1) ಹಿಟ್ಲರ್ ನಾಲ್ಕು ವರ್ಷದವನಿದ್ದಾಗ ಒಬ್ಬ ಪಾದ್ರಿಯು
ಆತನನ್ನು ನೀರಿನಲ್ಲಿ ಮುಳುಗಿ ಸಾಯುವುದರಿಂದ ರಕ್ಷಿಸಿದ್ದ.
2) ಹಿಟ್ಲರ್ ಮೊದಲು ಪ್ರೀತಿಸಿದ್ದು ಯಹೂದಿ ಹುಡುಗಿಯನ್ನು.
ಆದರೆ ಧೈರ್ಯ ಸಾಲದೆ ಅದನ್ನು ಆಕೆಗೆ ತಿಳಿಸಲಿಲ್ಲ.
3) ಆಧುನಿಕ ಇತಿಹಾಸದಲ್ಲಿ ಮೊದಲ ಬಾರಿಗೆ ಧೂಮಪಾನ ವಿರೋಧಿ ಚಳುವಳಿಯ ನೇತೃತ್ವ ವಹಿಸಿದ್ದು ಹಿಟ್ಲರ್.
4) ಮೊದಲ ಮಹಾಯುದ್ಧದಲ್ಲಿ ಒಬ್ಬ ಬ್ರಿಟಿಷ್ ಸೈನಿಕ ಗಾಯಗೊಂಡಿದ್ದ
ಜೆರ್ಮನ್ ಸೈನಿಕನೊಬ್ಬನ ಜೀವ ಉಳಿಸಿದ್ದ. ಜೀವದಾನ ಪಡೆದ ಆ ಸೈನಿಕ ಮತ್ಯಾರು ಅಲ್ಲ ಅಡಾಲ್ಫ್ ಹಿಟ್ಲರ್.
5) ಹಿಟ್ಲರ್ ಒಂದೇ ವೃಷಣ (testicle)
ಹೊಂದಿದ್ದ.
6) ಹಿಟ್ಲರ್ ಸಸ್ಯಹಾರಿಯಾಗಿದ್ದ ಹಾಗೂ ಪ್ರಾಣಿಹಿಂಸೆಯ
ವಿರುದ್ಧ ಹಾಲವಾರು ಕಾನೂನುಗಳನ್ನು ಹೊರಡಿಸಿದ್ದ.
7) ಹಿಟ್ಲರ್ ಜೈಲಿನಲ್ಲಿದ್ದಾಗ ಮರ್ಸಿಡಿಸ್ ಕಂಪನಿಗೆ
ಒಂದು ಕಾರನ್ನು ಸಾಲ ಕೇಳಿ ಪತ್ರ ಬರೆದಿದ್ದ.
8) ಹಿಟ್ಲರನ ಕುಟುಂಬದ ಆರ್ಥಿಕ ಸಂಕಷ್ಟಗಳ ಕಾರಣಗಳಿಂದ ಯಹೂದಿ ವೈದ್ಯನೊಬ್ಬ
ಅವರಿಗೆ ಉಚಿತವಾಗಿ ಚಿಕೆತ್ಸೆ ನೀಡುತಿದ್ದ.
9) ಹಿಟ್ಲರ್ ಒಂದು ಕಲಾ ಶಾಲೆಯಿಂದ ತಿರಸ್ಕರಿಸಲ್ಪಟ್ಟಿದ್ದನು.
10) ಹಿಟ್ಲರ್ ಸಿಹಿ ತಿನಿಸುಗಳನ್ನು ಹೆಚ್ಚಾಗಿ
ಸೇವಿಸುತ್ತಿದ್ದನು.
11) ಹಿಟ್ಲರ್ ಕೊಕೇನ್ ದಾಸನಾಗಿದ್ದನು. ಅವನು ದಿನಕ್ಕೆ ಎರಡು ಬಾರಿ
ಇನ್ಹೇಲರ್ ಮೂಲಕ ಕೊಕೇನ್ ಸೇವಿಸುತ್ತಿದ್ದನು ಹಾಗೂ ಕೊಕೇನಿಂದ
ಮಾಡಿದ ಕಣ್ಣಿನ ಡ್ರಾಪ್ಸ್ ಬಳಸುತ್ತಿದ್ದನು.
12) ಹಿಟ್ಲರ್'ಗೆ ಡಿಸ್ನಿ ಕಾರ್ಟೂನ್ ಅಂದರೆ ತುಂಬಾ ಪ್ರೀತಿ.
13) ಹಿಟ್ಲರ್ ದಂತವೈದ್ಯರನ್ನು ದ್ವೇಷಿಸುತ್ತಿದ್ದನು.
14) ಹಿಟ್ಲರ್'ಗೆ ತನ್ನ ಮೀಸೆ ಅಂದ್ರೆ ತುಂಬಾ ಪ್ರೀತಿ
ಹಾಗೂ ಆತ ಯಾವಾಗಲೂ "ಮೀಸೆ ಬಿಡುವುದು ಒಂದು ಪ್ರವೃತ್ತಿಯಾಗಿಲ್ಲ ಆದ್ರೆ ಇನ್ನು ಮುಂದೆ ತಾನು
ಮೀಸೆ ಬಿಟ್ಟಿರುವ ಕಾರಣ ಅದು ಪ್ರವೃತ್ತಿಯಾಗಲಿದೆ" ಎಂದು ಹೇಳುತ್ತಿದ್ದನು.
15) ಹಿಟ್ಲರ್ ಕ್ರೋನಿಕ್ ಫ್ಲಾಟುಲೆನ್ಸ್ ಎಂಬ ಖಾಯಿಲೆಯಿಂದ
ಬಳಲುತ್ತಿದ್ದನು. ಮತ್ತು ಅದಕ್ಕಾಗಿ 28 ವಿವಿಧ ಬಗೆಯ ಔಷಧಗಳನ್ನು ತೆಗೆದುಕೊಂಡಿದ್ದನು.
No comments:
Post a Comment