ಅಕ್ಟೋಬರ್ ಆದರೆ ನೆಕ್ಸ್ಟು ನವೆಂಬರ್ರು
ಅದೇನೇ ನೋವಿದ್ರು ಸುಮ್ನೆ
ನಗ್ತಾ ಇರೂ
ಡಿಸೆಂಬರ್ ಕಳೆದರೆ ಹೊಸ ಜನವರಿ
ಹಳೆ ನೋವಿಗೆ ಮಾಡ್ಕೊಬೇಡ
ವರಿ
ವರ್ಷಕ್ಕೆ ಸಾಲುತಿಲ್ಲ ಹನ್ನೆರಡು ಮಂತು
ಕಟ್ಟಿ ಕಟ್ಟಿ ಸಾಕಾಯ್ತ
ಸಾಲದ ಕಂತು
ವೀಕೆಂಡ್ ಬರೀ ಸಾಟರ್ಡೇ
ಸಂಡೇ
ಮಧ್ಯೇ ಬೇಕು ಎಕ್ಸಟ್ರಾ
ಒನ್ ಡೇ
ಬೆಳಗ್ಗೆ ಎದ್ರೆ ಫೇಸ್ಬುಕ್ಕು
ವಾಟ್ಸ್ಯಾಪು
ಅಡಿಗೆಗೆ ಬೇಕೇ ಬೇಕು
ಉಪ್ಪು
ಕಾಗೆಯ ಬಣ್ಣ ಕಡು
ಕಾಡಿಗೆ ಕಪ್ಪು
ಯಾರಿಗೂ ಗೊತ್ತಿಲ್ಲ ಯಾವ್ದು ಸರಿ-ತಪ್ಪು
ಅದೆಷ್ಟೇ ಮಾಡಿದ್ರು ಕುಂತು
ಚಿಂತೆ
ಎಲ್ರುದೂ ಬರೀ ಅದೇ
ಅಂತೆ ಕಂತೆ
ಹೇಳೋರ್ ಕಮ್ಮಿ ಇಲ್ಲಿ
ಇದ್ದಿದ್ ಇದ್ದಂತೆ
ಜಗವಿದು ದೊಡ್ಡ ಹುಚ್ಚರ ಸಂತೆ
No comments:
Post a Comment