Tuesday, 6 January 2015

ಮಹಾರಾಣಿ

ನಿನ್ನ ನೆನಪುಗಳ ರಾಶಿಯಲಿ ನಾ ಕಳೆದೊಗಿರುವೆ
ಎಲ್ಲಿ ಎಂದು ಹುಡುಕಲಿ ನನಗೆ ತಿಳಿಯದಾಗಿದೆ
ಕನಸೆಂಬ ಮರಳುಗಾಡಲಿ ಅಲೆದಾಡುತಿರುವೆ
ನನ್ನ ಈ ಪಯಣಕೆ ಕೊನೆಯೆಂದು ತಿಳಿಯದೇ

ನನ್ನೆದೆಯ ಪ್ರೇಮದರಮನೆಗೆ ನೀ ಮಹಾರಾಣಿ
ನನ್ನ ಪ್ರತಿ ಮಿಡಿತವ ಆಳುತಿರುವ ಯಜಮಾನಿ
ಮಿಂಚಿನಂತಿರುವ ನಿನ್ನ ಕಣ್ಣೋಟದ ಆ ಬಾಣ
ಹೃದಯವನು ಗಟ್ಟಿಯಾಗಿ ತಾಕಿ ಮಾಡಿದೆ ನಿತ್ರಾಣ

ನಿನ್ನ ಪ್ರೀತಿಗಾಗಿ ನನ್ನ ಮನ ಮಾಡುತಿರುವ ಯುದ್ಧದಲಿ
ಸೋಲನೆಂದೂ ಕಾಣದೆ ನಾನಾಗ ಬಯಸುವೆ ಜಯಶಾಲಿ
ನಮ್ಮಿಬ್ಬರ ಬೇರ್ಪಡಿಸಲು ಶತ್ರುಗಳೆಷ್ಟೇ ಬಂದರೂ
ಕಾವಲಿಗೆ ನಾನಿರುವೆ ನೀನೆಂದೂ ನಗುತಿರು

No comments:

Post a Comment