Tuesday, 6 January 2015

ಹೇ ಹುಡುಗಿ

ಹೇ ಹುಡುಗಿ, ಒಮ್ಮೆ ತಿರುಗಿ ನನ್ನ ನೋಡು
ಹೃದಯದ ತಾಳಕೆ ಪದಗಳ ಜೋಡಿಸಿ
ಬರೆದಿರುವೆ ನಿನಗಾಗಿ ಒಂದು ಹಾಡು

ನೀನೆ ನನ್ನ ಸ್ವಾತಿಯ ಮುತ್ತು
ಕೇಳದೆ ನಿನಗೆ ಪ್ರೀತಿಯ ಮಾತು
ಬಾಳೊಣ ಬಾ ಒಟ್ಟಿಗೆ ಬೆರೆತು
ಜಗವ ನಾವು ಮರೆತು

ನಿನ್ನ ನಗುವಲೆ ನಾ ಕಾಣುವೆ ಸ್ವರ್ಗ
ಸಾಕೆನಗೆ ನಿನ್ನೊಲುಮೆಯ ಸಂಗ
ನಿನಗೆಂದೆ ಇರುವುದು ನನ್ನ ಅಂತರಂಗ
ನೀನಿರದ ಬದುಕು ನನಗೆ ರಣರಂಗ

ಗಾಳಿಯಲಿ ಸೌಗಂಧ ಬೆರೆತಂತೆ
ಹಾಲು-ಜೇನುಗಳೆರಡು ಕಲೆತಂತೆ
ನಿನ್ನ ಕೂಡಿ ಬದುಕುವಾಸೆ ನನಗೆ
ಬೆಳದಿಂಗಳಾಗಿ ಬಾ ನನ್ನ ಬದುಕಿಗೆ

No comments:

Post a Comment