್ಮನೆ ಕುಳಿತಿರಬೇಕೆಂದರೆ ನೀವೂ ತುಂಬಾ ಮೇಲಿನ ಸ್ಥಾನದಲ್ಲಿರಬೇಕು"
No comments:
Post a Comment