Saturday, 13 September 2014

ನೀವು ಮಾಡುವ ಉದ್ಯೋಗದ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯಿರಲಿ

ಒಬ್ಬ ಸುಂದರ ಸನ್ಯಾಸಿನಿಯು ಲಿಫ್ಟ್'ಗಾಗಿ ದಾರಿಯಲ್ಲಿ ಕಾಯುತ್ತ ನಿತ್ತಿದ್ದಳು. ಆಗ ಅದೇ ದಾರಿಯಲ್ಲಿ ಹೋಗುತ್ತಿದ್ದ ಒಬ್ಬ ಪಾದ್ರಿ ಆಕೆಯನ್ನು ಡ್ರಾಪ್ ಮಾಡಲು ತನ್ನ ಕಾರಿನಲ್ಲಿ ಹತ್ತಿಸಿಕೊಳ್ಳುತ್ತಾನೆ. ಕಾರು ಹತ್ತಿದ ಸನ್ಯಾಸಿನಿ ತನ್ನ ನೀಳವಾದ ಸುಂದರ ಕಾಲುಗಳು ಕಾಣುವಂತೆ ತಾನು ಧರಿಸಿದ್ಧ ಗೌನನ್ನು ಮೊಣಕಾಲಿನಿಂದ ಸ್ವಲ್ಪ ಮೇಲಕ್ಕೆ ಸರಿಸಿ ಕುಳಿತುಕೊಳ್ಳುತ್ತಾಳೆ.
ಕಾರಿನಲ್ಲಿ ಚಲಿಸುತ್ತಿರುವಾಗ ಇನ್ನೇನು ಅಪಘಾತವಾಯ್ತು ಅನ್ನುವಷ್ಟರಲ್ಲಿ ಒಂದು ದೊಡ್ಡ ಅವಘಡದಿಂದ ಪಾರಾಗುವಂತೆ ಕಾರನ್ನು ನಿಯಂತ್ರಿಸಿದ ಪಾದ್ರಿ ಅದೇ ಸಮಯದಲ್ಲಿ ಗುಟ್ಟಾಗಿ ತನ್ನ ಕೈಯನ್ನು ಸನ್ಯಾಸಿನಿಯ ಕಾಲುಗಳ ಮೇಲೆ ಹಾಕುತ್ತಾನೆ. ಆಗ ಸನ್ಯಾಸಿನಿ, "ಫಾದರ್, 129ನೇ ಕೀರ್ತನೆಯನ್ನು ನೆನಪು ಮಾಡಿಕೊಳ್ಳಿ" ಎನ್ನುತ್ತಾಳೆ. ಹಾಗೆ ಹೇಳಿದ ತಕ್ಷಣವೇ ಪಾದ್ರಿಯು ತನ್ನ ಕೈಯನ್ನು ಹಿಂದೆಗೆಯುತ್ತಾನೆ. ಆದರೆ ಕಾರಿನ ಗೇರ್ ಬದಲಾಯಿಸುವ ನೆಪದಲ್ಲಿ ಪಾದ್ರಿಯು ಮತ್ತೊಮ್ಮೆ ತನ್ನ ಕೈಯನ್ನು ಆಕೆಯ ಕಾಲುಗಳ ಮೇಲೆ ಹಾಕುತ್ತಾನೆ. ಸನ್ಯಾಸಿನಿಯು ಆಗಲೇ ಹೇಳಿದಂತೆಯೇ, " ಫಾದರ್, 129ನೇ ಕೀರ್ತನೆಯನ್ನು ನೆನಪು ಮಾಡಿಕೊಳ್ಳಿ" ಎನ್ನುತ್ತಾಳೆ. ಅದಕ್ಕೆ ಪಾದ್ರಿಯು, "ತಪ್ಪಾಯ್ತು ದಯವಿಟ್ಟು ಕ್ಷಮಿಸಿ" ಎಂದು ಕ್ಷಮೆಯಾಚಿಸುತ್ತಾನೆ. ಅಷ್ಟರಲ್ಲಿ ಸನ್ಯಾಸಿನಿ ಹೋಗಬೇಕಿದ್ದ ಜಾಗ ಬರುತ್ತದೆ ಆಕೆ ಕಾರಿನಿಂದ ಇಳಿದು ಕೋಪ ಮಾಡಿಕೊಂಡು ಹೊರಟು ಹೋಗುತ್ತಾಳೆ. ನಂತರ ಪಾದ್ರಿಯು ತುಂಬಾ ವೇಗವಾಗಿ ತನ್ನ ಚರ್ಚ್'ಗೆ ತೆರಳಿ 129ನೇ ಕೀರ್ತನೆಯಲ್ಲಿ ಏನಿದೆ ಎಂದು ಕುತೂಹಲದಿಂದ ನೋಡುತ್ತಾನೆ.
ಆ 129ನೇ ಕೀರ್ತನೆಯಲ್ಲಿ, "ಮತ್ತಷ್ಟು ಮುಂದಕ್ಕೆ ಹೋಗಿ, ನೀವು ವೈಭವವನ್ನು ಕಾಣುತ್ತೀರಿ" ಎಂದು ಬರೆದಿತ್ತು.
ಕಥೆಯ ನೀತಿ:- "ನೀವು ಮಾಡುವ ಕೆಲಸದ ಬಗ್ಗೆ ನಿಮಗೆ ಸರಿಯಾದ ಸಂಪೂರ್ಣ ಮಾಹಿತಿ ಇಲ್ಲವಾದಲ್ಲಿ ನೀವು ಅತ್ಯದ್ಭುತ ಅವಕಾಶಗಳಿಂದ ವಂಚಿತರಾಗುತ್ತೀರಿ"

No comments:

Post a Comment