ತುಂಬಾ ಒಳ್ಳೆಯ ಸ್ನೇಹಿತರಾಗಿದ್ದ
ಕೋಳಿ ಮತ್ತು ಗೂಳಿ ಇಬ್ಬರು ತಮ್ಮ ಇಷ್ಟಗಳ ಬಗ್ಗೆ ಮಾತನಾಡುತ್ತಿರುವಾಗ ಕೋಳಿಯು, "ನನಗೆ ಆ ಮರದ
ತುದಿಗೆ ಏರಬೇಕೆಂಬ ಬಯಕೆ. ಆದರೆ, ನನಗೆ ಅಷ್ಟು ಶಕ್ತಿ ಇಲ್ಲ" ಎಂದು ಅಲ್ಲಿದ್ದ ಒಂದು ಮರವನ್ನು
ತೋರಿಸಿ ಹೇಳಿತ್ತದೆ. ಅದಕ್ಕೆ ಗೂಳಿಯು, "ನನ್ನ ಸಗಣಿಯಲ್ಲಿ ಸಾಕಷ್ಟು ಪೌಷ್ಟಿಕಾಂಶಗಳಿರುವುದರಿಂದ
ನೀನು ಏಕೆ ಅದನ್ನು ತಿಂದು ಶಕ್ತಿವಂತನಾಗಬಾರದು" ಎಂದು ಸಲಹೆ ನೀಡಿತ್ತದೆ. ಗೂಳಿಯ ಈ ಮಾತಿನಿಂದ
ಸಾಕಷ್ಟು ಉತ್ಸುಕವಾದ ಕೋಳಿಯು ಅಲ್ಲೆ ಇದ್ದ ತಿಪ್ಪೆಯ ಬಳಿ ಹೋಗಿ ಸಾಕಾಗುವಷ್ಟು ಸಗಣಿಯನ್ನು ತಿಂದು ಮರ ಹತ್ತಲು ಪ್ರಯತ್ನಿಸಿ
ಮರದ ಮೊದಲ ಕೊಂಬೆಯನ್ನು ಏರುವಲ್ಲಿ ಸಫಲವಾಯಿತು. ಮಾರನೆಯ ದಿನ ಮತ್ತಷ್ಟು ಸಗಣಿಯನ್ನು ತಿನ್ನುವ ಮೂಲಕ
ಎರಡನೆಯ ಕೊಂಬೆಯನ್ನೇರಿತು. ಹೀಗೆ ಪ್ರತಿದಿನ ಪ್ರಯತ್ನಿಸುತ್ತಾ ಕಡೆಯದಾಗಿ ನಾಲ್ಕನೆಯ ದಿನದಂದು ಕೋಳಿಯು
ಮರದ ತುದಿಯನ್ನು ಏರುವಲ್ಲಿ ಯಶಸ್ವಿಯಾಯಿತು. ಮರದ ತುದಿ ಏರುತ್ತಿದ್ದಂತೆ ಆ ಕೋಳಿ ಒಬ್ಬ ಬೇಟೆಗಾರನ
ಕಣ್ಣಿಗೆ ಬಿದ್ದು ಅವನ ಗುಂಡೇಟಿಗೆ ಬಲಿಯಾಯಿತು.
ಕಥೆಯ ನೀತಿ:-"ಕೆಲವೊಮ್ಮೆ ಅರ್ಥಹೀನ ಕೆಲಸಗಳನ್ನು ಮಾಡುವುದರಿಂದ ನಾವು ಉನ್ನತ ಸ್ಥಾನಕ್ಕೇರಬಹುದು.
ಆದರೆ, ಆ ಕೆಲಸಗಳು ಎಂದಿಗೂ ನಮ್ಮನ್ನು ಅದೇ ಸ್ಥಾನದಲ್ಲಿ ಮುಂದುವರೆಯುವಂತೆ ಮಾಡಲಾರವು"
No comments:
Post a Comment