ಮಾಡೋಕ್
ಸದ್ಯಕೆ ಏನೂ ಕ್ಯಾಮೆ ಇಲ್ಲ
ಏನು
ಮಾಡೋದೋ ತಲೆಗೆ ಹೊಳಿತಿಲ್ಲ
ಸಾಕಾಯ್ತು
ನಂಗೂ ಸುಮ್ನೆ ಕುಂತು ಕುಂತು
ಮಳೆ
ಗಾಳಿಗೆ, ಇದ್ದ ಪವರ್ ಕೂಡ
ಹೋಯ್ತು
ಹೋದ್ರೆ ಹೋಯ್ತು
ಎಷ್ಟು ಅಂತ ನೋಡೊದು ಟಿವಿನಾ
ಅದು ಬಡ್ಕೊಳೋದು
ಕೇಳಿ ಕಚ್ದಂಗ್ ಆಗ್ತಿತ್ತು ಕಿವಿನಾ
ಬೆಳಗ್ಗೆ ಎದ್ರೆ
ದಿನಭವಿಷ್ಯ ಹೇಳೋರ್ ಕಾಟ
ಸಂಜೆ ಆದ್ರೆ
ಸೀರಿಯಲ್ ಅನ್ನೋ ದೊಂಬರಾಟ
ವಾರ ಪೂರ್ತಿ
ಇವರ್ದು ಇದೇ ಗೋಳು
ನ್ಯೂಸ್ ಅಲ್ಲಿ
ಬಿಡೋದ್ ಬರೀ ಓಳು
ಈ ಓಳು-ಗೋಳಿಗೆ
ಯಾವ್ದೆ ಮಿತಿ ಇಲ್ಲ
ಆದ್ರೂ ನೋಡ್ಲೇಬೇಕು
ಬೇರೆ ಗತಿ ಇಲ್ಲ
ಇನ್ನೂ ಹಿಂಗೆ
ಹುಚ್ಚುಚ್ಚಾಗಿ ಬರಿತಾ ಹೋದ್ರೆ
ಓದೋರು ಕರೆದು
ಕೆರದಲ್ಲಿ ಹೋಡಿತಾರೆ
ನಂಗ್ಯಾಕ್ ಬೇಕು
ಇವರ ಉಸಾಬರಿ
ಮಲಗಿ ನಿದ್ದೆ
ಮಾಡುವೆ ಕಣ್ಣುಉರಿ
No comments:
Post a Comment