Friday, 19 September 2014

ಷೇರ್ ಬಗ್ಗೆ ಶೇರ್ ಮಾಡಿಕೊಳ್ಳಿ...!

ಹೆಂಡತಿಯೂ ಸ್ನಾನ ಮುಗಿಸಿ ಬರುತ್ತಿಂದತೆಯೇ ಗಂಡನೂ ಸಹ ಸ್ನಾನ ಮಾಡಲೂ ಅವಸರವಾಗಿ ಬಾತ್'ರೂಮ್'ಗೆ ಹೋಗುತ್ತಾನೆ. ಅಷ್ಟರಲ್ಲೇ ಯಾರೋ ಮನೆಯ ಬೆಲ್ ಮಾಡುತ್ತಾರೆ. ಹೆಂಡತಿಯು ಅವಸರವಾಗಿ ಒಂದು ಟವೆಲ್ ಸುತ್ತಿಕೊಂಡು ಬಾಗಿಲು ತೆರೆಯಲು ಕೆಳಗೆ ಬರುತ್ತಾಳೆ. ಬಾಗಿಲು ತೆರೆದು ನೋಡಿದಾಗ ಹೊರಗಡೆ ಪಕ್ಕದ ಮನೆಯವನು ಎದುರಿಗಿರುತ್ತಾನೆ. ಈಕೆ ವಿಷಯವೇನೆಂದು ಕೇಳುವ ಮೊದಲೇ ಅವನು, "ನೀವು ನಿಮ್ಮ ಮೇಲಿರುವ ಟವೆಲ್ ತೆಗೆದರೆ ನಾನು ನಿಮಗೆ ಎಂಟು ಸಾವಿರ ರುಪಾಯಿ ಕೊಡುತ್ತೇನೆ" ಎಂದು ಹೇಳುತ್ತಾನೆ. ಸ್ವಲ್ಪ ಸಮಯ ಯೋಚಿಸಿದ ನಂತರ ಆಕೆ ಟವೆಲ್ ತೆಗೆದು ಬೆತ್ತಲೆಯಾಗಿ ಆತನ ಮುಂದೆ ನಿಲ್ಲುತ್ತಾಳೆ.

ಕೆಲವು ಸೆಕೆಂಡ್'ಗಳ ಕಾಲ ಆಕೆಯನ್ನು ನೋಡಿದ ಅವನು ಅವಳ ಕೈಗೆ ಎಂಟು ಸಾವಿರ ರುಪಾಯಿ ಕೊಟ್ಟು ಅಲ್ಲಿಂದ ಹೋಗುತ್ತಾನೆ. ಅವಳು ಆ ದುಡ್ಡನ್ನು ತೆಗೆದುಕೊಂಡು ಬಾಗಿಲು ಹಾಕಿ ಟವೆಲ್ ಸುತ್ತಿಕೊಂಡು ಮೇಲೆ ಹೋಗುತ್ತಾಳೆ. ಅಷ್ಟರಲ್ಲೇ ಸ್ನಾನ ಮುಗಿಸಿ ಈಚೆ ಬಂದ ಗಂಡ, "ಯಾರು ಬಂದಿದ್ದು?" ಎಂದು ಕೇಳುತ್ತಾನೆ. "ಪಕ್ಕದ ಮನೆಯವನು", ಎಂದು ಹೆಂಡತಿ ಹೇಳುತ್ತಲೆ ಗಂಡ, "ಓ...! ಹೌದಾ...!, ನಾನು ಅವನಿಗೆ ಸಾಲ ಕೊಟ್ಟಿದ್ದ ಎಂಟು ಸಾವಿರ ರುಪಾಯಿ ಬಗ್ಗೆ ಏನಾದರು ಹೇಳಿದ್ನಾ...?" ಎಂದು ಕೇಳುತ್ತಾನೆ.


ಕಥೆಯ ನೀತಿ:- "ನೀವು ನಿಮ್ಮ ಷೇರುದಾರರ ಜೊತೆ ಕ್ರೆಡಿಟ್ ಮತ್ತು ನಿರ್ಣಾಯಕ ವಿಷಯಗಳನ್ನು ಸಮಯಕ್ಕೆ ಸರಿಯಾಗಿ ಹಂಚಿಕೊಂಡಲ್ಲಿ ಅನಗತ್ಯ ಅಪಾಯಗಳಿಂದ ದೂರ ಉಳಿಯಬಹುದು"

No comments:

Post a Comment