Thursday, 15 January 2015

ತುಂತುರು ಮಳೆ

ಬೆಳದಿಂಗಳೆ ಇವಳಿಗೆ ಸ್ವಲ್ಪ ತಿಳಿಸಮ್ಮ
ನನ್ನ ಮಾತು ಈಕೆಗೆ ಕೇಳುತ್ತಿಲ್ಲಮ್ಮ
ನಕ್ಷತ್ರವೆ ಇವಳನ್ನೊಮ್ಮೆ ನೋಡಮ್ಮ
ನಿನ್ನ ಸೋದರಿಗೆ ಮಾತನಾಡಲು ಹೇಳಮ್ಮ
ಕಾರ್ಮೋಡದ ಕತ್ತಲೆಯಲ್ಲೂ ಸಹ
ಮಿಂಚಿನ ಹೊಳಪು ಮೂಡುವುದು
ಬೇಸಿಗೆಯ ಬಿಸಿಲ ಬೇಗೆಯಲ್ಲೂ
ತುಂತುರು ಮಳೆ ಬೀಳುವುದು
ಹೆಣ್ಣೇ ನಿನ್ನ ಮೊಗದಲ್ಲಿ
ನಾ ಸಣ್ಣ ನಗು ಕಾಣುವುದೆಂದು
ಚಳಿಯಲ್ಲಿ ಬೀಸುವ ತಣ್ಣನೆ ಗಾಳಿ
ಹೊತ್ತು ತಂದಿದೆ ನಿನ್ನೆಸರ ನನ್ನ ಬಳಿ
ನಿನ್ನ ಪ್ರೀತಿಯ ಸುಮಧುರ ಗಾನವ ಕೇಳಿ
ನನ್ನ ಮನ ಕಳೆದೊಗಿದೆ ಅದರಲಿ ತೇಲಿ
ಪ್ರಾಣಕ್ಕಿಂತ ಹೆಚ್ಚಾಗಿ ನಿನ್ನ ಪ್ರೀತಿಸುವೆ
ಪ್ರತಿ ಉಸಿರಲ್ಲೂ ನಿನ್ನೆಸರ ಜಪಿಸುವೆ
ಎದೆಬಡಿತವ ನಿನಗೆ ಮುಡಿಪಾಗಿಟ್ಟಿರುವೆ
ಮುದ್ದು ನಗುವೊಂದೆ ಸಾಕು ಜಗವ ಗೆಲ್ಲುವೆ
ನನ್ನ ಮುದ್ದು ಗುಣವತಿ
ನಿನ್ನ ಮಾತಿಲ್ಲದೆ ಬರಡಾಗಿದೆ ನನ್ನ ಸ್ಥಿತಿ

No comments:

Post a Comment